ಮೀನುಗಾರರ ಸಾಲ ಮನ್ನಾ: ಮಹಿಳಾ ಮೋರ್ಚಾ ಸ್ವಾಗತ

ಉಡುಪಿ: ರಾಜ್ಯದಲ್ಲಿ ಬಿ.ಯಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮೀನುಗಾರರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಪ್ರಕಟಿಸಿರುವುದನ್ನು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಸ್ವಾಗತಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರವಿದ್ದ ಸಂದರ್ಭಗಳಲ್ಲಿ ಕರಾವಳಿ ಮೀನುಗಾರರ ಹಿತವನ್ನು ರಕ್ಷಿಸುವ ಕಾರ್ಯ ಮಾಡುತ್ತ ಬಂದಿದ್ದು, ವಿಶೇಷವಾಗಿ ಮಹಿಳೆಯರಿಗೆ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿತ್ತು. ಸಬ್ಸಿಡಿ ದರದಲ್ಲಿ ಸಹಾಯ ಧನ ಯೋಜನೆ ಯನ್ನು ಈ ಹಿಂದೆ ಬಿಜೆಪಿ ಸರ್ಕಾರ ಆನುಷ್ಠಾನ ಮಾಡಿದ್ದು ಇದೀಗ ಕರಾವಳಿ […]

ರಾಜ್ಯದಲ್ಲಿ‌ ಟಿಪ್ಪು ಜಯಂತಿ ಬ್ಯಾನ್: ಬಿಜೆಪಿ ಸರಕಾರದಿಂದ ಆದೇಶ

ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆ ನಡೆಸುತ್ತಿತ್ತು. ಅಲ್ಲದೇ ಇದರಿಂದಾಗಿ‌ ರಾಜ್ಯದ ವಿವಿಧೆಡೆ ಕೋಮುಗಲಭೆಯು ಸೃಷ್ಟಿಯಾಗಿತ್ತು. ಹೀಗಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿ. ಎಸ್.‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮಂಗಳವಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಮಂಗಳೂರು: ಎಸ್.ಎಂ ಕೃಷ್ಣರ ಅಳಿಯ ಸಿದ್ಧಾರ್ಥ ನಾಪತ್ತೆ? ಆತ್ಮಹತ್ಯೆ ಶಂಕೆ..!

ಮಂಗಳೂರು: ಮಾಜಿ ಮುಖ್ಯ ಮಂತ್ರಿ, ಹಿರಿಯ ರಾಜಕರಣಿ ಎಸ್. ಎಂ. ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ಧಾರ್ಥ ಅವರು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆಯಿಂದ ತಡ ರಾತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಎಂದು ಶಂಕಿಸಲಾಗಿದೆ. ಇನೋವ ಕಾರಿನಲ್ಲಿ ತಮ್ಮ ಚಾಲಕನೊಂದಿಗೆ ಬಂದಿದ್ದ ಸಿದ್ಧಾರ್ಥ ಅವರು ಸೇತುವೆ ಸಮೀಪ ಕಾರು ನಿಲ್ಲಿಸಿ ವಾಕಿಂಗ್ ಮಾಡುತ್ತೇನೆ ಎಂದು ಇಳಿದು ಹೋಗಿ ನದಿಗೆ ಹಾರಿದ್ದಾರೆ ಎನ್ನಲಾಗುತ್ತಿದೆ.‌ ಆದರೆ ಈ ಬಗ್ಗೆ ಯಾವುದೇ ಮಾಹಿತಿ ಖಚಿತವಾಗಿಲ್ಲ. ಸೇತುವೆಯಲ್ಲಿ […]