ಉಡುಪಿ: ಜಿಲ್ಲಾ ಮಟ್ಟದ ಸ್ಕೌಟರ್ ಗೈಡರ್ ಸಮಾವೇಶ

ಉಡುಪಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಸ್ಕೌಟರ್‍ಗಳ ಸಮಾವೇಶವು ಇತ್ತೀಚೆಗೆ ಯು ಕಮಲ ಬಾಯಿ ಹೈಸ್ಕೂಲ್‍ನಲ್ಲಿ ನಡೆಯಿತು.     ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಐದು ವಲಯಗಳಾದ ಉಡುಪಿ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಕುಂದಾಪುರದ ಶಿಕ್ಷಣಾಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರು ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ, ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಕೌಟ್ಸ್ ಗೈಡ್ಸ್ ದಳ ಹೊಂದಿರಬೇಕು ಹಾಗು ಚಟುವಟಿಕೆಯಿಂದ ಕೂಡಿರಬೇಕು ಎಂದರು. ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ಎಡ್ವಿನ್ […]

ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಮತ್ತು ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್

ಉಡುಪಿ: 2018-19 ನೇ ಸಾಲಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಘಟಕದ ಒಳಗಿನ ಕಡ್ಡಾಯ ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು 4 % ಮಿತಿಗೊಳಿಸಿ, ಆಗಸ್ಟ್ 13 ರಂದು ಮಧ್ಯಾಹ್ನ 2 ಗಂಟೆಗೆ ನಡೆಸಲಾಗುವುದು ಮತ್ತು ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್‍ನ್ನು ಆಗಸ್ಟ್ 14 ರಂದು ಬೆಳಗ್ಗೆ 10.30 ರಿಂದ ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿ ನಡೆಸಲಿದ್ದು, ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಸಂಬಂಧಪಟ್ಟ ಶಿಕ್ಷಕರು ವೇಳಾಪಟ್ಟಿಯಂತೆ ಕೌನ್ಸಿಲಿಂಗ್‍ಗೆ ಹಾಜರಾಗುವಂತೆ ಮತ್ತು ಹೆಚ್ಚಿನ […]

ಆಪ್ತ ಸಮಾಲೋಚಕರ ಹುದ್ದೆ-ಅರ್ಜಿ ಆಹ್ವಾನ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಉಡುಪಿ (ರಿ), ಮಾನಸಿಕ ಆರೋಗ್ಯ ವಿಭಾಗ ಇಲ್ಲಿಗೆ 9 ಜನ ಆಪ್ತ ಸಮಾಲೋಚಕರುಗಳು ಪ್ರತೀ ವಾರದಲ್ಲಿ ಒಂದೊಂದು ದಿನಗಳಲ್ಲಿ ಆಪ್ತ ಸಮಾಲೋಚನೆ ಮಾಡಲು ಬೇಕಾಗಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಯವರ ಕಚೇರಿ, ಉಡುಪಿ, ದೂರವಾಣಿ ಸಂಖ್ಯೆ: 0820-2526919 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.  

ಪ್ರಾಕೃತಿಕ ವಿಕೋಪ : ತಕ್ಷಣ ಸ್ಪಂದಿಸಿ, ಗರಿಷ್ಠ ನೆರವು ನೀಡಿ: ಶೋಭಾ ಕರಂದ್ಲಾಜೆ

 ಉಡುಪಿ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೀವ ಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟಕ್ಕೊಳಗಾದವರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ,  ಅಗತ್ಯ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಿ, ಪರಿಹಾರ ವಿತರಣೆ ಸಂದರ್ಭದಲ್ಲಿ ಸಂತ್ರಸ್ಥರಿಗೆ ಗರಿಷ್ಠ ಪರಿಹಾರ ಒದಗಿಸುವಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಉಡುಪಿ-ಚಿಕ್ಕಮಗಳೂರು ಜಿಲ್ಲೆಯ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದ್ದಾರೆ.      ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಂಸದರ ಸಭಾಂಗಣದಲ್ಲಿ ನಡೆದ ನೆರೆ ಹಾವಳಿ ಮತ್ತು ಪ್ರಾಕೃತಿಕ ವಿಕೋಪ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಳೆಯಿಂದ […]

ಆ.11: ಶಿರಿಯಾರ ರಾಮ ಮ೦ದಿರ ಶ್ರಾವಣ ಏಕಾದಶಿ ಸ೦ಭ್ರಮ

ಉಡುಪಿ: ಶಿರಿಯಾರ ಗ್ರಾಮದ ಕಲ್ಮರ್ಗಿ ಶ್ರೀರಾಮ ಮ೦ದಿರದಲ್ಲಿ ಆ.11 ರ೦ದು ಶ್ರಾವಣ ಶುಕ್ಲ ಪಕ್ಷ ಸವ್ವೆಕಾದಶಿ ಪ್ರಯುಕ್ತ ರಾತ್ರಿ ೮ ಗ೦ಟೆ ಯಿ೦ದ ವಿಶೇಷ ಭಜನಾ ಕಾಯ೯ಕ್ರಮ ಶಿರಿಯಾರ ನಗರ ಭಜನೆತ೦ಡದಿ೦ದ ಜರಗಲಿದೆ. ಶ್ರಾವಣ ಏಕಾದಶಿ ಪ್ರಯುಕ್ತ ಪ್ರಭು ಶ್ರೀರಾಮಚ೦ದ್ರ ಸಪರಿವಾರ ದೇವರಿಗೆ ವಿಶೇಷ ಪೂಜೆ, ಅಲ೦ಕಾರ ಹಾಗೂ ಧಾಮಿ೯ಕ ಕಾಯ೯ಕ್ರಮಗಳು ಜರಗಲಿದೆ.ಎ೦ದು ನ್ಯಾಯವಾದಿ ಶಿರಿಯಾರ ಪ್ರಭಾಕರ ನಾಯಕ್‌ ತಿಳಿಸಿದ್ದಾರೆ.