ಉಡುಪಿ: ಮುಖ್ಯಮಂತ್ರಿ ನೆರೆಪರಿಹಾರ ನಿಧಿಗೆ ದೇಣಿಗೆ ಹಸ್ತಾಂತರ
ಉಡುಪಿ: ರಾಜ್ಯಾದ್ಯಂತ ದೊಡ್ಡ ಸಂಕಷ್ಟ ತಂದೊಡ್ಡಿದ್ದ ಈ ವರ್ಷದ ಭಾರಿ ಮಳೆಯಿಂದ ಉಂಟಾದ ನೆರೆಯು ಹಲವಾರು ಕುಟುಂಬಗಳನ್ನು ಬೀದಿಗೆ ತಂದು ಲಕ್ಷಾಂತರ ಮಂದಿಯ ಬದುಕನ್ನೇ ಆಪೋಷನ ಮಾಡಿದ್ದು, ಈ ಸಂದರ್ಭದಲ್ಲಿ ತಮ್ಮಿಂದಾದ ಸಹಕಾರ ನೀಡುವ ಮನಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ಮತ್ತು ದುಃಖದಲ್ಲಿರುವವರ ಕಣ್ಣೀರೊರೆಸುವ ಕೆಲಸದಲ್ಲಿ ಅಳಿಲಸೇವೆ ಮಾಡುವುದಕ್ಕಾಗಿ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜುಗಳಲ್ಲಿನ ಎನ್.ಎಸ್.ಎಸ್ ಘಟಕಗಳು ಒಟ್ಟಾಗಿ ಕಾರ್ಯೋನ್ಮುಖರಾದರು. ಸ್ವಯಂಸೇವಕರು ತಮ್ಮಿಂದಾದ ಸಹಾಯ ಮಾಡೋಣವೆಂದು ಪಣತೊಟ್ಟಿದ್ದರು. ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಅಗತ್ಯ ವಸ್ತುಗಳನ್ನು ಪೂರೈಸಿದರೆ, ಇನ್ನು […]
ಲೋಕ ಅದಾಲತ್ ಮೂಲಕ ಉಚಿತ ನ್ಯಾಯ: ಕಾವೇರಿ
ಉಡುಪಿ: ನ್ಯಾಯದಿಂದ ವಂಚಿತರಾದ, ಆರ್ಥಿಕವಾಗಿ ಹಿಂದುಳಿದವರಿಗೆ ಲೋಕ ಅದಾಲತ್ ಮೂಲಕ ಉಚಿತವಾಗಿ ನ್ಯಾಯ ಒದಗಿಸಿಕೊಡುವ ವ್ಯವಸ್ಥೆ ಇದ್ದು, ಈ ಬಗ್ಗೆ ಅರಿವು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ತಿಳಿಸಿದ್ದಾರೆ. ಅವರು ಬುಧವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ವಕೀಲರ ಸಂಘ (ರಿ) ಉಡುಪಿ ಮತ್ತು ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಶ್ಯಾಮಿಲಿ ಇನ್‍ನ ಬ್ಯಾಂಕ್ […]
ಪ್ರೈಮ್: ಬ್ಯಾಂಕಿಂಗ್ ನೇಮಕಾತಿ ಮಾದರಿ ಸಂದರ್ಶನ ಕಮ್ಮಟ
ಉಡುಪಿ: ಪ್ರೈಮ್ ಸಂಸ್ಥೆಯು ಕರ್ಣಾಟಕ ಬ್ಯಾಂಕ್ ಕ್ಲರಿಕಲ್ ವಿಭಾಗದಲ್ಲಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರೈಮ್ ಸಂಸ್ಥೆಯ 33 ಅಭ್ಯರ್ಥಿಗಳಿಗೆ ಮುಂದಿನ ಹಂತದ ವೈಯಕ್ತಿಕ ಸಂದರ್ಶನ ಪರೀಕ್ಷೆಯನ್ನು ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಎದುರಿಸಲು ಬೇಕಾದ ಮಾರ್ಗದರ್ಶನ ಕಾರ್ಯಾಗಾರ ಕಾರ್ಯಕ್ರಮ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಗಳಾಗಿ ಗುರುಪ್ರಸಾದ್, ಶೈಲೇಸ್, ಎ.