ಸಮಾನತೆಯ ಸಂವಿಧಾನದ‌ ಒಳಗೆ ಮನುವಾದಿ ಸಿದ್ದಾಂತ ತುರುಕಿಸಲಾಗಿದೆ: ನಾರಾಯಣ ಮಣೂರು

ಉಡುಪಿ: ಸ್ವಾತಂತ್ರ್ಯ ದೊರೆತ ದಿನದಿಂದ ಆಳುವ ವ್ಯವಸ್ಥೆ ಮನುಧರ್ಮ ಶಾಸನ, ಮನುವಾದಿ ಸಿದ್ದಾಂತವನ್ನು ಅಂಬೇಡ್ಕರ್‌ ಜಾರಿಗೊಳಿಸಿದ ಸಮಾನತೆಯ ಸಂವಿಧಾನದ ಒಳಗೆ ತುರುಕಿಸಿ, ತನ್ನ ಅಧಿಕಾರವನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಬಂದಿದೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಮೂಡುಬೆಟ್ಟು ನಗರ ಶಾಖೆಯ ಆಶ್ರಯದಲ್ಲಿ ಮೂಡುಬೆಟ್ಟು ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ ದಲಿತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ಈ ದೇಶವನ್ನು ನಾಶ ಮಾಡಲು ಇಲ್ಲಿನ ಶಿಕ್ಷಣ ವ್ಯವಸ್ಥೆಯ ತಳ ತಪ್ಪಿಸಿ […]

ನೆರೆ ಪೀಡಿತ ಹಳ್ಳಿಗೆ ಭೇಟಿ ನೀಡಿ ಸರಕಾರ ಗಮನ ಸೆಳೆಯುವೆ: ಕುಮಾರಸ್ವಾಮಿ

ಮಂಗಳೂರು: ಈ ಭಾಗದ ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ತಾತ್ಕಾಲಿಕ ಪರಿಹಾರ ಕಲ್ಪಿಸುತ್ತಿದ್ದೇವೆ. ಹಳ್ಳಿಯ ಸಂಪೂರ್ಣ ಮಾಹಿತಿ ಪಡೆಯಲು ಸ್ಥಳಕ್ಕೆ ಭೇಟಿ ನೀಡುತ್ತೇನೆ. ಸರಕಾರದ ಗಮನ ಸೆಳೆಯುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಭಾನುವಾರ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬೆಳ್ತಂಗಡಿಗೆ ಆಗಮಿಸಿದ ಅವರು ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನೆರೆ ಹಾವಳಿ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಕೊಡಗು ಭಾಗದಲ್ಲಿ ಭೇಟಿ ಮಾಡಿದ್ದೇನೆ. ಬೆಳ್ತಂಗಡಿ ಭಾಗದಲ್ಲೂ ದೊಡ್ಡ ಮಟ್ಟದ ಅನಾಹುತ ಆಗಿದೆ. ನಾಳೆ […]

ಶ್ರೀ ಕೃಷ್ಣ ಮಠ:ವಿದ್ಯಾರ್ಥಿಗಳಿಂದ ‘ದಾನಶೂರ ಶಿಬಿ’ ಯಕ್ಷಗಾನ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಭಾ ಉಡುಪಿ,  ಪರಮ ಪೂಜ್ಯ ಅಷ್ಠಮಠಾಧೀಶರಿಂದ ಸ್ಥಾಪಿತವಾದ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತಮಹಾಪಾಠಶಾಲೆಯ 115 ನೇಯ ವಾರ್ಷಿಕೋತ್ಸವದ ಪ್ರಯುಕ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ‘ದಾನಶೂರ ಶಿಬಿ’ ಎಂಬ ಪ್ರಸಂಗದ ಯಕ್ಷಗಾನ ನಡೆಯಿತು.

ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವ, ವಿವಿಧ ಕಾರ್ಯಕ್ರಮಗಳ ಉದ್ಘಾಟನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಜಗದ್ಗುರು ಮೂಲಮಹಾಸಂಸ್ಥಾನಂ ಶ್ರೀಹೃಷಿಕೇಶತೀರ್ಥಪೀಠಮ್ ಪರ್ಯಾಯ ಶ್ರೀಪಲಿಮಾರು ಮಠ ಶ್ರೀಕೃಷ್ಣಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು,ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ  ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ  ಮಾಜಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್,ವಿದಾನಸಭಾದ ಸದಸ್ಯ ಭೋಜೇಗೌಡ,ಉಡುಪಿ ಶಾಸಕ ರಘುಪತಿ ಭಟ್,ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಎನ್.ಎಂ.ಪಿ.ಟಿ.ಅಧ್ಯಕ್ಷ ವೆಂಕಟರಮಣ ಅಕ್ಕರಾಜು […]

ಮೂಡಬಿದರೆ : ಮಯೂರಿ ಸಿಲ್ಕ್ಸ್ ಅವರಿಂದ ಬೆಳಗಾವಿ ಸಂತ್ರಸ್ತರಿಗೆ ಬಟ್ಟೆ ಪೂರೈಕೆ

ಕಾರ್ಕಳ : ಮೂಡಬಿದ್ರಿಯ ಪ್ರತಿಷ್ಠ್ಠಿತ  ಮಯೂರಿ ಸಿಲ್ಕ್ ಅವರಿಂದ 1-5 ಲಕ್ಷ ಮೌಲ್ಯದ ಬಟ್ಟೆಯನ್ನು ಸಂಸ್ಥೆಯ ಮಾಲಿಕರಾದ ರಾಜೇಂದ್ರ ಕುಮಾರ್ ಜೈನ್‍ ಬೆಳಗಾವಿ ಸಂತ್ರಸ್ತರಿಗೆ ವಿತರಿಸಿದರು. ರಾಜೇಂದ್ರ ಕುಮಾರ್ ಜೈನ್, ಲತಾ ರಾಜೇಂದ್ರ ಕುಮಾರ್, ನ್ಯಾಯವಾದಿಗಳಾದ ಬಾಹುಬಲಿ ಪ್ರಸಾದ್, ಮೂಡಬಿದ್ರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ, ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.