ಮಂಗಳೂರು: ಉಗ್ರ ದಾಳಿ ಶಂಕೆ: ಮಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಶೋಧ ಕಾರ್ಯ
ಮಂಗಳೂರು: ಉಗ್ರರ ದಾಳಿ ಶಂಕೆಯಿಂದ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಕೂಡ ಶೋಧ ನಡೆಸಲಾಗುತ್ತಿದೆ. ಮಂಗಳೂರು ನಗರದ ವಿವಿಧ ಆಸ್ಪತ್ರೆ, ಮಾಲ್, ಐಟಿ ಕಂಪೆನಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕಟ್ಟಡಗಳಲ್ಲಿ ಭದ್ರತೆಯನ್ನು ಪರಿಶೀಲಿಸಲು ದಿಢೀರ್ ಶೋಧ ಕಾರ್ಯ ನಡೆಯುತ್ತಿದ್ದು, ಮಂಗಳೂರು ನಗರ ಪೊಲೀಸರಿಂದ ಶೋಧ ಮುಂದುವರಿದಿದೆ. ಮುಡಿಪು ಇನ್ಫೋಸಿಸ್, ಸೂರ್ಯ ಇನ್ಫೋಟೆಕ್ ನಲ್ಲಿ ತಪಾಸಣೆ, ಕ್ಷೇಮ ಆಸ್ಪತ್ರೆ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ತಪಾಸಣೆ ಶ್ವಾನದಳ, ಬಾಂಬ್ ಸ್ಕ್ವಾಡ್ ಬಳಸಿಕೊಂಡು ಪೊಲೀಸರಿಂದ ಶೋಧ ಕಾರ್ಯ […]
ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಂಸ್ಕೃತೋತ್ಸವ
ಉಡುಪಿ: ಶ್ರೀಮನ್ಮಧ್ವ ಸಿದ್ಧಾಂತ ಪ್ರಭೋಧಕ ಸಂಸ್ಕೃತ -ಸ್ನಾತಕ – ಸ್ನಾತಕೋತ್ತರ ಅಧ್ಯಯನ ಕೇಂದ್ರ,ಉಡುಪಿ ಇದರ ವತಿಯಿಂದ, ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಂಸ್ಕೃತೋತ್ಸವ ಸಮಾರಂಭ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಸಂಸ್ಕೃತ ಭಾಷೆಯ ಮಹತ್ಮುಂವದ ಕುರಿತು ಮಾತನಾಡಿದರು. ಕೇಂದ್ರ ಮಂತ್ರಿಗಳಾದ ಮಾನ್ಸುಖ್ ಎಲ್.ಮಾಂಡವಿ ಅವರು ಮಾತನಾಡಿ, ಸಂಸ್ಕೃತವು ದೇವಭಾಷೆ. ಅದು ಎಲ್ಲ ಸಂಶೋಧನೆಗೂ ಮೂಲವಾಗಿದೆ, ಆದ್ದರಿಂದ ಈ ಸಭೆಯಲ್ಲಿ ಭಾಗವಹಿಸಿದ್ದು ಸಂತೋಷವಾಗಿದೆ ಎಂದರು. ಅದಮಾರು ಕಿರಿಯ ಯತಿಗಳಾದ […]
ನಿರ್ಮಾಣ್ ಬಿಲ್ಡರ್ ವತಿಯಿಂದ ಮಕ್ಕಳಿಗೆ ವಿಶೇಷ ಸ್ಪರ್ಧೆ ಉದ್ಘಾಟನೆ
