ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸಿಪಿಐಎಂ ಪ್ರತಿಭಟನೆ

ಉಡುಪಿ: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಿ ಕೇಂದ್ರದ ಆಡಳಿತಕ್ಕೆ ಒಳಪಡಿಸಿದ ಕೇಂದ್ರ ಸರ್ಕಾರದ ನೀತಿಯು ಸಂವಿಧಾನ ಮತ್ತು ಪ್ರಜಾಪ್ರಭುತ್ವ ತತ್ವಗಳಿಗೆ ಮಾರಕವಾಗಿದೆ. ರಾಜ್ಯಪಾಲರ ಆಡಳಿತ […]

ಕುಂದಾಪುರ:ಇನ್ನೂ ನಿಂತಿಲ್ಲ ಮಳೆಯ ರೌದ್ರ ಆರ್ಭಟ !

ಕುಂದಾಪುರ: ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿದ ಭಾರೀ ಮಳೆ ಬುಧವಾರವೂ ಮುಂದುವರಿದಿದೆ. ಸೋಮವಾರ ರಾತ್ರಿಯಿಂದ ಎಡೆಬಡದೆ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಸೌಪರ್ಣಿಕಾ, ಚಕ್ರಾ ಹಾಗೂ ವಾರಾಹಿ ನದಿಗಳು ತುಂಬಿ ಹರಿದ ಪರಿಣಾಮ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದ್ದು, ಸ್ಥಳೀಯ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಹಡವು, ಪಡುಕೋಣೆ ಮುಂತಾದ ಊರುಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿವೆ. ಮನೆಗಳು, ಕೃಷಿ ಗದ್ದೆ, ತೆಂಗಿನ ತೋಟಗಳಲ್ಲಿ ಆಳೆತ್ತರದ ನೀರು ನಿಂತಿದ್ದು, ದೋಣಿಗಳ […]

ಸುಷ್ಮಾ ಸ್ವರಾಜ್ ನಿಧನಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ

ಉಡುಪಿ: ತನ್ನ ಸಣ್ಣ ವಯಸ್ಸಿನಿಂದಲೆ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಬಂದು, ದೇಶ ಸೇವೆಗಾಗಿ ತನ್ನನ್ನು ಮುಡುಪಾಗಿಸಿಕೊಂಡಿದ್ದ, ವಿವಿಧ ಹುದ್ದೆಗಳನ್ನು ಅಲಂಕರಿಸಿ ನಮ್ಮ ಭಾರತ ಸರ್ಕಾರದ ಹೆಚ್ಚು ಜವಾಬ್ಧಾರಿಯುಳ್ಳ ಹಾಗೂ ಶ್ರೇಷ್ಠ ಸ್ಥಾನವಾದ ವಿದೇಶಾಂಗ ಸಚಿವೆಯಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಸರಳ ಸಜ್ಜನಿಕೆಯ ನಮ್ಮ ದೇಶದ ಧೀಮಂತ ನಾಯಕಿ ಸುಷ್ಮಾ ಸ್ವರಾಜ್   ನಿಧನರಾಗಿರುವುದು ದುಃಖ ತಂದಿದೆ ಎಂದು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆಗೆ ಕುಸಿದು ಬಿತ್ತು ಕಬ್ಬಿನಾಲೆ ಮತ್ತಾವು ಸೇತುವೆ: ದಾರಿ ಕಾಣದೇ ಕಂಗಾಲಾದ್ರು ಗ್ರಾಮಸ್ಥರು!

ವರದಿ -ರಾಮ್ ಅಜೆಕಾರು ಕಾರ್ಕಳ ಕಾರ್ಕಳ: ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಗೆ ಮುದ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿ ಯ ಕಬ್ಬಿನಾಲೆ ಮತ್ತಾವು ಮರದ ಸೇತುವೆಯು ನೀರಿನ ಹೊಡೆತಕ್ಕೆ ಸಿಲುಕಿ  ಕೊಚ್ಚಿಕೊಂಡೇ ಹೋಗಿದೆ. ವರುಣನ ಆರ್ಭಟ ಕ್ಕೆ ಸಿಲುಕಿದ  ಮರದ ಸೇತುವೆಯ ದಿಮ್ಮಿಗಳು ಚೆಲ್ಲಾಪಿಲ್ಲಿಯಾಗಿ ಕೊಚ್ಚಿಹೋಗಿದ್ದು ಜನರು ಅತ್ತಿತ್ತ ಸಾಗಲಾಗದೆ  ಕಂಗಾಲಾಗಿದ್ದಾರೆ. ನದಿ ನೀರಿನ ಮಟ್ಟ ದಿನನಿತ್ಯ ಹೆಚ್ಚುತ್ತಿದೆ.  ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಮರದ ಸೇತುವೆ ಆಧಾರಕೊಂಡಿಯಾಗಿತ್ತು.  ಸರಿ ಸುಮಾರು ನೂರಕ್ಕೂ ಹೆಚ್ಚು ಜನರು ಮತ್ತಾವು ಪರಿಸರದಲ್ಲಿ ವಾಸಿಸುತ್ತಿದ್ದು  […]

ನಿಟ್ಟೆ ತಾಂತ್ರಿಕ ಕಾಲೇಜಿಗೆ ಡೈಮಂಡ್ ರೇಟಿಂಗ್

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಕ್ಯೂ.ಎಸ್.ಐ-ಗೇಜ್ ಭಾರತೀಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮೌಲ್ಯಾಂಕನದಲ್ಲಿ ಡೈಮಂಡ್ ರೇಟಿಂಗ್ ಪಡೆದುಕೊಂಡಿದೆ. ಕ್ಯೂ.ಎಸ್.ಐ-ಗೇಜ್ ಮೌಲ್ಯಾಂಕನವನ್ನು ಇಂಗ್ಲೆಂಡಿನ ಕ್ಯೂ.ಎಸ್.ಕ್ವಾಕರೆಲಿ ಸೈಮಂಡ್ಸ್ ಲಿಮಿಟೆಡ್ ಮತ್ತು ಭಾರತದ ಎರಾ ಫೌಂಡೇಶನ್ ಜಂಟಿಯಾಗಿ ನಡೆಸುತ್ತಾರೆ. ಕ್ಯೂ.ಎಸ್. ಕ್ವಾಕರೆಲಿ ಸೈಮಂಡ್ಸ್ ಲಿಮಿಟೆಡ್ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟ ಅಂತಾರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆಯಾಗಿದೆ. ಕ್ಯೂ.ಎಸ್.ಐ-ಗೇಜ್ ಮೌಲ್ಯಾಂಕನವು ಒಟ್ಟು ೬ ಪ್ರಾಥಮಿಕ ಹಾಗೂ ೨ ದ್ವಿತೀಯ ಮಾನದಂಡಗಳ ಆಧಾರಿತ ಗುಣಮಟ್ಟದ ಮೌಲ್ಯಮಾಪನ ಪ್ರಕ್ರಿಯೆಯಾಗಿದೆ.  ಪ್ರಸ್ತುತ ಈವರೆಗಿನ ಕಾಲೇಜು ಮಟ್ಟದ ರೇಟಿಂಗ್‌ನಲ್ಲಿ […]