ಈ ಸಂಕ ಮುರಿದು ಬಿದ್ದರೆ ಮುಗೀತು ಜನರ ಕತೆ: ಕುಬ್ಜಾ ನದಿ ಸಂಕದ “ಸಂಕಟ” ಕೇಳೋರಿಲ್ಲ

-ಶ್ರೀಕಾಂತ್ ಹೆಮ್ಮಾಡಿ, ಕುಂದಾಪುರ ಬೈಂದೂರು: ಈ ಕಾಲುಸಂಕದ ಮೇಲೆ ಒಬ್ಬೊಬ್ಬರಾಗಿಯೇ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಬೇಕು. ಎಲ್ಲರೂ ಒಮ್ಮೆಲೆ ಕಾಲುಸಂಕ ದಾಟಿದರೆ ನದಿಯ ಪಾಲಾಗೋದು ಪಕ್ಕಾ. ಊರ ಜನರೇ ಶ್ರಮದಾನದ ಮೂಲಕ ನಿರ್ಮಿಸಿಕೊಂಡ ಕಾಲುಸಂಕ ದಾಟುವುದಿದೆಯಲ್ಲಾ ಅದಕ್ಕೆ ಎಂಟೆದೆ ಬೇಕು. ಕಾಲುಸಂಕದ ಮಟ್ಟ ತಾಗಿ ಕೆಂಬಣ್ಣದಲ್ಲಿ ಕುಬ್ಜೆ ಹರಿಯುವ ರಭಸ ನೋಡಿದರೆ ಎದೆ ಝಲ್ ಅನ್ನುತ್ತೆ. ಪ್ರಾಣದ ಹಂಗು ತೊರೆದು ತುಂಬಿ ಹರಿಯುವ ನದಿ ದಾಟುವ ಆ ಊರಿನ ಜನರ ಗುಂಡಿಗೆ ಮೆಚ್ಚಲೇಬೇಕು. ಮುರಿದು ಬೀಳುವ […]
ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ: ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿತ

ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ, ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಜನವರಿಯಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಮುಂಬೈ,ದೆಹಲಿ ಮೊದಲಾದ ಪ್ರಮುಖ ನಗರಗಳಲ್ಲಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಸಂಚಲನ ಸೃಷ್ಟಿಸಿದೆ. ಅಲ್ಲದೇ ಇದೀಗ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೂಡ ಕಡಿಮೆಯಾಗಿದ್ದು ಜೇಬಿಗೆ ಅಂತಹ ಹೊರೆ ಬೀಳುವುದಿಲ್ಲ. ಕೇಂದ್ರ ಸರ್ಕಾರಾ ಹಾಗೂ GST ಕೌನ್ಸಿಲ್ ಎಲೆಕ್ಟ್ರಿಕ್ ವಾಹನದ ಮೇಲಿ 12% GST(ತೆರಿಗೆ)ಯನ್ನು 5% ಕ್ಕೆ ಇಳಿಸಲಾಗಿದೆ. ಒಕಿನಾವ ಸ್ಕೂಟರ್ ಬೆಲೆಯಲ್ಲಿ ಕನಿಷ್ಠ 3,400 ರೂಪಾಯಿಂದ 8,600 ರೂಪಾಯಿ ವರೆಗೆ ಇಳಿಕೆಯಾಗಿದೆ. ಒಕಿನಾವಾ ಸ್ಕೂಟರ್‌ನಲ್ಲಿ […]
ಬೆಂಗಳೂರು-ಮಂಗಳೂರು ಸಂಪರ್ಕಕ್ಕೆ ತೊಡಕು: ಭೂಕುಸಿತಕ್ಕೆ ಕೊಚ್ಚಿಹೋದವು ರಸ್ತೆಗಳು

ಚಿಕ್ಕಮಗಳೂರು: ಸತತ ಪ್ರವಾಹದಿಂದಾಗಿ ಕುಗ್ಗಿ ಹೋಗಿರುವ ಬೆಂಗಳೂರು- ಮಂಗಳೂರು ನಡುವಿನ 3 ಪ್ರಮುಖ ಸಂಪರ್ಕ ರಸ್ತೆಗಳು ಹಾಗೂ ರೈಲು ಮಾರ್ಗವೂ ಕೂಡ ಶುಕ್ರವಾರ ಸಂಪೂರ್ಣ ಬಂದ್ ಆಗಿದೆ. ಇದೀಗ ಮಂಗಳೂರು-ಬೆಂಗಳೂರನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗವೆಂದರೆ ಕಾರ್ಕಳದ ಬಜೆಗೋಳಿ- ಶೃಂಗೇರಿ ಮಾರ್ಗವಾಗಿ ಸಾಗುವ ಎಸ್.ಕೆ.ಬಾರ್ಡರ್. ಆದರೆ ಇಲ್ಲೂ ಕೂಡ ಮಳೆಯ ಅಬ್ಬರ ಜಾಸ್ತಿಯಾಗಿದ್ದು ಯಾವಾಗ ಬೇಕಾದರೂ ಸಂಚಾರ ದುಸ್ತರವಾಗುವ ಸಾಧ್ಯತೆ ಇದೆ. ಸಕಲೇಶಪುರದ ದೋಣಿಗಲ್ ಬಳಿ ಸಂಭವಿಸಿದ ಭೂಕುಸಿತದಿಂದಾಗಿ ಸಂಜೆಯೇ ವಾಹನ ಸಂಚಾರ ಬಂದ್ ಆಗಿತ್ತು. ಹಾಸನ ಜಿಲ್ಲಾಡಳಿತವು ಈ […]
ನಮ ಬಿರುವೆರ್ ಹಿರಿಯಡಕ ಸಂಘಟನೆಯಿಂದ ಆರ್ಥಿಕ ನೆರವು

ಹಿರಿಯಡ್ಕ: ಹಿರಿಯಡ್ಕದ ಅಂಜಾರು ಗ್ರಾಮದಲ್ಲಿ ಅ.6ರಂದು ರಾತ್ರಿ ಬೀಸಿದ ಗಾಳಿಯ ರಭಸಕ್ಕೆ ಮಮತ ಪೂಜಾರ್ತಿ ಹಾಗೂ ಕರಂಬಾಕ್ಯಾರು ಕೃಷ್ಞಪ್ಪ ಪೂಜಾರಿ ಅವರ ಮನೆಯ ಮೇಲೆ ಮರಗಳು ಬಿದ್ದು ಸಿಮೆಂಟ್ ಶಿಟ್ ಹಾಗೂ ಹಂಚುಗಳು ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದ್ದು ನಮ ಬಿರುವೆರ್ ಹಿರಿಯಡಕ ಇದರ ಸಂಘಟನೆಯ ಪದಾಧಿಕಾರಿಗಳು ತುರ್ತು ಭೇಟಿ ನೀಡಿ ಮನೆಯವರಿಗೆ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಸುಂದರ ಪೂಜಾರಿ ಗಂಪ, ಅಧ್ಯಕ್ಷ ಶೇಖರ ಪೂಜಾರಿ, ಪ್ರಧಾನ ಕಾರ್ಯಧರ್ಶಿ ರವಿ […]
ಸತತ ಮಣ್ಣು ಕುಸಿತ: ಚಾರ್ಮಾಡಿ ಘಾಟ್ ಆ.14 ರ ವರೆಗೆ ಬಂದ್

ಚಿಕ್ಕಮಗಳೂರು-ದ.ಕ: ಚಿಕ್ಕಮಗಳೂರು- ದಕ್ಷಿಣಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಆ.14 ರವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿ ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ಆ.14ರ ಮಧ್ಯ ರಾತ್ರಿ 12 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡದ ಮಣ್ಣು ಆಗಾಗ ಕುಸಿಯುತ್ತಿದ್ದು, ಮಣ್ಣು ತೆರವು ಕಾರ್ಯ ನಡೆಯುತ್ತಿದೆ.ಆದರೆ ಶುಕ್ರವಾರ ತಡರಾತ್ರಿ ಮತ್ತು ಶನಿವಾರವೂ ಭಾರೀ ಮಳೆಯಾಗುತ್ತಿದ್ದು ಇಲ್ಲಿನ ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುವ […]