ಆ. 23 ಮತ್ತು 24: ಕೃಷ್ಣನ  ಊರಲ್ಲಿ ಅಷ್ಟಮಿ ಸಂಭ್ರಮ: ಬಗೆ ಬಗೆ ಕಾರ್ಯಕ್ರಮ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಆ. 23 ಮತ್ತು 24ರಂದು ಕೃಷ್ಣಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ ಸಂಭ್ರಮದಿಂದ ನಡೆಯಲಿದ್ದು ವಿವಿಧ ಕಾರ್ಯಕ್ರಮ ವೈವಿದ್ಯಗಳನ್ನು ಆಯೋಜಿಸಲಾಗಿದೆ. ಅಷ್ಟಮಿಯ ವಿಶೇಷ ಕಾರ್ಯಕ್ರಮಗಳ ಪೂರ್ತಿ ವಿವರ  ಇಲ್ಲಿದೆ. ಏನೇನ್ ವಿಶೇಷ? ಆ. 24ರಂದು ಉಡುಪಿ ಕನಕ ಸಾಂಸ್ಕೃತಿಕ ವೇದಿಕೆಯ ಮಧುಸೂದನ ಪೂಜಾರಿ ನೇತೃತ್ವದಲ್ಲಿ ಪೂರ್ವ ಮುಂಬಯಿ ಸಾಂತಾಕ್ರೂಸ್‌ ಬಾಲಮಿತ್ರ ಮಂಡಳಿಯ ಅಲಾರೆ ಗೋವಿಂದ ತಂಡ 50 ಅಡಿ ಎತ್ತರದಲ್ಲಿರುವ ಮಡಿಕೆ ಒಡೆಯಲಿದೆ. ಬೆಳಗ್ಗೆ 9ಕ್ಕೆ ಶ್ರೀಕೃಷ್ಣ ಮಠದ ವಸಂತ ಮಂಟಪದಲ್ಲಿ ಚಾಲನೆಗೊಂಡು, […]

ಉಡುಪಿ:ಐ.ಟಿ.ಐ ಪ್ರವೇಶಾತಿಗೆ ಅರ್ಜಿ ಆಹ್ವಾನ

ಉಡುಪಿ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಣಿಪಾಲ, ಉಡುಪಿ (ಐ.ಟಿ.ಐ) ಸಂಸ್ಥೆಯಲ್ಲಿ, 2019 ನೇ ಸಾಲಿನ ಪ್ರವೇಶಕ್ಕಾಗಿ ಮೆಕ್ಯಾನಿಕ್ ಡೀಸೆಲ್, ಸಿಓಪಿಎ (ಕಂಪ್ಯೂಟರ್) ಮತ್ತು ಫಿಟ್ಟರ್ ಐ.ಟಿ.ಐ ಕೋರ್ಸ್‍ಗಳಲ್ಲಿ ಕೆಲವು ಸ್ಥಾನಗಳು ಬಾಕಿ ಉಳಿದಿದ್ದು, ಆ ವೃತ್ತಿಗಳಲ್ಲಿ ಪ್ರವೇಶ ಬಯಸುವ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಅಂತಿಮ ಸುತ್ತಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಣಿಪಾಲದ ಪ್ರಗತಿನಗರದಲ್ಲಿರುವ ಐ.ಟಿ.ಐ ಕಚೇರಿಗೆ ಖುದ್ದಾಗಿ ದಾಖಲಾತಿಗಳೊಂದಿಗೆ ಹಾಜರಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: 0820-2986145 […]

ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರಲ್ಲಿ ಅಕ್ಷಯ್ ಗೆ 4 ನೇ ಸ್ಥಾನ:

ಉಡುಪಿ: ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಭಾರತದ  ಬಾಲಿವುಡ್ ನಟ ಆಕ್ಷಯ್ ಕುಮಾರ್ 4ನೇ  ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಖ್ಯಾತ ನಟ ಜಾಕಿಚಾನ್ ಅವರನ್ನು ಹಿಂದಿಕ್ಕಿ ಅಕ್ಷಯ್ ಈ ಸ್ಥಾನ ಪಡೆದಿದ್ದಾರೆ. ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್ 2019ರ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು  ಫೋರ್ಬ್ಸ್ ಪಟ್ಟಿಯ ಪ್ರಕಾರ ಟಾಪ್ ಹತ್ತರ ಪಟ್ಟಿಯಲ್ಲಿ ಜಾಗ ಪಡೆದ ಭಾರತದ ಏಕೈಕ ನಟ ಅಕ್ಷಯ್ ಕುಮಾರ್. ನೂರು ಕೋಟಿ ಕ್ಲಬ್ ಸೇರಿದ ಮಿಷನ್ […]

ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ

ಉಡುಪಿ: ಕರ್ನಾಟಕ ಸರಕಾರ ಮತ್ತು ಭಾರತ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಶಾಲೆಗಳಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ. 1ನೇ ತರಗತಿಯಿಂದ 10ನೇ ತರಗತಿಯವರೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆನ್‍ಲೈನ್ ಮೂಲಕ  ಸಲ್ಲಿಸಬೇಕು. ವಿದ್ಯಾರ್ಥಿಯ ಪಾಲಕರ ವಾರ್ಷಿಕ ಆದಾಯ 1 ಲಕ್ಷ ರೂ ಒಳಗಿರಬೇಕು ಹಾಗೂ ಹೊಸ/ನವೀಕೃತ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿರುತ್ತದೆ. ದಾಖಲೆಗಳು […]

ಶ್ರೀ ಕೃಷ್ಣ ಮಠ: ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹರಿಕಥಾ ಪರಿಷತ್ತು(ರಿ)ಮಂಗಳೂರು,ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು(ರಿ)ಬೆಂಗಳೂರು ಮತ್ತು ಶ್ರೀಹಂಡೆದಾಸ ಪ್ರತಿಷ್ಟಾನ(ರಿ)ಕಾರ್ಕಳ ಇವರ ಸಂಯುಕ್ತ ಸಹಯೋಗದೊಂದಿಗೆ ಪ್ರಸ್ತುತಪಡಿಸುವ 60 ದಿನಗಳ ಪರ್ಯಂತ ಹರಿಕಥಾ ಜ್ಞಾನ ಯಜ್ಞದ ಅಂಗವಾಗಿ ತುಮಕೂರಿನ ಕು.ಅನುಷಾ ಇವರಿಂದ ‘ಶ್ರೀನಿವಾಸ ಕಲ್ಯಾಣ’ ಎಂಬ ಕಥಾಭಾಗದ ಹರಿಕಥೆ ನಡೆಯಿತು.