ಪೊದಾರ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಡುಪಿ:  ಪೊದಾರ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ಯೋಧ,ರೈಲ್ವೇ ಯಾತ್ರಿಕರ ಸಂಘದ ಅಧ್ಯಕ್ಷರಾದ ಆರ್.ಎಲ್.ಡಾಯಸ್  ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಎಮ್.ಎಸ್.ಹಿರೇಮಠ ಸ್ವಾತಂತ್ರ್ಯೋತ್ಸವದ ಕುರಿತು ಮಾಹಿತಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿ ಪ್ರಥಮ್ ನಿರೂಪಿಸಿದರು. ವಿದ್ಯಾರ್ಥಿಗಳಾದ ರಶಾದ್ ಸ್ವಾಗತಿಸಿ, ಸುಪ್ರೀತ್ ವಂದಿಸಿದರು.

ಕುಂದಾಪುರ: ನಟ ರಕ್ಷಿತ್ ಶೆಟ್ಟಿ ಕುಟುಂಬ ಕೊಲ್ಲೂರು ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಕುಂದಾಪುರ: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಗುರುವಾರ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಚಂಡಿಕಾಹೋಮದಲ್ಲಿ  ರಕ್ಷಿತ್ ಶೆಟ್ಟಿ, ಕುಟುಂಬದ ಸದಸ್ಯರ ಜೊತೆ ಭಾಗಿಯಾದರು. ಕುಟುಂಬದ ಶ್ರೇಯೋಭಿವೃದ್ಧಿಗಾಗಿ  ಈ  ಪೂಜೆ ಸಲ್ಲಿಕೆಯಾಗಿದ್ದು ಮುಂದಿನ ಚಿತ್ರಕ್ಕೂ ಯಶಸ್ಸು ಸಿಗುವಂತೆ ರಕ್ಷಿತ್ ಪ್ರಾರ್ಥನೆಗೈದಿದ್ದಾರೆ. ಇದೇ ಸಂದರ್ಭದಲ್ಲಿ  ರಕ್ಷಿತ್ ಗೆ ದೇವಸ್ಥಾನದ ಕಡೆಯಿಂದ ಗೌರವ ಸಲ್ಲಿಸಲಾಯಿತು.

ಯಡಿಯೂರಪ್ಪನವರ ಸಂಪುಟದಲ್ಲಿ ಬಂಟ ಸಮುದಾಯವನ್ನು ಕಡೆಗಣಿಸಲಾಗಿದೆ : ಯುವ ಬಂಟರ ಸಂಘ ಆಕ್ರೋಶ

ಕುಂದಾಪುರ: ರಾಜ್ಯದಲ್ಲಿ ಬಂಟ ಸಮುದಾಯದ ಐವರು ಅಭ್ಯರ್ಥಿಗಳು ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ರಚನೆಯಲ್ಲಿ ಬಂಟ್ ಸಮುದಾಯದ ಶಾಸಕರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು ಇದು ಬಂಟ ಸಮುದಾಯಕ್ಕೆ ಸರ್ಕಾರ ಮಾಡಿದ ಅನ್ಯಾಯ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಂಟ್ ಸಮುದಾಯದ ಹಿರಿಯ ಮುಖಂಡ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಅವಕಾಶ ಕೊಡದಿದ್ದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಸುನೀಲ್ ಹೇರಿಕುದ್ರು ಆರೋಪಿಸಿದ್ದಾರೆ. ಈ ಬಗ್ಗೆ […]

ಪ್ರಧಾನಿಯವರೇ ನೆರೆ ಸಂತ್ರಸ್ತರ ಕಣ್ಣೀರೊರೆಸಿ: ಕುಂದಾಪುರದಲ್ಲಿ ಕೇಂದ್ರದ ವಿರುದ್ದ ಮಾಜಿ ಸಚಿವ ರಮನಾಥ ರೈ ವಾಗ್ದಾಳಿ.

ಕುಂದಾಪುರ: ಭೀಕರ ಪ್ರವಾಹ ಬಂದು ಜನರೆಲ್ಲರೂ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಭೂತಾನ್ ಮಕ್ಕಳಿಗೆ ಬೆನ್ನು ತಟ್ಟುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕಣ್ಣೀರೊರೆಸುವ ಕೆಲಸ ಮಾಡಬೇಕಿತ್ತು. ನಿಜವಾಗಿಯೂ ಕೇಂದ್ರ ಸರ್ಕಾರಕ್ಕೆ ನೆರೆ ಸಂತ್ರಸ್ತ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ್ ರೈ ವಾಗ್ದಾಳಿ ನಡೆಸಿದರು. ಅವರು ತಾಲೂಕಿನಲ್ಲಿ ನೆರೆಯಿಂದುಂಟಾದ ಹಾನಿಗಳ ಬಗ್ಗೆ ಕುಂದಾಪುರ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ […]