ದ.ಕ ಜಿಲ್ಲೆಯಾದ್ಯಂತ ಉತ್ತಮ ಮಳೆ: ಹಲವೆಡೆ ಹಾನಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರವೂ ಭಾರೀ ಮಳೆ ಸುರಿಯುತ್ತಿದೆ. ಕಳೆದೆರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೆಡೆ ಹಾನಿ ಸಂಭವಿಸಿದೆ. ಅಮ್ಮುಂಜೆ ಕಲಾಯಿ ಹೊಸನಗರದಲ್ಲಿ ಅಂಗಡಿ ಮೇಲೆ ಬಿದ್ದಿದ್ದು, ಸ್ಥಳೀಯರಿಂದ ಮರ ತೆರವು ಕಾರ್ಯಾಚರಣೆ ನಡೆಯಿತು. ಅಂಬ್ಲಮೊಗರುವಿನ ಮದಕ ಗುಡ್ಡೆಯಲ್ಲಿ ಅಬ್ಬಾಸ್ ಮತ್ತು ರಝಾಕ್ ಎಂಬವರ ಮನೆಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಗುಡ್ಡ ಕುಸಿತಕ್ಕೆ ಧರೆಗುರುಳಿದ ವಿದ್ಯುತ್ ಕಂಬ. ಮನೆಯವರ ಸಮಯ ಪ್ರಜ್ನೆಯಿಂದ ಅನಾಹುತ ತಪ್ಪಿದಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, […]
ಮಂಜೇಶ್ವರ: ಹಾಡಹಗಲೇ ವಿದ್ಯಾರ್ಥಿಯ ಅಪಹರಣ
ಮಂಗಳೂರು: ಹಾಡಹಗಲೇ ಕಾಲೇಜು ವಿದ್ಯಾರ್ಥಿಯನ್ನು ಅಪಹರಣ ನಡೆಸಿದಂತಹ ಘಟನೆ ಕಾಸರಗೋಡು ಮಂಜೇಶ್ವರದ ವರ್ಕಾಡಿಯ ಕಳಿಯೂರಲ್ಲಿ ಸೋಮವಾರ ನಡೆದಿದೆ. ಪಿಯುಸಿ ವಿದ್ಯಾರ್ಥಿ ಹಾರಿಸ್ (17) ಅಪಹರಣಕ್ಕೊಳಗಾದತ. ಕಾರಿನಲ್ಲಿ ಬಂದ ತಂಡ ಅಪಹರಣ ಮಾಡಿದೆ ಎಂದು ತಿಳಿದು ಬಂದಿದೆ. ಈತ ಮಂಗಳೂರಿನ ತೊಕ್ಕೊಟ್ಟಿನ ಖಾಸಗಿ ಕಾಲೇಜಿನ ಪಿಯು ವಿದ್ಯಾರ್ಥಿಯಾಗಿದ್ದು, ಹಾರಿಸ್ ತನ್ನ ಸಹೋದರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ. ಕೋಳಿಯೂರು ಪದವಿನ ಆಡಿಟೋರಿಯಂ ಬಳಿ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಅಪಹರಣ ನಡೆಸಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗಾಗಿ […]