ಮಂಗಳೂರು: ಕರಾವಳಿಯಾದ್ಯಂತ ಭಾರೀ ಮಳೆ: ತೀವ್ರಗೊಂಡ ಕಡಲ್ಕೊರೆತ

ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಹೀಗಾಗಿ ಕಡಲ್ಕೊರೆತ ತೀವ್ರಗೊಂಡಿದ್ದು, ಮಂಗಳೂರು ‌ಹೊರವಲಯ ಉಳ್ಳಾಲ ವ್ಯಾಪ್ತಿಯ ಸೋಮೇಶ್ವರ ಬೆಟ್ಟಂಪಾಡಿಯಲ್ಲು ಅಲೆಗಳ ರಭಸಕ್ಕೆ ರಸ್ತೆ ಸಮುದ್ರ ಪಾಲಾಗಿದೆ. ಸೋಮೇಶ್ವರ, ಉಚ್ಚಿಲ, ಕೈಕೊ ಪ್ರದೇಶದಲ್ಲಿ ಕಡಲ್ ಕೊರೆತ ತೀವ್ರಗೊಂಡಿದೆ. ಅನೇಕ ಮನೆಗಳು ಅಪಾಯದ ಅಂಚಿನಲ್ಲಿದೆ. ಈಗಾಗಲೇ ಜಿಲ್ಲಾಡಳಿತ ಮೀನುಗಾರರಿಗೆ, ಹಾಗೂ ನದಿ ತಟದಲ್ಲಿ ವಾಸಿಸುವ ಮನೆಗಳಿಗೆ ಎಚ್ಚರಿಯನ್ನು ನೀಡಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರೆಡ್ ಅಲಟ್೯ ಘೋಷಿಸಲಾಗಿದೆ.

ಮಾಜಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಹೃದಾಯಘಾತದಿಂದ ‌ನಿಧನ

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಆ.6ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದಾಗ ಕ್ಯಾಬಿನೆಟ್ ನಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಈ ಬಾರಿ ಆರೋಗ್ಯ ಸಮಸ್ಯೆ ಕಾರಣಕ್ಕೆ ಮೋದಿ ಸಂಪುಟದಿಂದ ಹೊರಗೆ ಉಳಿದಿದ್ದರು. ಸುಷ್ಮಾ ಸ್ವರಾಜ್ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆ. ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ […]

ಉಡುಪಿ: ಜಿಲ್ಲೆಯಾದ್ಯಂತ ಮಳೆಯ‌ ಅಬ್ಬರ: ಹಲವೆಡೆ ಹಾನಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಗಾಳಿ, ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೆರೆಯ ಭೀತಿ ಉಂಟಾಗಿದೆ. ನಗರದ ಹಲವೆಡೆ ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ.   ಅಜ್ಜರಕಾಡು ಸಮೀಪ ಆರು ವಿದ್ಯುತ್ ಕಂಬ ಉರುಳಿ ಮೂರು ಗೂಡಂಗಡಿಗಳಿಗೆ ಹಾನಿ ಉಂಟಾಗಿದೆ. ಡಯಾನಾ ಥಿಯೇಟರ್ ಬಳಿ ಮನೆಯ ಮೇಲೆ‌ಮರ ಉರುಳಿ ಬಿದ್ದಿದೆ. ಕಾಪು, ಬ್ರಹ್ಮಾವರ ಪರಿಸರದಲ್ಲೂ ಹಲವೆಡೆ ಹಾನಿ ಸಂಭವಿಸಿದೆ. ಸೋಮವಾರ ರಾತ್ರಿಯಿಂದಲೇ ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯ […]

ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರ; ಕೆಲ ಗಂಟೆಗಳ ಕಾಲ ಸಂಚಾರ ಸ್ಥಗಿತ

ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ಮಂಗಳವಾರ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಮಾರು ಒಂದುವರೆ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅನಂತರ ಚಾರ್ಮಾಡಿ ಹಸನಬ್ಬ ತಂಡ ಮರವನ್ನು ತೆರವುವ ಮಾಡುವಲ್ಲಿ ಯಶಸ್ವಿಯಾದರು. ಮಂಗಳೂರಲ್ಲಿ ಹಾನಿ: ಮಳೆಯಿಂದಾಗಿ‌ ಮಂಗಳೂರು ನಗರದ ಹಲವೆಡೆಯೂ ಹಾನಿಯುಂಟಾಗಿದೆ. ನಂತೂರು ಬಳಿಯ ಕಂಡೆಟ್ಟು ಶಕ್ತಿನಗರ ರಸ್ತೆಯಲ್ಲಿ ಮರ ಉರುಳಿ ಬಿದ್ದಿದೆ. ಭಾರೀ ಮಳೆಗೆ ಗುಡ್ಡ ಜರಿತ […]

ದ.ಕ.ಜಿಲ್ಲೆ: ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಅ. 8ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ. ಆಗಸ್ಟ್ 7 ರಿಂದ 9 ರವರೆಗೆ ರೆಡ್ ಅಲರ್ಟ್ ಜಾರಿಯಲ್ಲಿದ್ದು ಮುಂಜಾಗೃತಾ ಕ್ರಮವಾಗಿ ರಜೆ ಘೊಷಿಸಲಾಗಿದೆ.