ಸಿ.ಎಂ ತವರು ಜಿಲ್ಲೆಯ ಜಿಲ್ಲಾಧಿಕಾರಿ ಸೇರಿ ಮೂರು ಮಂದಿ ವರ್ಗಾವಣೆ: ಅಧಿಕಾರಿಗಳ ದಿಢೀರ್ ವರ್ಗಾವಣೆ
ರಾಜ್ಯ : ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಇನ್ನಷ್ಟು ವೇಗ ದೊರೆತಿದೆ. ಸಿ.ಎಂ ತವರು ಜಿಲ್ಲೆಯ ಜಿಲ್ಲಾಧಿಕಾರಿ ಸೇರಿದಂತೆ ಮೂರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರನ್ನು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಹುದ್ದೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಬಿ. ಶಿವಕುಮಾರ್ ಅವರನ್ನು ನೇಮಕ ಮಾಡಿ ಆದೇಶಿಸ ಹೊರಡಿಸಲಾಗಿದೆ. ಉಳಿದಂತೆ ರಾಮನಗರ ಜಿಲ್ಲಾ […]
ಮಳೆಗಾಲದಲ್ಲಿ ನಿಮ್ಮ ಪಾದಗಳ ಮೇಲೆ ಕಣ್ಣಿರಲಿ: ಇಲ್ಲಿದೆ ಡಾಕ್ಟರ್ ಕೊಟ್ಟ ಬೊಂಬಾಟ್ ಟಿಪ್ಸ್
ಮಳೆಗಾಲವು ಗಿಡ-ಮರಗಳಿಗೆ ಹೇಗೆ ಸುಗ್ಗಿಯೊ, ಹಾಗೇ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳಿಗೂ ಕೂಡ ಸುಗ್ಗಿ ಕಾಲ. ಇದೇ ಶಿಲೀಂದ್ರಗಳಿಂದಲೂ ಕೂಡ ನಮ್ಮ ಪಾದದಲ್ಲಿ ವಿಧ ವಿಧ ನಮೂನೆಯ ರೋಗಗಳು ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಮರೆಯದಿರಿ. ವಾತಾವರಣದಲ್ಲಿ ತೇವ ಅಧಿಕವಿರುವುದರಿಂದ ಮಳೆಗಾಲದಲ್ಲಿ ಪಾದಗಳಲ್ಲಿ ತುರಿಕೆ ಹಾಗೂ ಅನೇಕ ಶಿಲೀಂಧ್ರಗಳ ಸೋಂಕು(fungal infection)ಕಾಡುವುದು ಅಧಿಕ. ಇಲ್ಲಿ ಪಾದಗಳನ್ನು ಹೇಗೆ ಆರೈಕೆ ಮಾಡಬೇಕು ಎನ್ನುವ ಕುರಿತು ಒಂದಷ್ಟು ಟಿಪ್ಸ್ ಗಳಿವೆ. ಪಾದಗಳ ಆರೈಕೆ ಹೀಗಿರಲಿ ಪಾದಗಳನ್ನು ಸದಾ ಸ್ವಚ್ಛ ಹಾಗೂ ಶುಷ್ಕವಾಗಿಡಲು ಪ್ರಯತ್ನಿಸಿ. […]
ಕುಂದಾಪುರ:ದೇವಸ್ಥಾನದೊಳಗೆ ನುಗ್ಗಿತು ನೀರು
ಕುಂದಾಪುರ : ದಿನವಿಡೀ ಸುರಿದ ಭಾರೀ ಮಳೆಗೆ ಪುರಾಣ ಪ್ರಸಿದ್ದ ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೆ ನೀರು ಪ್ರವೇಶಿಸಿ ದೇವಿಯ ಮೂರ್ತಿಯನ್ನು ತೋಯಿಸಿದೆ. ಸೋಮವಾರ ಕುಬ್ಜಾ ನದಿ ದೇವಸ್ಥಾನ ಪ್ರವೇಶ ಮಾಡಿದ್ದು, ಮಂಗಳವಾರ ಸಂಜೆ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ಕುಬ್ಜೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವರ ಪಾದ ತೊಳೆದಿದ್ದಾಳೆ. ನೀರು ಆಗಮನದ ಬಳಿಕ ದೇವಸ್ಥಾನದ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತೀ ವರ್ಷ ಕುಬ್ಜಾ ನದಿ ದೇವಸ್ಥಾನ ಪ್ರವೇಶಿಸಿ ದೇವಿಯ ಪಾದ ತೊಳೆಯುತ್ತಾಳೆ ಎನ್ನುವುದು […]