ರೋಟರಿ ಕ್ಲಬ್ ನಿಟ್ಟೆ -ನಿಟ್ಟೆ ಕಾಲೇಜು: ವನಮಹೋತ್ಸವ
ನಿಟ್ಟೆ: ರೋಟರಿ ಕ್ಲಬ್ ನಿಟ್ಟೆ ಹಾಗೂ ಎನ್.ಎಮ್.ಎ.ಎಮ್. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ ಇದರ ಸಹಭಾಗಿತ್ವದಲ್ಲಿ ವಿವಿಧ ಬಗೆಯ ಸಸಿ ತಳಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಣೆ ಆ. 1 ರಂದು ನಿಟ್ಟೆ ವಿದ್ಯಾಲಯದ ಆವರಣದಲ್ಲಿ ನಡೆಯಿತು. ಅರಣ್ಯಾಧಿಕಾರಿ ಪ್ರಕಾಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವನಮಹೋತ್ಸವ ಆಚರಣೆಯ ಮಹತ್ವ ಹಾಗೂ ಸಸಿಗಳ ಪಾಲನೆಯ ಕುರಿತು ವಿವರಿಸಿದರು. ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್ ಎ. ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು. ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ವೀಣಾದೇವಿ ಶಾಸ್ತ್ರೀಮಠ್ ಸ್ವಾಗತಿಸಿದರು. ಕಾರ್ಯದರ್ಶಿ ಆಲೆನ್ ರೋಷನ್ […]
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಚಾರ ಸಂಕಿರಣ
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ವೈದ್ಯಕೀಯ ಯಂತ್ರಗಳು (ಮೆಡಿಕಲ್ ಡಿವೈಸಸ್) ಮತ್ತು ಅವುಗಳ ಬಳಕೆಯ ಕುರಿತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ ನಡೆಯಿತು. ಯುಎಸ್‌ಎಯ ಬೆಕ್ಟಾನ್ ಡಿಕ್ಕಿನ್ಸನ್ ವಿಶ್ವವಿದ್ಯಾನಿಲಯದ ಸಂಶೋಧನೆ ಮತ್ತು ಅಭಿವೃದ್ಧಿ ಸಂಶೋಧಕರಾದ ಬಾಲಚಂದ್ರ ನೀರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಂತ್ರಜ್ಞಾನದಲ್ಲಿನ ನೂತನ ಬದಲಾವಣಿಗಳ ಕುರಿತು ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಾಗಿರುವ ಅಭಿವೃದ್ದಿಯ ಕುರಿತು ಪಿಪಿಟಿ ಮೂಲಕ ಮಾಹಿತಿಯನ್ನು ನೀಡಿದರು. ಕಾರ್‍ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಕಾರ್ಯಕ್ರಮ […]
ನಿಟ್ಟೆ ಕಾಲೇಜಿನ ಪ್ರಾಧ್ಯಾಪಕ ಡಾ. ಅಜಿತ್ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್‌ಗೆ ಆಯ್ಕೆ
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ| ಅಜಿತ್ ಹೆಬ್ಬಾಳೆ ಅವರು ಹೈದರಾಬಾದ್‌ನ ಇಂಟರ್ನ್ಯಾಷನಲ್ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ ಫಾರ್ ಪೌಡರ್ ಮೆಟಲರ್ಜಿ ಆಂಡ್ ನ್ಯೂ ಮೆಟೀರಿಯಲ್ಸ್ (ಎ.ಆರ್.ಸಿ.ಐ) ನಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ.
ಆ. 4ರಂದು ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ: ಪತ್ರಿಕೋದ್ಯಮ ಸಂವಾದ
ಉಡುಪಿ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪತ್ರಿಕೋದ್ಯಮ ಸಂವಾದ ಕಾರ್ಯಕ್ರಮ ಆಗಸ್ಟ್ 4ರಂದು ಬ್ರಹ್ಮಾವರ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಉಡುಪಿ ಶಾಸಕ ಕೆ. ರಘುಪತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾರ್ಯಕ್ರದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ರವೀಂದ್ರನಾಥ್ […]
ಆ.4ರಂದು ಉಡುಪಿಯಲ್ಲಿ ಪಚ್ಚೆವನ ಸಿರಿ ಅಭಿಯಾನ ಉದ್ಘಾಟನೆ
ಉಡುಪಿ: ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರವು ವಿವಿಧ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡಿರುವ ‘ಹಸಿರು ಕಲ್ಯಾಣದತ್ತ ನಮ್ಮ ನಡೆ ಪಚ್ಚೆವನ ಸಿರಿ ಅಭಿಯಾನದ ಉದ್ಘಾಟನೆ ಹಾಗೂ ವಿಚಾರ ಸಂಕಿರಣ ಆ.4ರಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಹಾಲ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮ ಅಂದು ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಕಲ್ಬರಹದಿಂದ ತಾಡೋಲೆಗೆ: ಕೊರೆದು ಬರೆದ ಆರ್ಕೈವ್ಸ್ ಪ್ರತಿ ಹಾಗೂ ಶಾಸನಗಳ ಪಡಿಅಚ್ಚು ಬಿಡುಗಡೆ […]