ಬೈಲೂರು: ಮಾರಿಯಮ್ಮ ದೇವಸ್ಥಾನದಲ್ಲಿ ಕಾಲವಧಿ ಆಟಿ ಮಾರಿಪೂಜೆ
ಕಾರ್ಕಳ: ಕಾರ್ಕಳದ ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನ ಇದರ ಕಾಲಾವಧಿ ಆಟಿ ಮಾರಿಪೂಜೆ ಪ್ರಯುಕ್ತ ಶ್ರೀ ದೇವಿಯ ವಿಸರ್ಜನಾ ಮೆರವಣಿಗೆಯು ಜು.31ರ ಬುಧವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ನೂರಾರು ಭಕ್ತರು ಈ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.
ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ..!
ಮಂಗಳೂರು: ಚಲಿಸುತ್ತಿದ್ದ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳೂರಿನ ಕೊಡಿಯಾಲ್ ಬೈಲು ಪ್ರದೇಶದ ಜೈಲು ರಸ್ತೆಯ ಸಮೀಪ ನಡೆದಿದೆ. ಕಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲೇ ಅದರ ಇಂಜಿನ್ ಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಕಿಡಿ ಮತ್ತು ಹೊಗೆ ಕಾಣಿಸಿಕೊಂಡ ತಕ್ಷಣ ಕಾರನ್ನು ಚಲಾಯಿಸುತ್ತಿದ್ದ ಅದರ ಮಾಲಕ ತಕ್ಷಣವೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಕಾರಿನಿಂದ ಕೆಳಗೆ ಇಳಿದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಅಪಾಯವೊಂದು ತಪ್ಪಿದೆ. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕಾರಿಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಂದಿಸಿದರು. […]
ಸಾಮಾಜಿಕ ಜಾಲಾತಾಣದಲ್ಲಿ ತೇಜೋವಧೆ-ಧರ್ಮ ನಿಂದಿಸುವವರ ವಿರುದ್ಧ ಕ್ರಮ ಜರಗಿಸಲು ಆಗ್ರಹ
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆಗೈದು, ತೇಜೋವಧೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಪೊಲೀಸ್ ಇಲಾಖೆಯು ತಪ್ಪಿತಸ್ಥರನ್ನು ಬಂಧಿಸಿ ಇಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಡ್ಯಾರ್ ಕಣ್ಣೂರಿನ ಕುಂಡಾಲ ನಿವಾಸಿ ರಿಯಾಝ್ ಎಂಬವರು ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೌದಿ ಅರೇಬಿಯಾದಲ್ಲಿರುವ ಮುಹಮ್ಮದ್ ಪಣಕಜೆ, ಬೆಳ್ತಂಗಡಿಯ ಆದಮ್, ಚೊಕ್ಕಬೆಟ್ಟುವಿನ ಜುಬೇರ್ ಸಲಫಿ, ಕುಳಾಯಿಯ ಅಬ್ದುಲ್ ವಹಾಬ್ ಎಂಬವರು ನಮ್ಮ ವಿರುದ್ಧ ವೈಯಕ್ತಿಕ ನಿಂದನೆಗೈದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ […]
ಉಡುಪಿ: ಭವಿಷ್ಯನಿಧಿ ಪಿಂಚಣಿದಾರರ ಸಂಘದಿಂದ ಪ್ರತಿಭಟನೆ
ಉಡುಪಿ: ಭವಿಷ್ಯ ನಿಧಿ ಪಿಂಚಣಿಯನ್ನು ಕನಿಷ್ಠ 6 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಹಾಗೂ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ಅನ್ನು ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಿ ಉಡುಪಿ ತಾಲ್ಲೂಕು ಭವಿಷ್ಯನಿಧಿ ಪಿಂಚಣಿದಾರರ ಸಂಘದ ನೇತೃತ್ವದಲ್ಲಿ ಉಡುಪಿ ತುಳುನಾಡು ಟವರ್ಸ್ನಲ್ಲಿರುವ ಪಿಎಫ್ ಕಚೇರಿಯ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು. ಭವಿಷ್ಯನಿಧಿ ಪಿಂಚಣಿದಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್. ನರಸಿಂಹ ಅವರು ಮಾತನಾಡಿ, ಆಧಾರ್ ಕಾರ್ಡ್ಅನ್ನು ಕಡ್ಡಾಯಗೊಳಿಸುವ ಮೂಲಕ ಕಾರ್ಮಿಕರು ಬೆವರು ಹರಿಸಿ ದುಡಿದು ಕಟ್ಟಿದ ತಮ್ಮ ಪಿಂಚಣಿ ಹಣವನ್ನು ಪಡೆಯಲು […]
ಮೀನುಗಾರರ ಸಾಲ ಮನ್ನಾ: ಯಡ್ಯೂರಪ್ಪ ಅವರಿಗೆ ಸಮುದಾಯದ ಮೇಲಿನ ಕಾಳಜಿಗೆ ಸಾಕ್ಷಿ: ಯಶ್ ಪಾಲ್ ಸುವರ್ಣ
ಉಡುಪಿ: ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಮೀನುಗಾರರ ಸಾಲಮನ್ನದ ನಿರ್ಣಯವನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಗೊಂಡಿರುವುದು ಮೀನುಗಾರರ ಮೇಲೆ ಅವರಿಗಿರುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ ಸುವರ್ಣ ತಿಳಿಸಿದ್ದಾರೆ. ಕರಾವಳಿಯ ಮೀನುಗಾರ ಸಮುದಾಯದ ವ್ಯಕ್ತಿಗಳೇ ಮಂತ್ರಿ ಸ್ಥಾನವನ್ನು ಅಲಂಕರಿಸಿ ಅಧಿಕಾರವನ್ನು ಅನುಭವಿಸಿದ್ದರೂ ಮೀನುಗಾರರಿಗೆ ಅವರು ನೀಡಿದ ಕೊಡುಗೆ ದೊಡ್ಡ ಶೂನ್ಯ. ಕನಿಷ್ಠಪಕ್ಷ ಮೀನುಗಾರರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನವೂ ಅವರಿಂದ […]