ಮಂಗಳೂರು : ನಿರ್ಮಾಣ್ ಬಿಲ್ಡರ್ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಕಲರಿಂಗ್ ಮತ್ತು ಛದ್ಮವೇಷ ಸ್ಪರ್ಧೆ ನಗರದ ಭಾರತ್ ಮಾಲ್ ನಲ್ಲಿ ನಡೆಯಿತು. 400 ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ದ್ರಿತಿ ಎಸ್. ಪ್ರಥಮ, ಸಿಂಚನಾ ಕೋಟ್ಯಾನ್ ದ್ವಿತೀಯ ಹಾಗೂ ಶೀಯಾನ್ ತೃತೀಯ ಬಹುಮಾನ ಪಡೆದರು. ಕಲರಿಂಗ್ ಸ್ಪರ್ಧೆಯಲ್ಲಿ ವೈಭವಿ ಅಳಕೆ ಪ್ರಥಮ, ಕಾರ್ತಿಕ್ ಎಸ್. ದ್ವಿತೀಯ ಹಾಗೂ ಭಾರ್ಗವಿ ಎಸ್. ಆಚಾರ್ಯ ತೃತೀಯ ಬಹುಮಾನ ಪಡೆದರು. […]
ಯುಪಿಸಿಎಲ್ ಕಾರ್ಮಿಕ ಶೆಡ್ನಲ್ಲಿ ನಡೆದ ಶರಣಪ್ಪ ಕೊಲೆ ಆರೋಪಿಗೆ ಜೀವಾವಧಿ
ಉಡುಪಿ: ಕಳೆದ ಆರು ವರ್ಷಗಳ ಹಿಂದೆ ಯುಪಿಸಿಎಲ್‌ನ ಕಾರ್ಮಿಕರ ಶೆಡ್‌ನಲ್ಲಿ ನಡೆದ ಶರಣಪ್ಪ ಕೊಲೆ ಪ್ರಕರಣದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಪ್ಪ ದುರ್ಗಪ್ಪ ಯಾನೆ ಬಸು (45) ಶಿಕ್ಷೆಗೆ ಗುರಿಯಾದ ಆರೋಪಿ. ಯುಪಿಸಿಎಲ್‌ನ ಸೋಜಾ ಕನ್‌ಸ್ಟ್ರಕ್ಷನ್ ಗುತ್ತಿಗೆ ಸಂಸ್ಥೆಯಲ್ಲಿ ಆರೋಪಿ ಬಸಪ್ಪ ದುರ್ಗಪ್ಪ ತಾತ್ಕಾಲಿಕವಾಗಿ ಗುತ್ತಿಗೆ ಕೆಲಸ ಮಾಡುತ್ತಿದ್ದ. ಈ ವೇಳೆ ಶರಣಪ್ಪ ಎಂಬಾತನು ಬಸಪ್ಪನಿಂದ 500ರೂ. ಸಾಲ ಪಡೆದುಕೊಂಡಿದ್ದನು. ಸಾಲದ ಮರುಪಾವತಿ […]
ಉಡುಪಿ: ಸ್ಮರಣಿಕಾ ಗಿಫ್ಟ್ ಶಾಪ್ ನ 27ನೇ ವರ್ಷಾಚರಣೆ, ವಿಶೇಷ ಪ್ರದರ್ಶನ
ಉಡುಪಿ: ನಗರದ ಸ್ಮರಣಿಕಾ ಮೊಮೆಂಟೊ ಮತ್ತು ಗಿಫ್ಟ್ ಶಾಪ್‌ನ 27ನೇ ವರ್ಷದ ಸಂಭ್ರಮ ಹಾಗೂ 2020ರ ಹೊಸ ವರ್ಷದ ಗಿಫ್ಟ್ ಮತ್ತು ಸ್ಮರಣಿಕೆಗಳ ಬುಕ್ಕಿಂಗ್ ಹಾಗೂ ಪ್ರದರ್ಶನದ ಉದ್ಘಾಟನೆ ಸಮಾರಂಭವು ಕಲ್ಸಂಕ ಜಂಕ್ಷನ್ ವಿಶ್ವಾಸ್ ಕಟ್ಟಡದ ಸ್ಮರಣಿಕ ರೋಯಲೆಯಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ 2020ರ ಡೈರಿ ಬಿಡುಗಡೆಗೊಳಿಸಿದ ಪ್ರಸಾದ್ ನೇತ್ರಾಲಯದ ನೇತ್ರತಜ್ಞ ಡಾ| ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ಉತ್ತಮ ಗುಣಮಟ್ಟದ ವಸ್ತುಗಳಿಂದ ವ್ಯವಹಾರ ಉನ್ನತಿ ಕಾಣುತ್ತದೆ. ಉತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಿ […]