ಡೆಂಗ್ಯೂ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ದಿನಕರ ಬಾಬು
ಉಡುಪಿ, ಜುಲೈ 26: ಡೆಂಗ್ಯೂ ನಿರ್ಮೂಲನೆಗೆ ಎಲ್ಲರೂ ಸ್ವ ಪ್ರೇರಣೆಯಿಂದ ಮುಂದೆ ಬಂದು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅವರು ಶುಕ್ರವಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಉಡುಪಿ, ಲಯನ್ಸ್ ಕ್ಷಬ್ ಬ್ರಹ್ಮಗಿರಿ ಉಡುಪಿ, ಪೂರ್ಣಪ್ರಜ್ಞ ಪದವಿ ಕಾಲೇಜು ಉಡುಪಿ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮಣಿಪಾಲ ಇವರ ಸಂಯುಕ್ತ […]
ಕೊಲ್ಲೂರು ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ
ಕುಂದಾಪುರ: ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಆಗಮಿಸಿದರು. ಮಂಗಳೂರು ವಿಮಾನನಿಲ್ದಾಣದಿಂದ ರಸ್ತೆ ಮಾರ್ಗದ ಮೂಲಕ ನೇರವಾಗಿ ಕೊಲ್ಲೂರಿಗೆ ಆಗಮಿಸಿದ ಅವರು ವಸತಿಗೃಹಕ್ಕೆ ತೆರಳಿ ಐದು ನಿಮಿಷ ವಿಶ್ರಾಂತಿ ಪಡೆದು ಬಳಿಕ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ದೇವರ ದರ್ಶನ ಪಡೆದ ಅವರು ಈಗಾಗಲೇ ಯಜ್ಞಶಾಲೆಯಲ್ಲಿ ನಡೆಯುತ್ತಿರುವ ನವಚಂಡಿಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
ಮಂಗಳೂರು: ಅಡುಗೆ ಅನಿಲ ಸ್ಪೋಟ ಓರ್ವನಿಗೆ ಗಾಯ
ಮಂಗಳೂರು: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ಗಾಯಗೊಂಡ ಘಟನೆ ಮಂಗಳೂರಿನ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಶುಕ್ರವಾರ ನಡೆದಿದೆ. ರೀಗಲ್ ಪ್ಲಾಝಾ ಎಂಬ ವಾಣಿಜ್ಯ ಸಂಕೀರ್ಣದಲ್ಲಿರುವ ಹೋಟೆಲ್ ವೊಂದರಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಹೋಟೆಲ್ ಅಡುಗೆ ಸಿಬ್ಬಂದಿ ಅಶ್ರಫ್ ಎಂಬುವವರು ಗಾಯಗೊಂಡಿದ್ದಾರೆ. ಬೆಳಗ್ಗೆ ಹೋಟೆಲ್ ತೆರೆದು ಅಡುಗೆ ಮಾಡಲು ಸಿದ್ಧತೆ ನಡೆಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕದ್ರಿ ಹಾಗೂ ಪಾಂಡೇಶ್ವರ ಅಗ್ನಿಶಾಮಕ ದಳದ […]
ಕೊಳಚೆಯಿಂದ ನಿರ್ಜೀವಗೊಂಡ ಇಂದ್ರಾಣಿ ನದಿಗೆ ಜೀವಕೊಡಲು ಹೊರಟರು ! ಗಮನ ಸೆಳೆಯಿತು ಉಡುಪಿ ಯುವಕರ “ಇಂದ್ರಾಣಿ ಉಳಿಸಿ”ಅಭಿಯಾನ
ನದಿ ಎನ್ನುವುದು ಪರಿಸರದ ಕಣ್ಣು, ನಾಗರೀಕತೆಯ ಪ್ರತಿಬಿಂಬ, ನದಿ ಇದ್ದರೆ ಇಡೀ ಊರಿಗೆ ಊರೇ ನೆಮ್ಮದಿಯಿಂದಿರುತ್ತದೆ, ನದಿಯ ಅಸ್ತಿತ್ವವೇ ಆ ಊರಿನ ಭವ್ಯತೆಯನ್ನು, ಪರಂಪರೆಯನ್ನು, ಸೊಗಡನ್ನು ಹೇಳುತ್ತದೆ. ಆದರೆ ಅದೇ ನದಿ ಕಲುಶಿತವಾದರೆ? ತ್ಯಾಜ್ಯದ ಗುಂಡಿಯಾದರೆ? ಇಡೀ ಊರಿಗೆ ಆ ಕಳಂಕ ಮೆತ್ತಿಕೊಳ್ಳುತ್ತದೆ. ಪರಿಸರದ ಜೊತೆ ಜೊತೆಗೆ ಸಕಲ ಜೀವಿಗಳು ನೆಮ್ಮದಿ ಕಳಕೊಳ್ಳುತ್ತದೆ. ಉಡುಪಿಯ ಇಂದ್ರಾಣಿ ನದಿಯೂ ಅಷ್ಟೇ ಆಧುನೀಕರಣ, ನಗರೀಕರಣದ ಹೊಡೆತಕ್ಕೆ ನಲುಗಿ ಹೋಗಿದೆ. ತ್ಯಾಜ್ಯ ,ಕೊಳಚೆಯನ್ನು ತನ್ನೊಳಗೆ ತುಂಬಿಕೊಂಡು ಹರಿಯುವ ಇಂದ್ರಾಣಿ ನದಿಯ ಅಂದ […]
ಕರಾವಳಿಯಲ್ಲಿ ಕಾರ್ಗಿಲ್ ವಿಜಯ ದಿವಸ್: ಯೋಧರಿಗೆ ನಮನ
ಉಡುಪಿ/ಮಂಗಳೂರು: ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೆಸಿಐ ಉಡುಪಿ ಸಿಟಿ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಇದರ ೨೦ನೇ ವರ್ಷಾಚರಣೆ ಹಾಗೂ ಯೋಧ ನಮನ ಕಾರ್ಯಕ್ರಮವು ಜು. ೨೬ ರಂದು ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ನಡೆಯಿತು. ಸೈನ್ಯದಲ್ಲಿ ಸುದೀರ್ಘ ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಸತತವಾಗಿ ೨೧ ದಿನಗಳ ಕಾಲ ಗಡಿಯಲ್ಲಿ ಬಂಕರ್ ನಲ್ಲಿಯೇ ಆಶ್ರಯಪಡೆದುಕೊಂಡು ಅಲ್ಲಿಂದಲೇ ಕೆಚ್ಚೆದೆಯ ಹೋರಾಟವನ್ನು ಪ್ರದರ್ಶಿಸಿದ ನಿವೃತ್ತ ಯೋಧ ಜಗದೀಶ್ ಪ್ರಭು ಹಿರಿಯಡ್ಕ ಅವರನ್ನು ಸನ್ಮಾನಿಸಲಾಯಿತು. ಅನಂತರ […]