ಪಿ.ಭಟ್ ಭಾಗವಹಿಸಿ, ಸಂದರ್ಶನದಲ್ಲಿ ಯಶಸ್ಸು ಗಳಿಸಲು ನೆರವಾಗುವ ಕೌಶಲಗಳ ವಿವರ ಹಾಗೂ ಯಶಸ್ವೀ ಸಂದರ್ಶನದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಪ್ರತೀ ಅಭ್ಯರ್ಥಿಗಳಿಗೂ 30ನಿಮಿಷದ […]
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ
ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಮಾನವ ಹಕ್ಕು ಧಾರ್ಮಿಕ ಸೌಹಾರ್ದತಾ ಘಟಕ ಇದರ ವತಿಯಿಂದ ಸದ್ಭಾವನಾ ದಿನಾಚರಣೆ ಹಾಗೂ ಕೋಮು ಸೌಹಾರ್ದ ಪಾಕ್ಷಿಕವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಎಂ ಆನಂದ್ ಮಾತನಾಡಿ, ಸೌಹಾರ್ದತೆಯ ಬದುಕು ಜೀವನದಲ್ಲಿ ಬಹಳ ಮುಖ್ಯವಾದುದು, ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಪರಸ್ಪರ ಸಮಾನತೆ ಹಾಗೂ ಹೊಂದಾಣಿಕೆಯ ಬದುಕು ಸಮಾಜದಲ್ಲಿ ಅಗತ್ಯವಾದುದು ಹಾಗಾಗಿ ಸೌಹಾರ್ದತಾ ಬದುಕು […]
ಗುಣಮಟ್ಟದ ಶಿಕ್ಷಣದಲ್ಲಿ ಅಂತರಾಷ್ಟ್ರೀಯ ಅವಕಾಶಗಳಿವೆ: ಡಾ| ಬಲ್ಲಾಳ್
ಉಡುಪಿ: ಗುಣಮಟ್ಟದ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಅವಕಾಶಗಳಿವೆ ಎಂದು ಮಣಿಪಾಲ ಮಾಹೆ ವಿ.ವಿ.ಯ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಹೇಳಿದರು. ಮಣಿಪಾಲದಲ್ಲಿ ಶುಕ್ರವಾರ ಮಣಿಪಾಲ್ ಯುನಿವರ್ಸಲ್ ಪ್ರಸ್‌ನ (ಎಂಯುಪಿ) 155ನೇ ಪ್ರಕಾಶನವಾದ ‘ಇಂಟರ್‌ನ್ಯಾಶನಲೈಸೇಶನ್ ಆಫ್ ಹೈಯರ್ ಎಜುಕೇಶನ್: ದಿ ಡೈನಾಮಿಕ್ಸ್ ಆಫ್ ಎಜುಕೇಶನಲ್ ಇಕಾಲಜಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣದ ಅಂತಾರಾಷ್ಟ್ರೀಕರಣದ ಪಾತ್ರವನ್ನು ಪುಸ್ತಕ ಪ್ರತಿಫಲಿಸುತ್ತಿದೆ. ಇದಕ್ಕೆ ಪೂರಕವಾಗಿ ವಿದೇಶಗಳ ವಿ.ವಿ.ಗಳೊಂದಿಗೆ ವಿನಿಮಯ, ಟ್ವಿನ್ನಿಂಗ್ ಕಾರ್ಯಕ್ರಮಗಳು, ವಿದ್ಯಾರ್ಥಿ ವಿನಿಮಯ ಇತ್ಯಾದಿ ಕಾರ್ಯಕ್ರಮಗಳನ್ನು ಮಾಹೆ ವಿ.ವಿ. ಜಾರಿಗೊಳಿಸಿದೆ ಎಂದವರು […]