ಜುಲೈ 31ರಿಂದಲೇ ಮರಳು ದಿಬ್ಬ ತೆರವುಗೊಳಿಸಲು ಅನುಮತಿ ಕೋರಿ ಸಿಎಂ ಗೆ ಮನವಿ

ಬೆಂಗಳೂರು: ಸಿ.ಆರ್.ಝಡ್. ವ್ಯಾಪ್ತಿಯ ಮರಳು ತೆರವುಗೊಳಿಸುವ ವಿಚಾರವಾಗಿ ಈ ಹಿಂದೆ ಆಗಸ್ಟ್ ತಿಂಗಳಿಂದ ಅನುಮತಿ ದೊರೆತಿದ್ದು, ಇದೀಗ ಅದು ಮಾರ್ಪಾಡಾಗಿ ಸೆಫ್ಟೆಂಬರ್ 31ರಿಂದ ತೆರವುಗೊಳಿಸುವಂತೆ ಮುಂದೂಡಲಾಗಿತ್ತು. ಅದರೆ 2 ತಿಂಗಳು ಮುಂದಕ್ಕೆ ಹಾಕಿರುವ ಆದೇಶವನ್ನು ಬದಲಾವಣೆ ಮಾಡುವಂತೆ ಸೋಮವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಹಾಗೂ ಕಾರ್ಕಳ ಶಾಸಕ ವಿ.‌ ಸುನಿಲ್ ಕುಮಾರ್ ಅವರು ಈ ಆದೇಶವನ್ನು ಮಾರ್ಪಾಡಿಸಿ ಜುಲೈ 31ರಿಂದಲೇ ಮರಳು ದಿಬ್ಬ ತೆರವುಗೊಳಿಸುವಂತೆ ಅನುಮತಿ […]

ಉಳುವವನ ಗೌರವಿಸಿ ಕೃಷಿ ಸಂಸ್ಕ್ರತಿ ಉಳಿಸೋಣ: ಬಾಲಕೃಷ್ಣ ಮದ್ದೋಡಿ

ಉಡುಪಿ: ಭಾರತೀಯ ಸಂಸ್ಕ್ರತಿಯ ಜೀವನಾಡಿಯಾದ ಕೃಷಿ ಜೀವನ ಇಂದು ನಿಧಾನಗತಿಯಿಂದ ನಶಿಸುವತ್ತ ಸಾಗಿದೆ. ಯುವ ಜನತೆಗೆ ಕೃಷಿಯ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಜಗತ್ತಿಗೆ ಕೃಷಿ ಉತ್ಪನ್ನಗಳನ್ನು ಪೂರೈಸುತಿದ್ದ ಭಾರತವು ಇಂದು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದೆ. ಕೃಷಿಯನ್ನೇ ನಂಬಿ ಕೊಂಡು ಜೀವನ ಮಾಡುತ್ತಿರುವ ಕುಟುಂಬದರಿಗೆ ಬೆಲೆಯೇ ಇಲ್ಲವಾಗಿದೆ. ಕೃಷಿಕರು ಸವಲತ್ತುಗಳಿಗೆ ಸರಕಾರದಿಂದ ಕೈ ಚಾಚುವ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕೃಷಿಕರನ್ನು ಗೌರವಿಸಿ ಅವರ ಉದ್ಯೋಗವನ್ನು ಪ್ರೋತ್ಸಾಹಿಸದೆ ಇದ್ದರೆ ಮುಂದಿನ ಜನಾಂಗವು ಕೃಷಿ ಉತ್ಪನ್ನಗಳನ್ನು ಸಂಪೂರ್ಣವಾಗಿ […]

ಮೀನುಗಾರರ ಸಾಲಮನ್ನಕ್ಕೆ ಮುಖ್ಯ ಮಂತ್ರಿ ಯಡಿಯೂರಪ್ಪ ಅಂಕಿತ: ಯಶ್ ಪಾಲ್ ಅಭಿನಂದನೆ

ಉಡುಪಿ: ಮೀನುಗಾರರ ಬಹುದಿನದ ನಿರೀಕ್ಷೆಯಾಗಿದ್ದ ಸಾಲಮನ್ನ ಬೇಡಿಕೆಯನ್ನು ಪುರಸ್ಕರಿಸಿ ಮೀನುಗಾರರ ಹಾಗೂ ಮಹಿಳಾ ಮೀನುಗಾರರ ಸುಮಾರು 60 ಕೋಟಿ ಸಾಲವನ್ನು ಮನ್ನಾ ಯೋಜನೆಗೆ ಅಂಕಿತ ಹಾಕಿರುವ ಮಾನ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮೀನುಗಾರರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಮೀನುಗಾರರಲ್ಲಿ […]

ಪೆರ್ಣಂಕಿಲ: ವರ್ವಾಡಿ ಗದ್ದೆಯಲ್ಲಿ ಕೆಸರ್ಡೊಂಜಿ ದಿನ

ಉಡುಪಿ: ನಗರದ ಹೊರವಲಯದ ಪೆರ್ನಂಕಿಲ ವಾರ್ವಾಡಿ ಗ್ರಾಮದ ಗದ್ದೆಯಲ್ಲಿ ‘ಕೆಸರ್ಡ್‌ ಒಂಜಿ ದಿನ’ ಗ್ರಾಮೀಣ ಕ್ರೀಡಾಕೂಟ ಭಾನುವಾರ ಸಂಭ್ರಮದಿಂದ ನಡೆಯಿತು. ಸುತ್ತಮುತ್ತಲ ಊರುಗಳಿಂದ ಆಗಮಿಸಿದ ನೂರಾರು ಜನರು ಕೆಸರು ಗದ್ದೆಗಿಳಿದು ಸಂಭ್ರಮಿಸಿದರು. ವಾರ್ವಾಡಿ ಫ್ರೆಂಡ್ಸ್‌ ನೇತೃತ್ವದಲ್ಲಿ ಕೆಸರ್ಡ್‌ ಒಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೇ ಮೊದಲ ಬಾರಿಗೆ ಆಯೋಜಿಸಿದ ಗ್ರಾಮೀಣ ಕ್ರೀಡಾಕೂಟವು ಸಡಗರದಿಂದ ಜರಗಿತು. ಕೆಸರು ಗದ್ದೆಗಿಳಿದ ಯುವಕ ಯುವತಿಯರು ಕೆಸರನ್ನು ಮೈಗೆ ಎರಚಿಕೊಂಡು, ಕುಣಿದು ಕುಪ್ಪಳಿಸಿದರು. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಲಿಂಬೆ ಚಮಚ ಓಟ, […]

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ಥಬ್ದಚಿತ್ರಗಳ ಮೆರವಣಿಗೆ: ಡಿಸಿ ಹೆಪ್ಸಿಬಾ

ಉಡುಪಿ, ಜುಲೈ 29: ಆಗಸ್ಟ್ 15 ರಂದು ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ, ಜನಜಾಗೃತಿ ಮೂಡಿಸುವ ವಿವಿಧ ಸ್ಥಬ್ದಚಿತ್ರಗಳನ್ನು ತಯಾರಿಸಿ, ನಗರದ ವಿವಿದೆಡೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು. ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಸ್ವಾತಂತ್ರ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ, ಮಳೆ ನೀರು ಕೊಯ್ಲು ಕುರಿತು ಮಹತ್ವ […]