ಇಂದಿರಾಗೆ ಮಿಡಿಯಿತು ಸಹಸ್ರಾರು ಹೃದಯ: ಮುದ್ದಿನ ಆನೆಗೆ ಕಣ್ಣೀರ ವಿದಾಯ

ಕುಂದಾಪುರ: ಕಳೆದೊಂದು ವಾರದಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಮಂಗಳವಾರ ಸಂಜೆ ಮೃತಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆನೆ ಇಂದಿರಾ ಅಂತ್ಯ ಸಂಸ್ಕಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬುಧವಾರ ನೆರವೇರಿತು. ಜಗತ್ಪ್ರಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ೨೨ ವರ್ಷಗಳಿಂದ ದೇವಿಗೆ ಸೇವೆ ಸಲ್ಲಿಸುತ್ತಿದ್ದ ಇಂದಿರಾ ವಾರಗಳಿಂದೀಚೆಗೆ ಜ್ವರದಿಂದ ಬಳಲಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದಲ್ಲದೇ ಸುಮಾರು ೫೦ಕ್ಕೂ ಅಧಿಕ ಬಾಟಲಿ ಗ್ಲೂಕೋಸ್ ಕೊಟ್ಟು ಇಂದಿರಾ ಚೇತರಿಕೆಗೆ ಹರಸಾಹಸಪಟ್ಟಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಆನೆ ಇಹಲೋಕ ತ್ಯಜಿಸಿದೆ. ದೇವಸ್ಥಾನಕ್ಕೆ ಬರುವ […]

ನೆರೆ ಪರಿಹಾರ ನಿಧಿಗೆ ಕಾರ್ಕಳ ಪೊಲೀಸ್ ಠಾಣೆಯಿಂದ ನೆರವು

ಕಾರ್ಕಳ :  ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್‌ ಅವರ ನೇತೃತ್ವದಲ್ಲಿ ಸರ್ಕಲ್ ಇನ್ಸೆಪೆಕ್ಟರ್ ಹಾಲಮೂರ್ತಿ ರಾವ್, ನಗರ ಠಾಣಾಧಿಕಾರಿ ನಂಜ ನಾಯಕ್, ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ನೆರೆ ಪರಿಹಾರ ನಿಧಿಗೆ ಕಾರ್ಕಳ ಪೊಲೀಸ್ ಠಾಣೆಯಿಂದ ಸುಮಾರು ೧.೫ ಲಕ್ಷರೂ ಮೌಲ್ಯದ ಸಾಮಾಗ್ರಿಗಳ ಕೊಡುಗೆಯನ್ನು ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಗೆ ನೀಡಲಾಯಿತು.