ತೆಂಕನಿಡಿಯೂರು ಕಾಲೇಜಿನಲ್ಲಿ ಇತಿಹಾಸ ಎಂ.ಎ. ಉದ್ಘಾಟನೆ
ಉಡುಪಿ, ಜುಲೈ 19: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಇಲ್ಲಿ ಇತಿಹಾಸ ಸ್ನಾತಕೋತ್ತರ ಅಧ್ಯಯನ ಜುಲೈ 17 ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜನಾರ್ಧನ ತೋನ್ಸೆ ನೆರವೇರಿಸಿ ಶುಭ ಹಾರೈಸಿದರು. ಶಿರ್ವ ಸೈಂಟ್ ಮೆರೀಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜನ್ ಮಾತನಾಡಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಸತತ ಅಧ್ಯಯನ ಶೀಲರಾದರೆ ಯಶಸ್ಸು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ […]
ಐ.ಬಿ.ಪಿ.ಎಸ್ ಪರೀಕ್ಷೆ: ಉಚಿತ ತರಬೇತಿ
ಉಡುಪಿ, ಜುಲೈ 19: ಬ್ಯಾಂಕ್ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್-2019 ರ ಮಾಹೆಯಲ್ಲಿ ನಡೆಸಲು ಉದ್ದೇಶಿಸಿರುವ ಐ.ಬಿ.ಪಿ.ಎಸ್ ಸಾಮಾನ್ಯ ಲಿಖಿತ ಪರೀಕ್ಷೆಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಉಡುಪಿ ಇವರ ಆಶ್ರಯದಲ್ಲಿ ಸ್ಟಡಿ ಸರ್ಕಲ್ ಯೋಜನೆಯಡಿಯಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ರಜತಾದ್ರಿ, ಮಣಿಪಾಲದಲ್ಲಿ ಆಯೋಜಿಸಲಾಗಿದೆ. ತರಬೇತಿ ತರಗತಿಗಳನ್ನು ವಾರದ ದಿನಗಳಲ್ಲಿ ಅಪರಾಹ್ನ 3.30 ರಿಂದ 5.30 ರ ವರೆಗೆ ಹಾಗೂ ರಜಾದಿನಗಳಲ್ಲಿ ನಡೆಸಲಾಗುವುದು. ಪರೀಕ್ಷಾ ಪೂರ್ವ ತರಬೇತಿ ಪಡೆಯಲ್ಛಿಸುವ ಅಭ್ಯರ್ಥಿಗಳು […]
ಜನಸಂಖ್ಯಾ ನಿಯಂತ್ರಣ ಇಂದಿನ ಅಗತ್ಯತೆಗಳಲ್ಲಿ ಒಂದು: ಮಾಲಿನಿ ಜೆ. ಶೆಟ್ಟಿ
ಉಡುಪಿ, ಜುಲೈ 19: ಜನಸಂಖ್ಯೆ ಹೆಚ್ಚಳ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಜನಸಂಖ್ಯಾ ನಿಯಂತ್ರಣ ಇಂದಿನ ಅಗತ್ಯತೆಗಳಲ್ಲಿ ಒಂದು. ಸಮತೋಲಿತ ಸಮುದಾಯ ಮತ್ತು ಸಂಪನ್ಮೂಲಗಳ ಬಳಕೆ ಸರಿಯಾದ ದಾರಿಯಲ್ಲಿ ಇರಬೇಕು ಮುಂದಿನ ಪೀಳಿಗೆ ಈ ದಿಸೆಯಲ್ಲಿ ಸಾಗಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ ತಿಳಿಸಿದರು. ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಕಾರ್ಕಳ ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು […]
ಕಲ್ಲಪದವು: ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ !
ಮಂಗಳೂರು: ಪತಿರಾಯನೋರ್ವ ಪತ್ನಿಯನ್ನು ಚೂರಿಯಿಂದ ಇರಿದ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಲ್ಲಪದವು ಎಂಬಲ್ಲಿ ಸಂಭವಿಸಿದೆ.ಕೊಲೆಗೈದ ಆರೋಪಿ ಪತಿ ಗಣೇಶ್ ಎಂಬಾತನನ್ನು ಬಂಧಿಸಲಾಗಿದೆ. ಗಣೇಶ್ ತನ್ನ ಪತ್ನಿ ಅಕ್ಷತಾ ಜತೆ ಜಗಳವಾಡಿ ಅನಂತರ ಮನೆಯಲ್ಲಿ ಇದ್ದ ಚೂರಿಯಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಅಕ್ಷತಾ ಹತ್ತಿರದಲ್ಲಿ ಇದ್ದ ತನ್ನ ತಾಯಿ ಮನೆಗೆ ಓಡಿದ್ದಾಳೆ. ಆಗ ಹಿಂಬಾಲಿಸಿದ ಗಣೇಶ್ ಮತ್ತೆ ಇರಿಯಲು ಯತ್ನಿಸಿದಾಗ ಅಲ್ಲಿದ್ದವರು ಆತನನ್ನು ತಡೆದಿದ್ದಾರೆ. ಈ ಸಂದರ್ಭ ಆತ ಸ್ಥಳದಿಂದ ಓಡಿದ್ದಾನೆ.ಈ […]
ಮಂಗಳೂರು: ಬ್ರಹ್ಮರಕೋಟ್ಲು ಭೀಕರ ರಸ್ತೆ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು
ಮಂಗಳೂರು: ಟವೇರಾ ಕಾರು ಮತ್ತು ಟ್ಯಾಂಕರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬಿಸಿರೋಡ್- ಮಂಗಳೂರು ರಸ್ತೆಯ ಬ್ರಹ್ಮರಕೋಟ್ಲು ಟೋಲ್ಗೇಟ್ ಬಳಿ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತೆ ಮೂವರು ಗಂಭೀರ ಗಾಯಗೊಂಡಿದ್ದಾರೆ.ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಬ್ರಹ್ಮರಕೋಟ್ಲು ಬಳಿ ಟವೇರಾದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಭಟ್ಕಳ ಮೂಲದ ಕುಟುಂಬ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.