ಪ.ಜಾತಿ/ ಪಂಗಡದ ಕಲಾಸಕ್ತರಿಗೆ ಜಾನಪದ ತರಬೇತಿ

ಉಡುಪಿ: ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2019-20 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಆಸಕ್ತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಕಲಾಸಕ್ತರಿಗೆ ಗುರುಶಿಷ್ಯ ಪರಂಪರೆ ಯೋಜನೆಯಡಿ ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಹಾಗೂ ಜಾನಪದ ಕಲಾಪ್ರಕಾರಗಳಲ್ಲಿ ಆರು ತಿಂಗಳ ತರಬೇತಿ ಕಾಯಾಗಾರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ವಿಶೇಷ ಘಟಕ ಯೋಜನೆಯಡಿ 20 ಜನ ಹಾಗೂ ಗಿರಿಜನ ಉಪಯೋಜನೆಯಡಿ 8 ಜನ ಶಿಬಿರಾರ್ಥಿಗಳಿಗೆ ಮಾಹೆಯಾನ 1000 ರೂ.ಗಳ ಶಿಷ್ಯವೇತನ […]

ಉಡುಪಿ ಪ್ರೆಸ್ ಕ್ಲಬ್ ನಿಂದ ನೆರೆ ಸಂತ್ರಸ್ತರಿಗೆ ಎರಡನೇ ಹಂತದ ನೆರವು ಹಸ್ತಾಂತರ

ಉಡುಪಿ: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಅವರ ನೆರವಿಗೆ ಉಡುಪಿ ಪ್ರೆಸ್ ಕ್ಲಬ್ ಮಾಧ್ಯಮ ಮಿತ್ರರ ತಂಡ ಎರಡನೇ ಹಂತದಲ್ಲಿ ಸುಮಾರು 3 ಲಕ್ಷ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಶುಕ್ರವಾರ ಬೆಳಗಾವಿ ಜಿಲ್ಲೆಗೆ ರೋಟರಿ ಕ್ಲಬ್ ಉಡುಪಿ ರೋಯಲ್ ಸದಸ್ಯರ ಮೂಲಕ ಕಳುಹಿಸಿದರು. ಉಡುಪಿ ಜಿಲ್ಲಾ ವಾರ್ತಾದಿಕಾರಿ ಖಾದರ್ ಶಾ ಅವರು ಪರಿಹಾರ ಸಾಮಾಗ್ರಿ ವಸ್ತುಗಳಿಗೆ ಪ್ರೆಸ್ […]

ಕಾನೂನು ನೆರವಿನ ಅರಿವು ಮೂಡಿಸುವುದು ವಕೀಲರ ಕರ್ತವ್ಯ- ಸಿ.ಎಂ. ಜೋಶಿ

ಉಡುಪಿ: ದೇಶದಲ್ಲಿ ಶೇಕಡ 80 ರಷ್ಟು ಜನರು ಉಚಿತ ಕಾನೂನು ಸಹಾಯ ಪಡೆಯುವ ಆರ್ಹತೆ ಹೊಂದಿದ್ದರೂ, ಮಾಹಿತಿಯ ಕೊರತೆಯಿಂದಾಗಿ ನ್ಯಾಯಾಲಯದ ಬಾಗಿಲು ತಟ್ಟುವವರ ಸಂಖ್ಯೆ ಅತ್ಯಲ್ಪ. ಜನ ಸಾಮಾನ್ಯರಿಗಾಗಿ ಸಂವಿಧಾನದಿಂದ ಕಡ್ಡಾಯವಾಗಿ ಕೊಡಮಾಡಲ್ಪಟ್ಟಿರುವ ಉಚಿತ ಕಾನೂನು ನೆರವಿನ ಬಗ್ಗೆ ತಿಳಿಸುವುದು ಪ್ಯಾನಲ್ ವಕೀಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಶಿ ಹೇಳಿದರು. ಅವರು ಶುಕ್ರವಾರ ಆಯೋಜಿಸಲಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು […]

ಸೂಕ್ತ ದಾಖಲೆಗಳಿಲ್ಲದೆ ವಾಹನ ಚಲಾವಣೆ ಶಿಕ್ಷಾರ್ಹ-ಜಿಲ್ಲಾ ನ್ಯಾಯಾಧೀಶರು

ಉಡುಪಿ: ಯಾವುದೇ ವಯೋಮಾನದವರಾದರೂ ಸಹ ಸೂಕ್ತ ಅರ್ಹತೆ, ದಾಖಲೆಗಳಿಲ್ಲದೇ ವಾಹನ ಚಲಾಯಿಸಬೇಡಿ, ರಸ್ತೆಯಲ್ಲಿ ಯಾವ ಸಮಯದಲ್ಲಿ ಏನು ಅಗುತ್ತದೆ ಹೇಳಲು ಸಾಧ್ಯವಿಲ್ಲ, ಸೂಕ್ತ ದಾಖಲೆಗಳಿಲ್ಲದೇ ವಾಹನ ಚಲಾವಣೆ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದ್ದಾರೆ. ಅವರು ಗುರುವಾರ, ಉಡುಪಿಯ ಪುರಭವನದಲ್ಲಿ ಜಿಲ್ಲಾಡಳಿತ ವತಿಯಿಂದ, ರಸ್ತೆ ಸುರಕ್ಷತೆಯ ಅರಿವಿಗಾಗಿ ಆಯೋಜಿದ್ದ ಯಕ್ಷಗಾನ ಕಾರ್ಯಕ್ರಮ “ಯಮದಂಡ” ಸಡಕ್ ಸುರಕ್ಷಾ – ಜೀವನ್ ರಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಡುಪಿಯ ನ್ಯಾಯಾಲಯದಲ್ಲಿ 800-900 ವಾಹನ ನಿಯಮ ಉಲ್ಲಂಘನೆ […]

ವೀಕ್ಷಕರ ಮನಗೆದ್ದ “ಬಣ್ಣ” ಕಿರು ಚಿತ್ರ: ಯೂ ಟ್ಯೂಬ್ ನಲ್ಲಿ ಸಕತ್ ಹಿಟ್ ಆಯ್ತು ‘ಬಣ್ಣ’

ಸದ್ಗುರು ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಸದಾನಂದ ಉಡುಪಿ ನಿರ್ದೇಶನದ “ಬಣ್ಣ” ಕಿರುಚಿತ್ರ ಯುಟ್ಯೂಬ್ ನಲ್ಲಿ  ಬಿಡುಗಡೆಯಾಗಿ ವೀಕ್ಷಕರ ಮನಗೆದ್ದಿದೆ. ಈ ಕಿರುಚಿತ್ರ ಕೋಮು ಸಾಮರಸ್ಯದ ಕಥಾಹಂದರವುಳ್ಳ ಕಥೆಯಾಗಿದೆ. ಒಂದು ಸಾಮಾನ್ಯ ಹಳ್ಳಿಯಲ್ಲಿಯೂ ಒಂದು ಚಿಕ್ಕ ಘಟನೆ ಹೇಗೆ ಕೋಮುವಾದದ ಬಣ್ಣಕ್ಕೆ ತಿರುಗುತ್ತದೆ, ಈಗಿನ ಯುವ ಜನಾಂಗ ಆ ಘಟನೆಗೆ ಯಾವ ರೀತಿ ಸ್ಪಂದಿಸುತ್ತಾರೆ ಹಿಂದಿನ ಪೀಳಿಗೆ ಮತ್ತು ಇಂದಿನ ಪೀಳಿಗೆ ಆ ಘಟನೆಯನ್ನು ನೋಡುವ ದೃಷ್ಟಿಕೋನ,  ಊರಿನ ಹಿರಿಯ ಮಾಸ್ಟರ್ ಆ ಯುವ ಜನಾಂಗವನ್ನು ತಿದ್ದುವ ರೀತಿ ಎಲ್ಲಾ ಸೊಗಸಾಗಿ ಮೂಡಿ […]