ಅಧಿಕಾರ ವಿಕೇಂದ್ರೀಕರಣದಿಂದ ಸರಕಾರದ ಸೌಲಭ್ಯ ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ: ಜೆರಾಲ್ಡ್ ಐಸಾಕ್
ಉಡುಪಿ: ಅಧಿಕಾರ ವಿಕೇಂದ್ರೀಕರಣದ ಮೂಲಕ ಗ್ರಾ.ಪಂ. ಸದಸ್ಯರಿಗೆ ಅಧಿಕಾರ ಮತ್ತು ಸೇವೆ ನೀಡುವ ವಿಶೇಷ ವ್ಯವಸ್ಥೆ ಇರುವುದರಿಂದ ಸರ್ಕಾರದ ಸವಲತ್ತುಗಳನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಶೋಕ ಮಾತಾ ಇಗರ್ಜಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೆಥೊಲಿಕ್ ಜನಪ್ರತಿನಿಧಿಗಳ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಿಲ್ಲೆಯ 112 ಕ್ರೈಸ್ತ ಜನಪ್ರತಿನಿಧಿಗಳು ಆಯ್ಕೆಯಾಗಿದ್ದು, […]
ರಾಜ್ಯದಲ್ಲಿ ಶೀಘ್ರವೇ ನಾರಿ ಅದಾಲತ್ ಆರಂಭ: ಶ್ಯಾಮಲಾ ಕುಂದರ್
ಉಡುಪಿ: ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಶೀಘ್ರವೇ ನಾರಿ ಅದಾಲತ್ ಆರಂಭಿಸಲಾಗುವುದು. ಆ ಮೂಲಕ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು. ಅಲೆವೂರು ಮಹಿಳಾ ಸಂಘ ರಾಂಪುರ ವತಿಯಿಂದ ಅಲೆವೂರು ಯುವಕ ಸಂಘದ ಸಹಯೋಗದೊಂದಿಗೆ ಅಲೆವೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಮಹಿಳೆ ಮತ್ತು ಆರೋಗ್ಯ’ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆ ನಿರ್ವಹಣೆ ಜತೆಗೆ ಸಮಾಜ ಮುಖಿಯಾಗಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮಹಿಳೆ, ತನ್ನ ಆರೋಗ್ಯದ ಕಡೆಗೂ ಹೆಚ್ಚು […]
ಕಡಲ್ಕೊರೆತ ಪ್ರದೇಶಗಳಿಗೆ ಮಾಜಿ ಸಚಿವ ಯುಟಿ ಖಾದರ್ ಭೇಟಿ
ಮಂಗಳೂರು: ಮಂಗಳೂರಿನ ಕಡಲ್ಕೊರೆತ ಪ್ರದೇಶಗಳಿಗೆ ಭಾನುವಾರ ಮಾಜಿ ಸಚಿವ ಯುಟಿ ಖಾದರ್ ಭೇಟಿ ನೀಡಿದರು. ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿಗೆ ಭೇಟಿ ನೀಡಿದ ಅವರು ಕಡಲ್ಕೊರೆತದಿಂದ ಕೊಚ್ಚಿ ಹೋದ ರಸ್ತೆಗಳ ಪರಿಶೀಲನೆ ನಡೆಸಿದರು.
ಬೆಳ್ತಂಗಡಿ: ನೆರೆ ಪೀಡಿತ ಪ್ರದೇಶಗಳಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರೆಪೀಡಿತ ವಿವಿಧ ಪ್ರದೇಶಗಳಿಗೆ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಭಾನುವಾರ ಭೇಟಿ ನೀಡಿದ್ದಾರೆ. ಬೆಳ್ತಂಗಡಿಯ ಕಿಲ್ಲೂರು, ಕಾಜೂರು, ಕೊಲ್ಲಿ ಮಿತ್ತಬಾಗಿಲು ಪ್ರದೇಶಗಳಿಗೆ ಭೇಟಿದ ಅವರು ಸ್ಥಳೀಯರಲ್ಲಿ ಸಮಸ್ಯೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ಪಿಲ್ಯದ ಬಳಿ ರಸ್ತೆ ಕುಸಿತ: ಕಾರ್ಕಳ- ಬೆಳ್ತಂಗಡಿ ರಸ್ತೆ ಸಂಚಾರ ಸ್ಥಗಿತ
ಬೆಳ್ತಂಗಡಿ: ತಾಲೂಕಿನಾದ್ಯಂತ ಧಾರಾಕಾರ ಮಳೆ ಜಾಸ್ತಿಯಾಗುತ್ತಿದ್ದು ಇದೀಗ ಬೆಳ್ತಂಗಡಿ-ಕಾರ್ಕಳ ಸಂಪರ್ಕಿಸುವ ರಸ್ತೆ ಕೂಡ ಮಳೆಗೆ ಗಡ ಗಡ ನಡುಗಿದೆ. ಅಳದಂಗಡಿಯ ಸಮೀಪದ ಪಿಲ್ಯ ಎಂಬಲ್ಲಿ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು ಕೆಲವೆಡೆ ರಸ್ತೆ ಕುಸಿಯುತ್ತಿದೆ.ರಸ್ತೆ ದಾಟಲು ಹರಸಾಹಸ ಪಟ್ಟು ಕೆಲವೊಂದು ವಾಹನಗಳು ರಸ್ತೆಯಲ್ಲೇ ಹೂತುಹೋಗಿದೆ. ಇದೀಗ ಬೆಳ್ತಂಗಡಿ-ಕಾರ್ಕಳ ರಸ್ತೆ ಸಂಚಾರ ಸದ್ಯಕ್ಕೆ ಸ್ಥಗಿತಗೊಂಡಿದೆ.ಇದೀಗ ರಸ್ತೆಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ವರದಿ:ಚಿತ್ರ: :ಇಫಾಜ್ ಶೇಕ್, ಅಳದಂಗಡಿ