ಹಿರಿಯಡಕ : ‘ವಿಶ್ವವಿಜೇತ’ ಕಾರ್ಯಕ್ರಮ

ಉಡುಪಿ, ಆಗಸ್ಟ್ 1: ಸ್ವಾಮಿ ವಿವೇಕಾನಂದರ ಆದರ್ಶಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು ಮಂಗಳೂರು ರಾಮಕೃಷ್ಣ ಮಠದ ಸಂಪನ್ಮೂಲ ವ್ಯಕ್ತಿ ಶ್ರೀಕೃಷ್ಣ ಉಪಾಧ್ಯಾಯ ಆಶಿಸಿದರು. ಅವರು ಇತ್ತೀಚೆಗೆ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಮಕೃಷ್ಣ ಮಠ ಮಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ “ವಿಶ್ವವಿಜೇತ” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ, ವಿವೇಕಾನಂದರ ರಾಷ್ಟ್ರಪ್ರೇಮ, ಪಾಂಡಿತ್ಯ, ಆತ್ಮವಿಶ್ವಾಸ […]

ಖಾಸಗಿಯಾಗಿ ನಡೆಯುತ್ತಿರುವ ಪಿ.ಜಿ.ಗಳ ಮಾಹಿತಿ ನೀಡುವಂತೆ ಸೂಚನೆ

ಉಡುಪಿ, ಆಗಸ್ಟ್ 1: ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ವಾಸ್ತವ್ಯ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿಯಾಗಿ ನಡೆಸುತ್ತಿರುವ ಮಹಿಳೆಯರ ಮತ್ತು ಮಕ್ಕಳ ಹಾಸ್ಟೆಲ್/ಪೇಯಿಂಗ್ ಗೆಸ್ಟ್(ಪಿ.ಜಿ.)ಗಳ ಮಾಹಿತಿಯನ್ನು, ಸಂಬಂಧಿತ ವ್ಯಕ್ತಿ/ಸಂಸ್ಥೆಗಳು ನಿಗದಿತ ನಮೂನೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಗಸ್ಟ್ 31 ರೊಳಗಾಗಿ ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ, ಮಣಿಪಾಲ, ದೂರವಾಣಿ ಸಂಖ್ಯೆ: […]

ಈ ಯುವಕನ ಕೈಯಲ್ಲಿ ಅರಳುವ ಚಿತ್ರ ನೋಡಿದ್ರೆ ಬೆರಗಾಗ್ತೀರಿ! ಕಲೆಯ ಗಣಿ, ಬೈಲೂರಿನ ನಿಖಿತ್ ಆಚಾರ್ಯ

ಕಲೆ ಎನ್ನುವುದು ಎಲ್ಲರಿಗೂ ಸಿದ್ಧಿಸುವುದಿಲ್ಲ.ಅದು ಆಸಕ್ತಿಯಿಂದ, ಸತತ ಪರಿಶ್ರಮದಿಂದ ನಮ್ಮಲ್ಲಿ ಹುಟ್ಟಿಕೊಂಡರೆ ಮಾತ್ರ ಅದನ್ನು ಲೋಕಕ್ಕೆ ತೆರೆದಿಡಲು ಸಾಧ್ಯ. ಚಿತ್ರಕಲೆಯೂ ಸಾಮಾನ್ಯವಾದುದಲ್ಲ. ಕಲ್ಪನೆಯಲ್ಲಿದ್ದದ್ದನ್ನು ಕಾಗದದಲ್ಲೋ, ಗೋಡೆಯಲ್ಲೋ ಬಣ್ಣದೊಂದಿಗೆ ಮೂಡಿಸುವ ಪ್ರತಿಭೆಗೆ ಅದರದ್ದೇ ಆದ ಘನತೆ ಇದೆ. ಇಲ್ಲೊಬ್ಬ ಗ್ರಾಮೀಣ ಭಾಗದ ಯುವಕನಿದ್ದಾನೆ. ಚಿತ್ರಕಲೆಯ ಎಲ್ಲಾ ಪ್ರಕಾರಗಳಲ್ಲೂ ಸೈ ಅನ್ನಿಸಿಕೊಂಡು ಕಲೆಯನ್ನು ತನ್ನ ಬದುಕಿನ ಭಾಗವಾಗಿಸಿಕೊಂಡ ಈ ಯುವಕ ತಾನು ಮಾಡುವ ಚೆಂದ ಚೆಂದದ ಚಿತ್ರಗಳಿಂದಲೇ ಗಮನ ಸೆಳೆಯುತ್ತಿದ್ದಾರೆ. ಚಿತ್ರಕಲೆಯ ಅಪ್ಪಟ ಪ್ರತಿಭೆಯೇ ಬೈಲೂರಿನ ನಿಖಿತ್ ಆಚಾರ್ಯ, ಕಾಂತರಗೋಳಿ. […]