ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ಮೆಡಿಕಲ್ ಮತ್ತು ಇಂಜಿನಿಯರ್, ಸ್ನಾತಕೋತ್ತರ, ವೃತ್ತಿಪರ ಹಾಗೂ ನರ್ಸಿಂಗ್ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2019-20 ನೇ ಸಾಲಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಗಸ್ಟ್ 20 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ […]
ಆರೂರು ಗ್ರಾಮ ಪಂಚಾಯತ್: ಪ್ರಥಮ ಕೆ.ಡಿ.ಪಿ ಸಭೆ

ಉಡುಪಿ: ಆರೂರು ಗ್ರಾಮ ಪಂಚಾಯತ್ ನ ಪ್ರಥಮ ಕೆ.ಡಿ.ಪಿ ಸಭೆಯನ್ನು ಪಂಚಾಯತ್ ಸಭಾಭವನದಲ್ಲಿ ಜು. 25 ರಂದು ಪಂಚಾಯತ್ ಅಧ್ಯಕ್ಷ ರಾಜೀವ ಕುಲಾಲ ಇವರ ಅಧ್ಯಕ್ಷತೆಯಲ್ಲಿ. ನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ತಮ್ಮ ಇಲಾಖೆಗೆ ನಿಗಧಿಪಡಿಸಿದ ಗುರಿಗಳಿಗೆ ಅನುಗುಣವಾಗಿ ಸಾಧನೆಯ ಬಗ್ಗೆ ವಿವರಣೆ ನೀಡಿದರು. ಪ್ರಗತಿ ವರದಿಯನ್ನು ಕಾರ್ಯದರ್ಶಿ ಗುರುರಾಜ ನೀಡಿದರು. ಸಭೆಯಲ್ಲಿ ಪಂಚಾಯತ್ ನ ಉಪಾಧ್ಯಕ್ಷರು, ಸ್ಥಾಯಿಸಮಿತಿ ಅಧ್ಯಕ್ಷರು, ಕಿ. ಪಂ ರಾಜ್ ಇಂಜಿನಿಯರ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ […]
ಮಂಗಳೂರು: ತೀವ್ರ ಜ್ವರ ಹಿನ್ನೆಲೆ ಇಬ್ಬರು ಮಕ್ಕಳು ಸಾವು

ಮಂಗಳೂರು: ತೀವ್ರ ಜ್ವರದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕಾಸರಗೋಡಿನಲ್ಲಿ ಸಂಭವಿಸಿದೆ. ಕಾಸರಗೋಡು ಸಮೀಪದ ಬದಿಯಡ್ಕ ಕನ್ಯಪ್ಪಾಡಿಯ ಸಿಧಾರುತ್ತಲ್ ಮುಂತಾಹ್(8) ಮತ್ತು 6 ತಿಂಗಳ ಮಗು ಸಿನಾಸ್ ಮೃತಪಟ್ಟ ಕಂದಮ್ಮಗಳು. ಕೆಲವು ದಿನಗಳಿಂದ ಈ ಇಬ್ಬರು ಪುಟಾಣಿಗಳು ತೀವ್ರ ಜ್ವರ ಪೀಡಿತರಾಗಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುಟಾಣಿಗಳು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ವೈದ್ಯಕೀಯ ತಂಡವು ಆಸ್ಪತ್ರೆಗೆ ಭೇಟಿ ನೀಡಿ ರೋಗ ಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಸಿದೆ.
ಅಮೆರಿಕ ಅಧಿವೇಶನಕ್ಕೆ ಕಿರಣ್ ಕುಮಾರ್ ಆಯ್ಕೆ

ಉಡುಪಿ: ಎಲ್ ಐಸಿ ಉಡುಪಿ ವಿಭಾಗದ ಕಿರಣ್ ಕುಮಾರ್ ಬಿ ಕಾರ್ಕಳ ಇವರು 2006ರಿಂದ ದಾಖಲೆ 13 ಬಾರಿ MDRT ಆಗಿ ಆಯ್ಕೆಯಾಗಿ ಇದೀಗ, ಅಮೆರಿಕದ ಲಾಸ್ ಎಜೆಲೀಸ್ ನಲ್ಲಿ ನಡೆಯುವ ಅಧಿವೇಶನಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು Cm Club, Galaxy club, MDRT( USA) ಆಗಿದ್ದೂ, ಉಡುಪಿ ವಿಭಾಗ LIC ಯಲ್ಲಿ ಪ್ರಸಿದ್ದಿ ಪಡೆದ್ದಿದ್ದಾರೆ.