ಉಡುಪಿ: ಎಬಿವಿಪಿಯಿಂದ ನೆರೆ ಸಂತ್ರಸ್ತರಿಗೆ ಧನ ಸಂಗ್ರಹಕ್ಕೆ ಚಾಲನೆ

ಉಡುಪಿ: ಉಡುಪಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಹಮ್ಮಿಕೊಂಡ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಹಾಯ ಧನ ಸಂಗ್ರಹ ಕಾರ್ಯಕ್ಕೆ ಭಾರತೀಯ ಮಹಿಳಾ ಆಯೋಗದ ಸದಸ್ಯೆ‌ ಶ್ಯಾಮಲಾ ಕುಂದರ್‌ ಹಾಗೂ ಡಾ. ಶಿವಾನಂದ ನಾಯಕ್‌ ಶನಿವಾರ ಚಾಲನೆ ನೀಡಿದರು. ಸಂಗ್ರಹವಾದ ಮೊತ್ತವನ್ನು ಸೇವಾ ಭಾರತೀ ಟ್ರಸ್ಟ್‌ ಮುಖಾಂತರ ನೆರೆ ಸಂತ್ರಸ್ತರಿಗೆ ತಲುಪಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ತಿನ ಕಾರ್ಯರ್ತರು ಇದ್ದರು.

ಸಂತ್ರಸ್ತರಿಗೆ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಆರ್ಥಿಕ ನೆರವು

ಉಡುಪಿ: ಜಿಲ್ಲೆಯಲ್ಲಿ ಸುರಿದ ನಿರಂತರ ಗಾಳಿ ಮಳೆಗೆ ವಾಸಿಸುವ ಮನೆಯನ್ನು ಕಳೆದುಕೊಂಡು ಸಂತ್ರಸ್ತರಾಗಿರುವ ಕೊಕ್ಕರ್ಣೆ ಗ್ರಾಮ ಪಂಚಾಯ್ತಿಯ ಗಿರಿಜಾ ಪೂಜಾರ್ತಿ ಅವರಿಗೆ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆರ್ಥಿಕ ನೆರವು, ಔಷಧಿ ಮತ್ತು ಇತರ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಹಾಗೆಯೇ ನೆರೆ‌ ಸಂತ್ರಸ್ತರಿಗೆ ಅಗತ್ಯ ಪರಿಕರ ಮತ್ತು ಔಷಧಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ರಾಷ್ಟ್ರೀಯ ಆಡಳಿತ ಮಂಡಳಿ ಸದಸ್ಯ‌ ಬಸ್ರೂರು ರಾಜೀವ್‌ ಶೆಟ್ಟಿ, ಉಡುಪಿ […]

ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ:ಸಭೆ

ಕುಂದಾಪುರ: ಸಂಘದ ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯು ಸಂಪೂರ್ಣ ಸಹಕಾರ ಕೊಟ್ಟರೆ ಆ ಸಂಸ್ಥೆಯು ಉತ್ತಮ ಪ್ರಗತಿಯತ್ತ ನಡೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಪಂಚಗಂಗಾ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ದೇವಾಡಿಗ ಹೇಳಿದರು. ಅವರು ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬುಧವಾರ ನಡೆದ ೨೦೧೮-೧೯ನೇ ಸಾಲಿನ ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಘದ ನಿರ್ದೇಶಕಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ […]

ಹೆಮ್ಮಾಡಿ : ವಿದ್ಯಾರ್ಥಿ ಸರಕಾರ – ವಿವಿಧ ಸಂಘಗಳ ಉದ್ಘಾಟನೆ

ಕುಂದಾಪುರ:  ಶಾಲಾ ಸರ್ಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ   ಇಲ್ಲಿನ ಜನತಾ ಪ್ರೌಢ ಶಾಲೆಯಲ್ಲಿ  ಇತ್ತೀಚೆಗೆ ಜರಗಿತು. ಭಂಡಾರ್‌ಕಾರ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಎಮ್. ಗೊಂಡಾ ವಿದ್ಯಾರ್ಥಿ ಸರ್ಕಾರ ಮತ್ತು ವಿವಿಧ ಸಂಘಗಳನ್ನು ಉದ್ಘಾಟಿಸಿ,  ಇಂದಿನ ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕ ದಿನಕರ್ ಎಸ್. ವಹಿಸಿ ಶಾಲಾ ಸರ್ಕಾರದ ಸದಸ್ಯರುಗಳಿಗೆ ಪ್ರಮಾಣ ವಚನವನ್ನು ಭೋದಿಸಿದರು. ಗಣಿತ ಶಿಕ್ಷಕ ಶ್ರೀಧರ ಗಾಣಿಗ  ಸ್ವಾಗತಿಸಿದರು. ವಿವಿಧ ಸಂಘಗಳ […]

ಸಂಪುಟ ರಚನೆಯಾಗದಿದ್ದರೂ ನೆರೆ ಪರಿಹಾರಕ್ಕೆ ತೊಡಕಾಗಿಲ್ಲ: ಕೆ. ರಘುಪತಿ ಭಟ್

ಉಡುಪಿ: ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಅನಂತರ ನೆರೆ ಹಾವಳಿ ಇತ್ಯಾದಿ ಹಲವಾರು ಪ್ರತಿಕೂಲ ಕಾರಣಗಳಿಂದ ಸಂಪುಟ ವಿಸ್ತರಣೆ ಮಾಡಲಾಗದಿದ್ದರೂ ಇಂದು ಉತ್ತರಕರ್ನಾಟಕದಲ್ಲಿ ಭೀಕರ ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ಪರಿಹಾರ ಕಾರ್ಯಾಚರಣೆ ನಡೆಸುವಲ್ಲಿ ಯಾವುದೇ ತೊಡಕಾಗಿಲ್ಲ. ಈಗಾಗಲೇ ಮೂರು ದಿನಗಳಿಂದ ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನೆರೆ ಪೀಡಿತ ಪ್ರದೇಶಗಳಲ್ಲಿ ಬೀಡು ಬಿಟ್ಟು ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮತ್ತು ಪರಿಹಾರ ಕಾರ್ಯಾಚರಣೆಗಾಗಿಯೇ ಶಾಸಕರುಗಳ ನಿಯೋಗವನ್ನು ರಚಿಸಿ […]