ಮಾದಕ‌ ವ್ಯಸನದ ಕುರಿತು ಯುವಜನತೆಗೆ ಅರಿವು ಮೂಡಿಸಬೇಕಿದೆ: ನಿಶಾ ಜೇಮ್ಸ್

ಉಡುಪಿ: ಮಾದಕ ದ್ರವ್ಯವನ್ನು ಯುವ ಸಮುದಾಯದ ಸಂಪೂರ್ಣವಾಗಿ ತಿರಸ್ಕರಿಸಬೇಕು. ಒಮ್ಮೆ ಇದರ ಚಟಕ್ಕೆ ದಾಸರಾದರೆ ಇಡೀ ಜೀವನವೇ ನರಕ ಆಗುತ್ತದೆ. ಕುತೂಹಲಕ್ಕಾಗಿ ಆರಂಭಿಸುವ ಮಾದಕ ವ್ಯಸನವೂ ಬಳಿಕ ಚಟವಾಗಿ ಮಾರ್ಪಾಡುತ್ತದೆ. ಅಪಾಯದ ದಾರಿಯಲ್ಲಿ ಸಾಗುವಂತೆ ಮಾಡಿ ಅಪರಾಧ ಚಟುವಟಿಕೆಗೆ ಇಳಿಸುವ ಈ ವ್ಯಸನದ ಕುರಿತು ಯುವಜನರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹೇಳಿದರು. ಉಡುಪಿ ಜಿಲ್ಲಾ ಪೊಲೀಸ್‌ ಹಾಗೂ ರೋಟರಿ ಕ್ಲಬ್‌ ಉಡುಪಿ ರಾಯಲ್‌ ಸಹಭಾಗಿತ್ವದಲ್ಲಿ ಮಾದಕ […]

ಆ.15: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ ನಲ್ಲಿ‌ ವೆಲಂಕಣ್ಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನೆ

ಉಡುಪಿ: ಕಲ್ಮಾಡಿ ಸ್ಟೆಲ್ಲಾ ಮಾರಿಸ್‌ ದೇವಾಲಯದಲ್ಲಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನೋತ್ಸವ ಹಬ್ಬ ಆಗಸ್ಟ್‌ 15ರಂದು ದೇವಾಲಯದಲ್ಲಿ ನಡೆಯಲಿದೆ. ವೆಲಂಕಣಿ ಮಾತೆಯ ಹಬ್ಬವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಾಲಯದ ಪ್ರಧಾನ ಧರ್ಮಗುರು ಆಲ್ಬನ್‌ ಡಿಸೋಜ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಗಸ್ಟ್‌ 6ರಿಂದ 14ರ ವರೆಗೆ ಉತ್ಸವದ ಪೂರ್ವಭಾವಿಯಾಗಿ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆಗಳು ಜರಗಲಿದ್ದು, 9 ದಿನಗಳ ನೊವೆನಾ ಸಮಯದಲ್ಲಿ ವಿಶೇಷ ಉದ್ದೇಶಗಳಿಗೋಸ್ಕರ ಪ್ರಾರ್ಥನೆಗಳನ್ನು ನಡೆಸಲಾಗುವುದು. ಆ. 6ರಂದು ಸಂಜೆ 3.45ಕ್ಕೆ […]

ಉಡುಪಿ: ಶ್ರೀಕೃಷ್ಣ ಮಠದಲ್ಲಿ ವಿವಿಧ ಸ್ಪರ್ಧೆಗೆ ಶ್ರೀಗಳಿಂದ ಚಾಲನೆ

ಉಡುಪಿ: ಶ್ರೀ ಕೃಷ್ಣ ಮಠದ ಮಧ್ವಾಂಗಣದಲ್ಲಿ, ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಜರಗಲಿರುವ ಸ್ಪರ್ಧೆಗಳನ್ನು ಪರ್ಯಾಯ ಪಲಿಮಾರುಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು. ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ  ನಡೆಯಿತು.ಸಂಯೋಜಕರಾಗಿ ರಮೇಶ್, ಸುಬ್ರಹ್ಮಣ್ಯ ಬಿ.ಕೋಟೇಶ್ವರ,ಶೃಂಗೇಶ್ವರ್ ಪಾಲ್ಗೊಂಡರು.

ಶ್ರೀ ಕೃಷ್ಣ ಮಠದಲ್ಲಿ ಹರಿಕಥಾ ಕಾರ್ಯಕ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹರಿಕಥಾ ಪರಿಷತ್ತು ಮಂಗಳೂರು,ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಬೆಂಗಳೂರು ಮತ್ತು ಶ್ರೀಹಂಡೆದಾಸ ಪ್ರತಿಷ್ಟಾನ ಕಾರ್ಕಳ ಇವರ ಸಂಯುಕ್ತ ಸಹಯೋಗದೊಂದಿಗೆ ಪ್ರಸ್ತುತಪಡಿಸುವ 60 ದಿನಗಳ ಪರ್ಯಂತ ಹರಿಕಥಾ ಜ್ಞಾನ ಯಜ್ಞದ ಅಂಗವಾಗಿ ಅಶ್ವತ್ಥಪುರದ ಚಂದ್ರಕಾಂತ ಭಟ್ ಇವರಿಂದ ‘ರಾಮವನಗಮನ’ ಎಂಬ ಕಥಾಭಾಗದ ಹರಿಕಥೆ ನಡೆಯಿತು.

ನಿಟ್ಟೆಯಲ್ಲಿ ಗಣಿತಶಾಸ್ತ್ರ ಕಾರ್ಯಾಗಾರ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗವು ‘ಡಿಸ್ಕ್ರೀಟ್ ಮ್ಯಾತಮ್ಯಾಟಿಕ್ಸ್ -ಕಂಪ್ಯೂಟೇಶನಲ್ ಸೊಲ್ಯೂಶನ್ ಆಫ್ ಡಿಫರೆನ್ಶಿಯಲ್ ಇಕ್ವೇಶನ್’ ಎಂಬ ವಿಷಯದ ಬಗೆಗೆ ಇತ್ತೀಚೆಗೆ ಪ್ರಾಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಎನ್.ಐ.ಟಿ.ಕೆಯ ಎಂ.ಎ.ಸಿ.ಎಸ್ ವಿಭಾಗದ ಪ್ರೊಫೆಸರ್ ಡಾ.ವಿಶ್ವನಾಥ್ ಹಾಗೂ ಎಸ್.ಎಂ.ವಿ.ಐ.ಟಿ.ಎಂ ಬಂಟಕಲ್‌ನ ಕಂಪ್ಯೂಟರ್‌ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕುಮುದಾಕ್ಷಿ ಸ್ವಾಗತಿಸಿದರು. ಸಹಪ್ರಧ್ಯಾಪಕಿ ಅಂಬಿಕ ಹಾಗೂ ಭವ್ಯ ಡಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕ ಡಾ. ಶಂಕರನ್ ವಂದಿಸಿದರು.