ಗದ್ದೆಗಿಳಿದು ಕೃಷಿ ಪಾಠ ಕಲಿತರು: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಟಿ ಕಾರ್ಯ
ಗಂಗೊಳ್ಳಿ : ಯುವ ಜನತೆ ಕೃಷಿಯಿಂದ ದೂರವಾಗುತ್ತಿದ್ದಾರೆ ಎಂಬ ಅಪವಾದ ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಕೃಷಿ ಚಟುವಟಿಕೆ ನಡೆಸುವ ಮೂಲಕ ಯುವ ಜನತೆ ಕೃಷಿಯಿಂದ ದೂರ ಸರಿಯುತ್ತಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನ ನಡೆಸಿದ್ದಾರೆ.ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಂಗೊಳ್ಳಿಯ ನಾಟಿವೈದ್ಯ ನಾರಾಯಣ ಪೂಜಾರಿ ಅವರ ಗದ್ದೆಯಲ್ಲಿ ಸೋಮವಾರ ನಾಟಿ ಕಾರ್ಯ ನಡೆಸಿದರು. ರೋಟರಿ ಕ್ಲಬ್ ಗಂಗೊಳ್ಳಿ ಆಶ್ರಯದಲ್ಲಿ […]
ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನ: ನದಿಗೆ ಹಾರಿ ಸಾವು
ಮಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹಲ್ಲೆ ಆರೋಪಿ ನದಿಗೆ ಜಿಗಿದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ವ್ಯಕ್ತಿಯೊಬ್ಬ ಪೊಲೀಸರು ವಶಕ್ಕೆ ಪಡೆದು ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಭಾನುವಾರ ರಾತ್ರಿ ಕೂಳೂರು ಸೇತುವೆಯಿಂದ ಫಲ್ಗುಣಿ ನದಿಗೆ ಜಿಗಿದಿದ್ದು, ಮುಳುಗಿ ಮೃತಪಟ್ಟಿದ್ದಾನೆ. ಕುದ್ರೋಳಿ ನಿವಾಸಿ ಮುನೀರ್, ಮೃತ ವ್ಯಕ್ತಿ. ಕೂಳೂರು ಸೇತುವೆಯಿಂದ ಜಿಗಿದಿದ್ದ ಆರೋಪಿಯ ಮೃತದೇಹ ಬೆಂಗರೆ ಸಮೀಪ ನಿನ್ನೆ ಪತ್ತೆಯಾಗಿದೆ. ಮುನೀರ್ ಭಾನುವಾರ ಸಂಜೆ ತನ್ನ ಪತ್ನಿಗೆ ಹಲ್ಲೆ […]
ವಿಧವೆ ಸೊಸೆಗೆ ಮದುವೆ ಮಾಡಿಸಿದ ಅತ್ತೆ..!
ಮಂಗಳೂರು: ಅತ್ತೆಯೇ ವಿಧವೆ ಸೊಸೆಗೆ ಮದುವೆ ಮಾಡಿಸಿದ ಅಪರೂಪದ, ಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಬೆಳ್ಳಾರೆಯ ಕೋಟೆ ದೇವಸ್ಥಾನದಲ್ಲಿ ಸೋಮವಾರ ಈ ಅಪರೂಪದ ಮದುವೆ ಸಮಾರಂಭ ನಡೆದಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಪುತ್ರಿ ಸುಶೀಲಾ ಎಂಬುವವರನ್ನು ಅದೇ ಗ್ರಾಮದ ದಿವಂಗತ ಪದ್ಮಯ್ಯರ ಪುತ್ರ ಮಾಧವ ಎಂಬುವವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಆದರೆ ವಿವಾಹವಾದ ವರ್ಷದೊಳಗೆ ಅಪಘಾತದಿಂದ ಮಾಧವ ಇಹಲೋಕ ತ್ಯಜಿಸಿದ್ದರು. ಅದಾಗಲೇ ಗರ್ಭಿಣಿಯಾಗಿದ್ದ […]
ವಿವಾಹಿತ ಮಹಿಳೆಗೆ ಅಶ್ಲೀಲ ಸಂದೇಶ: ಓರ್ವ ಬಂಧನ
ಮಂಗಳೂರು: ವಿವಾಹಿತ ಮಹಿಳೆಗೆ ಅಶ್ಲೀಲ ಚಿತ್ರ, ಸಂದೇಶಗಳನ್ನು ಕಳುಹಿಸುತ್ತಿದ್ದ ಪುತ್ತೂರಿನ ವ್ಯಕ್ತಿಯೊಬ್ಬನನ್ನು ಮಂಗಳೂರು ನಗರದ ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಡ್ನೂರಿನ ನೆಹರೂ ನಗರ ನಿವಾಸಿ ಗಿರೀಶ್ ಕೆ.ಪಿ. ಬಂಧಿತ ಆರೋಪಿ. ಈತನನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ವಾಟ್ಸ್ ಆ್ಯಪ್ ಮೂಲಕ ಅಶ್ಲೀಲ ಚಿತ್ರ, ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದರು. ಆರೋಪಿ ವೃತ್ತಿಯಲ್ಲಿ […]
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಭಸ್ಮಾಸುರ ಮೋಹಿನಿ”
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರಸ್ಟ್ ಕಿರಿಮಂಜೇಶ್ವರ, ಇವರ ಸಂಯೋಜನೆಯಲ್ಲಿ ಕರ್ನಾಟಕ ಜಾನಪದ ಪರಿಷದ್,ಉಡುಪಿ ಜಿಲ್ಲ್ಲಾ ಘಟಕ,ತಲ್ಲೂರು ಫ್ಯಾಮಿಲಿ ಟ್ರಸ್ಟ್ಇದರ ಸಹಯೋಗದೊಂದಿಗೆ ನಡೆಸಲ್ಪಡುವ ಯಕ್ಷ ಅಷ್ಟಾಹ ಕಾರ್ಯಕ್ರಮದಲ್ಲಿ “ಭಸ್ಮಾಸುರ ಮೋಹಿನಿ” ಎಂಬ ಪ್ರಸಂಗದ ಯಕ್ಷಗಾನ ನಡೆಯಿತು.