ಶಾಲಾ ಬಾಲಕಿ ಮೇಲೆ ಅತ್ಯಾಚಾರ: ಪುತ್ತೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ
ಮಂಗಳೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಪುತ್ತೂರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪುತ್ತೂರಿನ ಪಾಪೆಮಜಲು ಎಂಬಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಸ್ಥಳೀಯ ನಿವಾಸಿ ವಿವಾಹಿತ ಅಜಿತ್ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಆಸ್ಪತ್ರೆಗೆ ದಾಖಲಾಗಿದ್ದ […]
ಹಿಂದುಳಿದ ವರ್ಗಗಳ ಕಾನೂನು ಪದವೀಧರಿಗೆ ತರಬೇತಿ: ಅರ್ಜಿ ಆಹ್ವಾನ
ಉಡುಪಿ, ಜುಲೈ 5: 2019-20ನೇ ಸಾಲಿಗೆ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಅರ್ಹ ಮತ್ತು ಆಸಕ್ತ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗಧಿತ ಅರ್ಜಿ ನಮೂನೆಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಣಿಪಾಲ, ಉಡುಪಿ ಕಛೇರಿಯಿಂದ ಕಛೇರಿ ಕೆಲಸದ ಸಮಯದಲ್ಲಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವ ಕಾನೂನು ಪದವೀಧರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಮತ್ತು 3ಬಿ ಗಳಿಗೆ ಸೇರಿದವರಾಗಿರಬೇಕು. ಪ್ರವರ್ಗ-1 ಕ್ಕೆ 3,50,000 ರೂ. (ರೂ. […]
ಮರೆಯಾದ ಪ್ರಾಮಾಣಿಕ ರಾಜಕಾರಣದ ಸಾಕ್ಷಿ ಪ್ರಜ್ಞೆ: ಗೋಪಾಲ ಭಂಡಾರಿ ಅವರಿಗೆ ಉಡುಪಿ Xpress ನುಡಿ ನಮನ
ಅವರ ಕಚೇರಿಯ ಮುಂದೆ ಯಾವುದೋ ದೂರದ ಊರುಗಳಿಂದ ಸಮಸ್ಯೆಗಳ ಅರ್ಜಿಗಳನ್ನು ಹಿಡಿದುಕೊಂಡು ಬರುವ ಸಾಮಾನ್ಯ ಮನುಷ್ಯರು ಯಾವಾಗ ನೋಡಿದರೂ ಇರುತ್ತಿದ್ದರು. ಅವರೆಂದೂ ಆ ಮನುಷ್ಯರನ್ನು ಖಾಲಿ ಕೈಯಲ್ಲಿ ಕಳಿಸಲಿಲ್ಲ. ತಾವು ಕಷ್ಟದಲ್ಲಿದ್ದರೂ ಒಂದಷ್ಟು ಧನ ಸಹಾಯ ಮಾಡಿ ಸಮಾಧಾನ ಹೇಳಿಯೇ ಕಳುಹಿಸುತ್ತಿದ್ದರು. ಮಾಜಿ ಶಾಸಕನಾದರೂ ಅವರ ಕಚೇರಿಯ ಮುಂದೆ ಪಾಪದ ಕೈಗಳು ಸಹಾಯಾಸ್ತ ಬೇಡಿಕೊಂಡು ಬಂದಾಗೆಲ್ಲ ಇವರು ಮಿಡಿಯುತ್ತಿದ್ದರು. ನಿಜ. ಬಡವರ ಕಷ್ಟಗಳಿಗೆ ಮಿಡಿಯುತ್ತಿದ್ದ ಕಾರ್ಕಳದ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ಗುರುವಾರ ನಮ್ಮಿಂದ ಮರೆಯಾಗಿದ್ದಾರೆ. […]