ಮಳೆ ಕೊಯ್ಲು ಅಳವಡಿಸಿದರೆ ಮಾತ್ರ ನ.ಸಭಾ ಸಮಾಪನ ಪ್ರಮಾಣಪತ್ರ
ಉಡುಪಿ: ಉಡುಪಿ ನಗರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾಗುವ ಮನೆ ಹಾಗೂ ಕಟ್ಟಡಗಳಿಗೆ ಮಳೆನೀರು ಕೊಯ್ಲು ವಿಧಾನ ಅಳವಡಿಕೆ ಕಡ್ಡಾಯಗೊಳಾಗಿದೆ. ಹೀಗಾಗಿ ಈ ವಿಧಾನ ಅಳವಡಿಸಿರುವ ಕಟ್ಟಡ ಹಾಗೂ ಮನೆಗಳಿಗೆ ಮಾತ್ರ ನಗರಸಭೆಯಿಂದ ಸಮಾಪನ ಪ್ರಮಾಣ ಪತ್ರ ನೀಡಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಹೇಳಿದರು. ಉಡುಪಿ ನಗರಸಭೆಯ ವತಿಯಿಂದ ಬಿಲ್ಡರ್ಸ್ ಅಸೋಸಿಯೇಶನ್, ಸಿವಿಲ್ ಎಂಜಿನಿಯರ್ ಹಾಗೂ ನಾಗರಿಕರ ಸಹಭಾಗಿತ್ವದಲ್ಲಿ ಅಜ್ಜರಕಾಡಿನ ಪುರಭವನದ ಮಿನಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಹೊಸದಾಗಿ ನಿರ್ಮಿಸುವ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ […]
ಉಡುಪಿ ಪೊದಾರ್ ಇಂಟರ್ ನ್ಯಾಷನಲ್ ಸ್ಕೂಲ್: ಕಾರ್ಗಿಲ್ ವಿಜಯ ದಿವಸ ಆಚರಣೆ
ಉಡುಪಿ : ನಗರದ ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್, ಉಡುಪಿ ಇದರ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ ಜು.26 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನ ಕರ್ನಲ್ ಶಾಂತಕುಮಾರನ್ ಭಾಗವಹಿಸಿ ಮಾತನಾಡಿ, ಸೈನಿಕರು ನಮ್ಮ ರಕ್ಷಣೆಗಾಗಿ ಹಗಳಿರುಳು ಮಳೆ, ಗಾಳಿ, ಚಳಿ ಎನ್ನದೆ ದೇಶವನ್ನು ಕಾಯುತ್ತಾರೆ.ಅವರಿಂದ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ.ಆದ್ದರಿಂದ ಅವರಿಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು. ಶಾಲಾ ಪ್ರಾಂಶುಪಾಲರಾದ ಎಮ್.ಎಸ್. ಹಿರೇಮಠ ಮಾತನಾಡಿ, ನಾವು ನಮ್ಮ ದೇಶ ಕಾಯುವ ಸೈನಿಕರನ್ನು ಗೌರವಿಸಬೇಕು.ಮಕ್ಕಳು ಮುಂದಿನ ದಿನಗಳಲ್ಲಿ […]
ಕುಂದಾಪ್ರ ಕನ್ನಡ: ಇಡೀ ಕುಂದಾಪ್ರಕ್ ಕುಂದಾಪ್ರವೇ ಸಡಗರದಂಗ್ ಇತ್
ಉಡುಪಿಯಿಂದ ಬಡಾಯಿ ಹ್ವಾರೆ ಸಿಕ್ಕು ಊರೇ ರಾಜ ಕುಂದವರ್ಮ ಆಳದ್ ಊರ್ ಕುಂದೇಶ್ವರ ಕಾಪಾಡ್ತ ಇಪ್ ಊರ್ ಕುಂದಾಪುರ. ಬ್ರಹ್ಮಾವರದ್ ನಂತ್ರ ಅದ್ರಲ್ಲೂ ಮಾಬುಕಳ ದಾಟ್ರ್ ಮೇಲಂತೂ ಈ ಕುಂದಾಪ್ರದ್ ಸೊಗಡ್ ಸಿಕ್ಕತ್ ಕಾಣಿ. ಇಲ್ಲಿನ್ ಜನ, ಜನ್ರ್ ಜೀವನ, ಅವ್ರ್ ಬಾಷಿ, ಅವ್ರ್ ಉಪ್ಚಾರ ಅನುಭವಿಸ್ಯೇ ಕಾಣ್ಕ್. ಕರಾವಳಿ ಬದಿಯಂಗ್ ಇದ್ದದ್ ಭೂತಾರಾಧನೆ, ಕೋಲ, ನೇಮ, ದೈವಾರಾಧನೆ, ಕಂಬಳ, ನಾಗಾರಾಧನೆ, ಕೋಳಿಪಡಿ ಹೀಂಗೆ ಎಲ್ಲಾ ಇಲ್ಲೂ ಇತ್. ಆರೆ ಇಲ್ಲಿನ್ ವಿಶೇಷ ಎಂತ ಬಲ್ರ್ಯಾ …. […]
ಕಾಫಿ ಡೇ ಕಿಂಗ್ ಮೃತದೇಹ ಚಿಕ್ಕಮಗಳೂರಿಗೆ ರವಾನೆ
ಮಂಗಳೂರು: ಕಾಫಿ ಡೇ ಕಿಂಗ್ ಸಿದ್ದಾರ್ಥ್ ಮೃತದೇಹ ಮಂಗಳೂರಿನಿಂದ ಬಿಸಿರೋಡ್ ಉಜಿರೆ ಮಾರ್ಗವಾಗಿ ಚಿಕ್ಕಮಗಳೂರಿಗೆ ರವಾನೆ ಮಾಡಲಾಯಿತು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಎಸಿ ಅಂಬ್ಯುಲೆನ್ಸ್ ನಲ್ಲಿ ಕುಟುಂಬ ಸದಸ್ಯರ ಜತೆಗೆ ಪಯಣ ನಡೆಯಿತು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ರವಾನೆ ಮಾಡಲಾಯಿತು. ಶಾಸಕ ರಾಜೇಗೌಡ, ಯುಟಿ ಖಾದರ್, ಐವನ್ ಡಿಸೋಜಾ ಸಾಥ್ ಜತೆಗಿದ್ದರು.
ನೇತ್ರಾವತಿಯಲ್ಲಿ ಲೀನವಾಯ್ತು “ಕಾಫಿ” ಯ ಪರಿಮಳ:ಕೆಫೆ ಕಾಫಿ ಡೇ ಮಾಲಿಕನ ಶವ ನದಿಯಲ್ಲಿ ಪತ್ತೆ
ಮಂಗಳೂರು: ಕೆಫೆ ಕಾಫಿ ಡೇ ಮಾಲಿಕ, ಸೋಮವಾರ ರಾತ್ರಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಉದ್ಯಮಿ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ದಾರ್ಥ ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಇದೀಗ ಅವರ ಸಾವಿನ ಸುದ್ದಿ ದೃಢವಾಗುತ್ತಿದ್ದಂತೆಯೇ ಕುಟುಂಬಸ್ಥರು ಮೌನವಾಗಿದ್ದಾರೆ.ಅವರು ಮರಳಿ ಬರಬಹುದೆನ್ನುವ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆ ಕೂಡ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದೆ. ಸೋಮವಾರ ರಾತ್ರಿ ಸಿದ್ದಾರ್ಥ್ ನಾಪತ್ತೆಯಾಗಿದ್ದರು. ನೇತ್ರಾವತಿ ನದಿಯಲ್ಲಿ ಸತತ 36 ಗಂಟೆಗಳ ಕಾಲ ಶೋಧ […]