ಪ್ರವಾಹದ ಸಂತ್ರಸ್ತರ ನೆರವಿಗಾಗಿ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ 1 ಕೋಟಿ

ಮಂಗಳೂರು:   ಕರ್ನಾಟಕದಲ್ಲಾದ ಪ್ರವಾಹದ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು 1 ಕೋಟಿ ರೂ. ಪರಿಹಾರ ನೀಡಲು ನಿರ್ಧರಿಸಿದೆ. ದೇವಸ್ಥಾನದ ನಿಧಿಯಿಂದ 1 ಕೋಟಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ಸೇರಿದ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದ ಬಯಲು ಸೀಮೆಯ ಭಕ್ತರು ಪ್ರವಾಹದಿಂದ ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದು, 1 ಕೋಟಿ ಹಣವನ್ನು […]

ಮಂಗಳೂರು: ಒವರ್ ಟೆಕ್ ಮಾಡಲು ಹೋಗಿ ಖಾಸಗಿ ಬಸ್ ಹೊಂಡಕ್ಕೆ

 ಮಂಗಳೂರು: ಒವರ್ ಟೆಕ್ ಮಾಡುವ ಬರದಲ್ಲಿ ಖಾಸಗಿ ಬಸ್ಸೊಂದು ಹೊಂಡಕ್ಕೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಸಂತೇಕಟ್ಟೆ ಬಳಿಯ ಕಳ್ತುರು ಬಳಿ ಎಂಬಲ್ಲಿ ನಡೆದಿದೆ. ಸಂಜೆ ವೇಳೆಯಲ್ಲಿ ಹೆಬ್ರಿಯಿಂದ ಕುಂದಾಪುರದ ಕಡೆ ಹೋಗುತ್ತಿದ್ದ ಲಕ್ಷ್ಮಿ ಎಕ್ಸ್ ಪ್ರೆಸ್ ಬಸ್ಸು, ಎದುಗಡೆ ಬ್ರಹ್ಮಾವರಕ್ಕೆ ಹೋಗುತ್ತಿದ್ದ ಬಸ್ಸುನ್ನು ಒವರ್ ಟೇಕ್ ಮಾಡುವ ಬರದಲ್ಲಿ ಹೊಂಡಕ್ಕೆ ಬಿದ್ದಿದೆ. ಪ್ರಯಾಣಿಕರು ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಬಿದ್ದ ರಭಕ್ಕೆ ಬಸ್ಸ್ ಹೊಂಡದಲ್ಲಿ ಹೂತು ಹೋಗಿದೆ ನಂತರ ಜೆಸಿಬಿ ಮೂಲಕ ಬಸ್ಸ್‌ನ್ನು ಮೇಲಕ್ಕೆ […]

ಪಚ್ಚನಾಡಿಗೆ ಸಂಸದ ಕಟೀಲ್, ಶಾಸಕ ಕಾಮತ್, ಭರತ್ ಶೆಟ್ಟಿ ಭೇಟಿ

ಮಂಗಳೂರು: ಮಂಗಳೂರಿನ ಹೊರವಲಯದ ಪಚ್ಚನಾಡಿಯಲ್ಲಿರುವ ಡಂಪಿಂಗ್ ಯಾರ್ಡ್ ನಿಂದ ತ್ಯಾಜ್ಯದ ರಾಶಿ ಹರಿದು ಸನಿಹದ ಮಂದಾರ ಜನವಸತಿ ಇರುವ ಪ್ರದೇಶದ ಜನ ಅನುಭವಿಸುತ್ತಿರುವ ತೊಂದರೆಯನ್ನು ಪರಿಶೀಲಿಸಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮತ್ತು ಮಂಗಳೂರು ನಗರ ಉತ್ತರ ಶಾಸಕ ಡಾ|ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದರು. ಈ ಬಗ್ಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಇಬ್ಬರು ಶಾಸಕರೊಂದಿಗೆ ತಾವು ಈ ಪ್ರದೇಶಕ್ಕೆ […]

ಶ್ರೀ ಲಕ್ಷ್ಮೀನಾರಾಯಣ ಮಠ:ಉದ್ವರ್ತನೆ, ಋಕ್ ಸಂಹಿತಾ ವೇದ ಪಾರಾಯಣ

ಉಡುಪಿ: ಕಡೆಕಾರ್ ಶ್ರೀ ಲಕ್ಷ್ಮೀನಾರಾಯಣ ಮಠದಲ್ಲಿ ‘ಶ್ರೀಲಕ್ಷ್ಮೀನಾರಾಯಣ ಮತ್ತು ಶ್ರೀಲಕ್ಷ್ಮೀನರಸಿಂಹ’ ದೇವರಿಗೆ   ಉದ್ವರ್ತನೆ ಹಾಗೂ ಋಕ್ ಸಂಹಿತಾ ವೇದ ಪಾರಾಯಣ ಪುರಸ್ಸರ ಕಲಶಾಭಿಷೇಕ ಕಾರ್ಯಕ್ರಮವು ಶ್ರೀಶ ಭಟ್ ಕಡೆಕಾರ್ ಇವರ ನೇತೃತ್ವದಲ್ಲಿ ನಡೆಯಿತು.

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸಂಭವ: ರೆಡ್ ಅಲರ್ಟ್ ಘೋಷಣೆ

ಉಡುಪಿ: ಜಿಲ್ಲಾದ್ಯಂತ ನಿರಂತರ ಮಳೆಯಾಗುತ್ತಿದ್ದು, ರಾಜ್ಯದ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಆಗಸ್ಟ್ 15 ರಂದು ವಿಪರೀತ ಮಳೆ (205ಮೀ.ಮೀ) ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಭಾರೀ ಗಾಳಿ ಬೀಸುವ ಸಂಭವವಿರುವುದಾಗಿ ಹವಾಮಾನ ಇಲಾಖೆಯಿಂದ ಮುನ್ಸೂಚನೆ, ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಕೆಳಗಿನಂತೆ ತುರ್ತು ಕ್ರಮಗಳನ್ನು ಕೈಗೊಂಡಿರುತ್ತದೆ.    ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗೃತೆ ವಹಿಸಬೇಕು. […]