ನೆಲ, ಜಲ, ಅರಣ್ಯ ಪರಿಸರ ಚಿತ್ರ ಬರಹ ಸ್ಪರ್ಧೆ
ಉಡುಪಿ, ಜುಲೈ 29: ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉಡುಪಿ ಘಟಕ ಆಯೋಜಿಸಿಕೊಂಡಿರುವ “ನೀರು ಆರುವ ಮುನ್ನ” ನೆಲ, ಜಲ, ಅರಣ್ಯ ಸಮೃದ್ಧಿ, ಸಿದ್ಧಿ ಸಂಕಲ್ಪದ ಜಾಗೃತಿ ಮತ್ತು ಅರಿವು ಕಾರ್ಯಕ್ರಮಕ್ಕೆ ಪೂರಕವಾಗಿ ಚಿತ್ರ ಬರಹ ಸ್ಪರ್ಧೆಯನ್ನು ಉಡುಪಿ ಜಿಲ್ಲೆಯ ಸಾರ್ವಜನಿಕರಿಗಾಗಿ ಆಯೋಜಿಸಿದೆ. ನಿಮ್ಮ ಪರಿಸರದಲ್ಲಿ ನೆಲ ಜಲ ಅರಣ್ಯ ಪರಿಸರಕ್ಕಾಗಿ ನೀವು, ನಿಮ್ಮ ನೆರೆಹೊರೆಯವರು ಏನು ಮಾದರಿ ಕೆಲಸ ಮಾಡಿದ್ದೀರಿ ಎಂಬುದರ ಬಗ್ಗೆ ಚುಟುಕಾಗಿ ಬರೆದು ಕಳುಹಿಸಬೇಕು. ಜೊತೆಯಲ್ಲಿ ವಿಚಾರಕ್ಕೆ […]
ಶ್ರೀ ಕೃಷ್ಣ ಮಠದಲ್ಲಿ ‘ಸುಂದರಕಾಂಡ’ ಹರಿಕಥೆ
ಉಡುಪಿ: ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹರಿಕಥಾ ಪರಿಷತ್ತು ಮಂಗಳೂರು,ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಬೆಂಗಳೂರು ಮತ್ತು ಶ್ರೀಹಂಡೆದಾಸ ಪ್ರತಿಷ್ಟಾನ ಕಾರ್ಕಳ ಇವರ ಸಂಯುಕ್ತ ಸಹಯೋಗದೊಂದಿಗೆ ಪ್ರಸ್ತುತಪಡಿಸುವ 60 ದಿನಗಳ ಪರ್ಯಂತ ಹರಿಕಥಾ ಜ್ಞಾನ ಯಜ್ಞದ ಅಂಗವಾಗಿ ಹೊನ್ನಾವರದ ಗಣಪತಿ ಹೆಗ್ಡೆ ಇವರಿಂದ ‘ಸುಂದರಕಾಂಡ’ ಎಂಬ ಕಥಾಭಾಗದ ಹರಿಕಥೆ ನಡೆಯಿತು.