ಆ.24 ರಿಂದ ಸಿದ್ಧಕಟ್ಟೆಯಲ್ಲಿ ಆನಂದ ಶಿಬಿರ

ಬಂಟ್ವಾಳ: ಆರ್ಟ್ ಆಫ್ ಲಿವಿಂಗ್ ಸಿದ್ಧಕಟ್ಟೆ ಘಟಕದ ವತಿಯಿಂದ  ಆ.24 ರಿಂದ ಆ29  ರ ವರೆಗೆ ಆನಂದ ಶಿಬಿರ ಸಿದ್ಧಕಟ್ಟೆ ಜೈನ ಬಸದಿಯ ‘ಸ್ವಸ್ತಿಕ್ ಸಭಾಭವನ’ ದಲ್ಲಿ  ನಡೆಯಲಿದೆ. ಯೋಗ ತರಬೇತಿಯನ್ನು ಯೋಗ ಗುರುಗಳಾದ  ಅನಿತಾ ಮುರಳಿಕೃಷ್ಣ ನಡೆಸಿಕೊಡಲಿದ್ದಾರೆ. ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯಾ, ಮಾನಸಿಕ ಮತ್ತು ದೈಹಿಕ ಸಮತೋಲನ, ಸಾತ್ವಿಕ ಆಹಾರಕ್ರಮ  ಮೊದಲಾದ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಇದು ಒಳಗೊಂಡಿದೆ.  ಬೆಳಿಗ್ಗೆ ಗಂಟೆ 10-ರಿಂದ ಮಧ್ಯಾಹ್ನ 12 ರ ವರೆಗೆ ನಡೆಯುವ ಈ ಶಿಬಿರದಲ್ಲಿ […]

56 ಮಂದಿ ನಿರಾಶ್ರಿತರಿಗೆ ಆಶ್ರಯ ನೀಡಿದ ಬೆಳ್ತಂಗಡಿಯ ಮಹಾತಾಯಿ: ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ

ಬೆಳ್ತಂಗಡಿ: ಜಲ  ಪ್ರಳಯದಿಂದ ತತ್ತರಿಸಿದ ನಿರಾಶ್ರಿತ 56 ಮಂದಿಗೆ ಈ ಹೆಣ್ಣುಮಗಳು  ತನ್ನ ಮನೆಯಲ್ಲಿ ಆಶ್ರಯ ನೀಡಿ ಸುದ್ದಿಯಾಗುತ್ತಿದ್ದಾರೆ. ಇವರ ಮಾನವೀಯತೆ, ಪ್ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದ್ದು ಎಲ್ಲರ  ಮೆಚ್ಚುಗೆಗೆ ಪಾತ್ರವಾಗಿದೆ. ಜಲಪ್ರಳಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ದಿಡುಪೆ, ಕೊಳಂಬೆ ಕುಕ್ಕಾವು ಹೀಗೆ ತಾಲೂಕಿನ ಹಲವು ಭಾಗಗಳು ನಲುಗಿ ಹೋಗಿದೆ. ಹಲವು ಮಂದಿ ಆಸ್ತಿ ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂಥ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ […]

ತಪ್ಪಿದ ಸಚಿವ ಸ್ಥಾನ; ಸುಳ್ಯ ಶಾಸಕ ಎಸ್. ಅಂಗಾರ ಅಸಮಾಧಾನ

ಮಂಗಳೂರು: ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ತತ್ವ ಸಿದ್ದಾಂತಕ್ಕೆ ಬೆಲೆ ಇಲ್ಲವೇ? ಎಂದು ಸುಳ್ಯ ಶಾಸಕ ಎಸ್ ಅಂಗಾರ ಅಸಮಾದಾನ ಹೊರಹಾಕಿದ್ದಾರೆ.ಜಿಲ್ಲೆಗೆ ಹಾಗೂ ನನಗೆ ಅನ್ಯಾಯವಾಗಿದೆ. ಕಳೆದ ಕೆಲವು ವರ್ಷಗಳಿಂದ ತತ್ವ ಸಿದ್ದಾಂತ ಒಪ್ಪಿ ಕೆಲಸ ಮಾಡಿದ್ದೆನೆ. ಇದೀಗ ಸಿದ್ದಾಂತಕ್ಕೆ ಬೆಲೆ ಇಲ್ಲದಂತೆ ಅಗಿದೆ. ಅದರೆ ತತ್ವ ಸಿದ್ದಾಂತವನ್ನು ಬಿಡಲು ನಾನು ತಯಾರಿಲ್ಲ. ಪಕ್ಷದ ಮೇಲೆ ಅಭಿಮಾನವಿಟ್ಟು ಬೆಂಗಳೂರಿಗೆ ಬಂದಿರುವ ನನ್ನ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದವರು ತಿಳಿಸಿದ್ದಾರೆ‌ .

ದ‌ಕ. ಜಿಲ್ಲೆಗೆ ತಪ್ಪಿದ ಸಚಿವ ಸ್ಥಾನ: ಕಾರ್ಯಕರ್ತರಲ್ಲಿ ನಿರಾಸೆ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

ಮಂಗಳೂರು: ಏಳು ಮಂದಿ ಶಾಸಕರನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಗೆ ಕೈ ತಪ್ಪಿದ ಸಚಿವ ಸ್ಥಾನದಿಂದಾಗಿ ಕಾರ್ಯಕರ್ತರು ತೀವ್ರ ನಿರಾಶೆಯಾಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಸತತ ಆರು ಬಾರಿ ಗೆದ್ದಿರುವ ಸುಳ್ಯ ಶಾಸಕ ಎಸ್ ಅಂಗಾರ ಅವರಿಗೂ ಸಚಿವ ಸ್ಥಾನವಿಲ್ಲ. ಮಂತ್ರಿ ಸ್ಥಾನ ಖಚಿತವೆಂಬ ಭರವಸೆಯೊಂದಿಗೆ ಕುಟುಂಬ ಸದಸ್ಯರನ್ನು ಬೆಂಗಳೂರಿಗೆ ಕರೆದಿದ್ದರು. ಅಂಗಾರ ಪ್ರಮಾಣ ವಚನ ದೃಶ್ಯ ಕಣ್ತುಂಬಿಕೊಳ್ಳಲು ಸುಳ್ಯದಿಂದ ಸುಮಾರ 100 ಹೆಚ್ಚು ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದರು‌. ಅಂಗಾರಗೆ ಹಾಗೂ ಜಿಲ್ಲೆಯ ಯಾವ ಶಾಸಕರಿಗೂ […]