ಹಿರಿಯಡ್ಕ: ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಫಲಿತಾಂಶ

ಉಡುಪಿ, ಜುಲೈ 10: ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಿರಿಯಡ್ಕದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ಮೇ/ಜೂನ್ 2019ರ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದೆ. ಕಲಾ ವಿಭಾಗದಲ್ಲಿ ಶೇ.100 ರಷ್ಟು ಫಲಿತಾಂಶ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.88.78 ರಷ್ಟು ಫಲಿತಾಂಶ ಬಂದಿದ್ದು, ಅತಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅತ್ಯುನ್ನತ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. […]

ಮಂಗಳೂರು ವಿವಿ ಪದವಿಯಲ್ಲಿ ಕನ್ನಡ ಕಡ್ಡಾಯ: ಜಾಗೃತಿ ಸಮಿತಿ ನಿರ್ಣಯ

ಉಡುಪಿ, ಜುಲೈ 10: ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪದವಿ ತರಗತಿಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಕಡ್ಡಾಯಗೊಳಿಸುವಂತೆ ಉಡುಪಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ಕುರಿತು ವಿಶ್ವ ವಿದ್ಯಾನಿಲಯ ಹಾಗೂ ರಾಜ್ಯ ಸರಕಾರದ ಗಮನಕ್ಕೆ ತರಲು ತೀರ್ಮಾನಿಸಲಾಯಿತು. ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪಿಯ ಪದವಿ ತರಗತಿಗಳಲ್ಲಿ ಪ್ರಸಕ್ತ ಇಂಗ್ಲೀಷ್ ಭಾಷೆ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದ್ದು, ಇತರೆ ಭಾಷೆ […]

ಮನೆ ನಿರ್ಮಾಣ, ಉಡುಪಿ ಜಿಲ್ಲೆಯಲ್ಲಿ ಮಳೆ ಕೊಯ್ಲು ಕಡ್ಡಾಯ: ಜಿಲ್ಲಾಧಿಕಾರಿ

ಉಡುಪಿ, ಜುಲೈ 10: ಜಲ್ಲೆಯ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಮಳೆ ನೀರು ಮರು ಪೂರಣ ಯೋಜನೆ ಕಡ್ಡಾಯ ಗೊಳಿಸಲಾಗಿದೆ. ಇಲ್ಲದಿದ್ದರೆ, ಮನೆ ನಿರ್ಮಾಣ ನಂತರ ಕಂಪ್ಲೀಷನ್ ಸರ್ಟಿಫಿಕೇಟ್(ಸಿಸಿ) ಸಿಗುವುದಿಲ್ಲ. ಭಾರತ ಸರ್ಕಾರವು ಜಲಭದ್ರತೆಗಾಗಿ “ಜಲ ಶಕ್ತಿ ಅಭಿಯಾನ” ಎಂಬ ಕಾರ್ಯಕ್ರಮವನ್ನು ರಾಜ್ಯ ಸರಕಾರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಬುಧವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ […]

ಮೊಟ್ಟೆಯಿಂದ ದೂರವಾಗುತ್ತದೆ ಮಧುಮೇಹ: ಇದು ಒಂದು ಮೊಟ್ಟೆಯ ಆರೋಗ್ಯದ ಕತೆ

ಮೊಟ್ಟೆ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಎನ್ನುವುದು ಕೆಲವರಿಗೆ ಮಾತ್ರ ಗೊತ್ತು. ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.  ಇತ್ತೀಚೆಗೆ ಅಧ್ಯಯನ ಸಂಸ್ಥೆಯೊಮದು ನಿರ್ದಿಷ್ಠ ಲಿಪಿಡ್ ಅಣುಗಳನ್ನೊಳಗೊಂಡ ಹೆಚ್ಚಿನ ಮೊಟ್ಟೆ ಸೇವಿಸುತ್ತಿದ್ದ ಪುರುಷರ ರಕ್ತದ ಮಾದರಿಗಳನ್ನು ಟೈಪ್-2 ಡಯಾಬಿಟಿಸ್ ನಿಂದ ಮುಕ್ತವಾಗಿರುವಂತಹ ಪುರುಷರ ರಕ್ತದ ಮಾದರಿಯೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಸಕಾರಾತ್ಮಕ ಅಂಶ ಕಂಡುಬಂದಿದೆ. ಪ್ರೋಟಿನ್ ನ ಗಣಿ ಈ ಮೊಟ್ಟೆ: ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅಂಶದಿಂದಾಗಿ ಮೊಟ್ಟೆಯನ್ನು ಹೆಚ್ಚಾಗಿ  ಸೇವಿಸಬಾರದು […]

ತೆರೆಗೆ ಬರ್ತಿದೆ ಮಹಿಳಾ ಕ್ರಿಕೆಟ್ ನ ಮಿಂಚಿಂಗ್ ತಾರೆ ಮಿಥಾಲಿ ರಾಜ್ ಕತೆ !

ಮೂವಿ ಮಸಾಲ: ಈಗೀಗ ಖ್ಯಾತನಾಮರ ಕುರಿತು  ಬಯೋಪಿಕ್ ಮಾಡುವುದು ಒಂದು ಟ್ರೆಂಡ್ ಆಗಿದೆ. ಈಗ ಅದೆ ಸಾಲಿಗೆ ಮತ್ತೊಂದು ಬಯೋಪಿಕ್ ಸೇರ್ಪಡೆಯಾಗುತ್ತಿದೆ. ಅದೇ  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನ ಕಥೆಯನ್ನು ಆಧರಿಸಿದ ಬಯೋಪಿಕ್. ಈಗಾಗಲೇ ಮಿಥಾಲಿ ರಾಜ್ ಚಿತ್ರ ನಿರ್ಮಾಣಕ್ಕೆ ಸಾಕಷ್ಟು ತಯಾರಿಗಳು ನಡೆಯುತ್ತಿವೆ. ನಾಯಕಿ ಮಿಥಾಲಿ ರಾಜ್ ಪಾತ್ರದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿವೆ. ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ […]