ಫೋನ್ ಕದ್ದಾಲಿಕೆ ಬಗ್ಗೆ ತನಿಖೆಯಾಗಲಿ:  ಶಾಸಕ ಕಾಮತ್ 

ಮಂಗಳೂರು: ಹಿಂದಿನ ಮೈತ್ರಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಬರುತ್ತವೆ. ಕಳೆದ ದೋಸ್ತಿ ಸರಕಾರದ ಅತೀ ದೊಡ್ಡ ಸಾಧನೆ ಎಂದರೆ ಫೋನ್ ಕದ್ದಾಲಿಕೆ ಮಾಡಿರುವುದು ಎನ್ನುವುದು ಸ್ಪಷ್ಟವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.‌ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಜೆಡಿಎಸ್ ಪಕ್ಷದ ಶಾಸಕರು ಪರಸ್ಪರರ ಮೇಲೆ ಆರೋಪ ಮಾಡುತ್ತಿದ್ದಾರೆ. ಒಂದು ವರ್ಷ ಎರಡು ತಿಂಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಮಾಡಿದ್ದು ಇಷ್ಟೇ ಎನ್ನುವುದು ಗೊತ್ತಾಗುತ್ತಿದೆ. ಪೊಲೀಸ್ ಇಲಾಖೆಯ ಹಿರಿಯ […]

ಕೃಷ್ಣಮಠಕ್ಕೆ ಕೇಂದ್ರ ರಸಗೊಬ್ಬರ ಸಚಿವರ ಭೇಟಿ

ಉಡುಪಿ: ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವರಾದ ಮಾನ್ಸುಖ್ ಎಲ್.ಮಾಂಡವಿ ಅವರು ಶುಕ್ರವಾರ ಕೃಷ್ಣಮಠಕ್ಕೆ ಭೇಟಿ ನೀಡಿ  ಶ್ರೀಕೃಷ್ಣ ದೇವರ ದರ್ಶನ ಪಡೆದು ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್,ಉಡುಪಿ ಶಾಸಕರಾದ ರಘುಪತಿ ಭಟ್,ಮಂಗಳೂರು ಬಂದರಿನ ಅಧ್ಯಕ್ಷರಾದ ವೆಂಕಟ ರಾಮನ್ ಅಕ್ಕರಾಜು ಮೊದಲಾದವರು ಉಪಸ್ಥಿತರಿದ್ದರು.

ಸರಕಾರ ಜಾರಿಗೊಳಿಸುವ ಹೊಸ ಕಾಯ್ದೆಯಿಂದ ಸಹಕಾರಿ ಕ್ಷೇತ್ರದ ಒತ್ತಡ ಹೆಚ್ಚಿದೆ: ಜಯಕರ ಶೆಟ್ಟಿ

ಉಡುಪಿ: ಸರಕಾರ ಜಾರಿಗೊಳಿಸುವ ಹೊಸ ಹೊಸ ಕಾಯ್ದೆ ಹಾಗೂ ವಿವಿಧ ತೆರಿಗೆ ಸಹಕಾರಿ ಕ್ಷೇತ್ರದ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಎಲ್ಲ ಸಹಕಾರಿಗಳು ಸಂಘಟಿತರಾಗಿ ಸಮಸ್ಯೆಯ ವಿರುದ್ಧ ಹೋರಾಡಬೇಕು. ಆಗ ಮಾತ್ರ ಸಮಸ್ಯೆಯನ್ನು‌ ಪರಿಹರಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರಿ ಯೂನಿಯನ್‌, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ ಹಾಗೂ ಸಹಕಾರಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಕೃಷಿ ಪತ್ತಿನ ಹಾಗೂ ಪತ್ತಿನ […]

ಸೈನಿಕ ಶಾಲೆ ಕೊಡಗು: ದಾಖಲಾತಿಗೆ ಅರ್ಜಿ ಆಹ್ವಾನ

ಉಡುಪಿ: ಅಖಿಲ ಭಾರತ ಸೈನಿಕ ಶಾಲಾ ಪರೀಕ್ಷೆಯ ಮೂಲಕ 6 ಮತ್ತು 9 ನೇ ತರಗತಿಗಳಿಗೆ 2020-21 ನೇ ಸಾಲಿನ ದಾಖಲಾತಿಗೆ ಹುಡುಗರಿಂದ ಅರ್ಜಿ ಆಹ್ವಾನಿಸಲಾಗಿದೆ.      ಸೈನಿಕ ಶಾಲಾ ಪ್ರವೇಶ ಪರೀಕ್ಷೆಯು 6 ನೇ ತರಗತಿಗೆ ಸೈನಿಕ ಶಾಲೆ ಕೊಡಗು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ನಗರ, ಚಿತ್ರದುರ್ಗ ಮತ್ತು ಬೈಲಕುಪ್ಪೆ (ಜಿಲ್ಲೆ-ಮೈಸೂರು) ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. 9 ನೇ ತರಗತಿ ಪ್ರವೇಶ ಪರೀಕ್ಷೆಯು ಸೈನಿಕ ಶಾಲೆ ಕೊಡಗಿನಲ್ಲಿ ನಡೆಯಲಿದೆ.  ನೋಂದಣಿ ಶುಲ್ಕವು ಸಾಮಾನ್ಯ ವರ್ಗ […]

ಹಿರಿಯಡ್ಕ: ಎನ್.ಎಸ್.ಎಸ್.  ಸ್ವಯಂಸೇವಕರಿಂದ ಭತ್ತದ ನಾಟಿ ಕಾರ್ಯಕ್ರಮ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಕೃಷಿಕನ ಶ್ರಮವನ್ನು ಅರಿಯುವ ಮತ್ತು ಯುವಕರಲ್ಲಿ ಸೇವಾ ಮನೋಭಾವನೆಯನ್ನು ಬೆಳಸುವ ಉದ್ದೇಶದಿಂದ ಹಿರಿಯಡಕದ ಪಡ್ಡಂ ಪಡುಭಾಗ ಇಲ್ಲಿಯ ದಾಮೋದರ್ ಅವರ ಸಹಕಾರದಲ್ಲಿ ರತ್ನಾಕರ ಶೆಟ್ಟಿಯವರ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಪ್ರಾಂಶುಪಾಲೆ ಡಾ.ನಿಕೇತನರವರ ಮಾರ್ಗದರ್ಶನದೊಂದಿಗೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರವೀಣ ಶೆಟ್ಟಿ ಮತ್ತು ಸುಭಾಷ್ ಎಚ್.ಕೆ. ಕಾರ್ಯಕ್ರಮವನ್ನು ಆಯೋಜಿಸಿ, ಇಂದಿನ ಯುವಕರು ಕೃಷಿ, ಅದರಲ್ಲೂ ಭತ್ತದ […]