ಡೆಂಗ್ಯೂ ಪ್ರಕರಣ: ಶಾಲಾ ವ್ಯಾಪ್ತಿಯಲ್ಲಿ ಲಾರ್ವ ನಾಶ ಮಾಡುವಂತೆ ಡಿಸಿ ಎಚ್ಚರಿಕೆ
ಮಂಗಳೂರು: ಮಹಾಮಾರಿ ಡೆಂಗಿ ವ್ಯಾಪಕವಾಗಿ ಹರಡಿರುವುದರಿಂದ ಶಿಕ್ಷಣ ಸಂಸ್ಥೆಗಳು ಮೂರು ದಿನದೊಳಗೆ ತಮ್ಮ ಶಾಲಾ ವ್ಯಾಪ್ತಿಯಲ್ಲಿ ಲಾರ್ವ ನಾಶ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಡೆಂಗ್ಯು ನಿವಾರಣೆಗಾಗಿ ಮಂಗಳೂರಿನ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆಲವು ಸೊಳ್ಳೆ ಉತ್ಪತ್ತಿಯಾಗಿ ವಿದ್ಯಾರ್ಥಿಗಳ ಕಚ್ಚುತ್ತಿರುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಡೆಂಗ್ಯೂ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮೂರು ದಿನದ ಬಳಿಕ ಶಿಕ್ಷಣ ಸಂಸ್ಥೆಗಳಿಗೆ ದಿಢೀರ್ […]
ಸುಬ್ರಹ್ಮಣ್ಯ: ಕಾರಲ್ಲಿ ಗೋ ಸಾಗಾಟ:ಇಬ್ಬರ ಬಂಧನ
ಮಂಗಳೂರು: ಕಾರೊಂದರಲ್ಲಿ ಹಿಂಸಾತ್ಮಕವಾಗಿ ಗೋಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ಸುಬ್ರಹ್ಮಣ್ಯ ದ ನಡುಗಲ್ಲು ಶೆಟ್ಟಿಯಡ್ಕ ಎಂಬಲ್ಲಿ ನಡೆದಿದೆ. ಸ್ವಿಫ್ಟ್ ಕಾರಿನಲ್ಲಿ ಮೂರು ಹಸುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿತ್ತು. ಹಸುಗಳ ಕೈ ಕಾಲು ಕಟ್ಟಿ ಹಸುಗಳನ್ನು ಕಾರಿನಲ್ಲಿಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಕ್ಕೆ ಸುಬ್ರಹ್ಮಣ್ಯ ಎಎಸ್ ಐ ನೇತೃತ್ವದ ಪೊಲೀಸ್ ತಂಡ, ಸುಬ್ರಹ್ಮಣ್ಯದ ನಡುಗಲ್ಲು ಶೆಟ್ಟಿಯಡಕ್ಕ ಎಂಬಲ್ಲಿ ಕಾರ್ಯಾಚರಣೆ ನಡೆಸಿದೆ. ಮಾರುತಿ ಸಿಫ್ಟ್ ಕಾರನ್ನು ತಡೆದು ಅದರಲ್ಲಿದ್ದ ಮೂರು […]
ಸುಬ್ರಹ್ಮಣ್ಯ: ಇಬ್ಬರು ಬೇಟೆಗಾರರ ಬಂಧನ
ಮಂಗಳೂರು: ಇಬ್ಬರು ಬೇಟೆಗಾರರನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸುಬ್ರಹ್ಮಣ್ಯದ ಅರಣ್ಯ ವಿಭಾಗಕ್ಕೆ ಸೇರಿದ ದೇವರಗದ್ದೆ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ, ಕಾಡು ಪ್ರಾಣಿ ಬೇಟೆಯಲ್ಲಿ ನಿರತರಾಗಿದ್ದ ನಾಲ್ಕೂರು ಗ್ರಾಮದ ಚಾರ್ಮತ ನಿವಾಸಿ ನಿವೃತ್ತ ಸೈನಿಕ ಹೊನ್ನಪ್ಪ ಚಾರ್ಮತ ಮತ್ತು ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ರಮೇಶ ಕಲ್ಲುಗುಡ್ಡೆ ಎಂಬುವವರನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಡಿನಿಂದ 3 […]
ಯಕ್ಷಗಾನ- ಶಾಸ್ತ್ರೀಯ ಸಂಗೀತ-ಚಿತ್ರಕಲೆ 43ನೇ ಶಾಖೆಯ ಉದ್ಘಾಟನೆ
ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಣ್ಣರಲೋಕ ಮೋಕೆದ ಕಲಾವಿದರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಅಶ್ರಯದಲ್ಲಿ ಯಕ್ಷಗಾನ, ಶಾಸ್ತ್ರೀಯ ಸಂಗೀತ, ಚಿತ್ರಕಲೆ ತರಬೇತಿಯ 43ನೇ ಶಾಖೆಯನ್ನು ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಲೈನ್ ಬಳಿಯ ಮುನಿಶ್ವೇರ ಮಹಾಗಣಪತಿ ದೇವಸ್ಥಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಪ್ರಸನ್ನ ಭಟ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾದ ಸುದರ್ಶನ್ ಜೈನ್ ಪಂಜಿಕಲ್ಲು ವಹಿಸಿದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ನಿವೃತ್ತ ಬ್ಯಾಂಕ್ […]
ಮಂಗಳೂರು: ಮೀನುಗಾರರ 60.584 ಕೋಟಿ ಸಾಲ ಮನ್ನಾ: ವೇದವ್ಯಾಸ ಕಾಮತ್
ಮಂಗಳೂರು: ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೀನುಗಾರರ ಬಾಕಿ ಇರುವ ಸಾಲವನ್ನು ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಮೀನುಗಾರರು ಹಾಗೂ ವಿಶೇಷವಾಗಿ ಮಹಿಳಾ ಮೀನುಗಾರರು, ಮೀನುಗಾರಿಕೆ ಚಟುವಟಿಕೆಗಳಾದ ಮೀನು ಮಾರಾಟ, ಪರಿಕರಣಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ, ಮೀನಿನ ಸಂರಕ್ಷಣೆ ಹಾಗೂ ಮೀನಿನ ಸಾಗಾಣಿಕೆ ಇತರೆ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವ ದ್ರಷ್ಟಿಯಿಂದ ಶೇ ೨% ರಷ್ಟು ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ […]