ಸ್ಪೈಡರ್‌ಮ್ಯಾನ್ ಫಾರ್‌ಹೋಮ್ ಭಾರತದಲ್ಲಿ ಬಿಡುಗಡೆ ಮೊದಲ ದಿನವೇ 10 ಕೋಟಿ ರೂ. ಗಳಿಕೆ
ಜಗತ್ತಿನಾದ್ಯಂತ ಬಿಡುಗಡೆಗೊಂಡು ಗಲ್ಲಪೆಟ್ಟಿಗೆ ದೋಚುತ್ತಿರುವ ಸ್ಪೈಡರ್‌ಮ್ಯಾನ್ ಫಾರ್‌ಹೋಮ್ ಚಲನಚಿತ್ರ ಭಾರತದಲ್ಲಿ ಮೊದಲದಿನವೇ (ಗುರುವಾರ) 10 ಕೋಟಿ ರೂ.,ಗಳಿಕೆ ಮಾಡಿದೆ. ಟಾಮ್ ಹಾಲೆಂಡ್ ಅಭಿನಯದ, ವಾರ್ವಲ್ ಸಿನಿಮ್ಯಾಟಿಕ್ ಯೂನಿವರ್ಸ್ ನಿರ್ಮಾಣದ ಸ್ಪೈಡರ್ ಭಾರತದಲ್ಲಿ ಉತ್ತಮ ಆರಂಭವನ್ನು ಪಡೆದಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರುಣ್ ಆದರ್ಶ್ ಅಂಕಿ ಅಂಶಗಳನ್ನು ಟ್ವೀಟ್ ಮಾಡಿದ್ದಾರೆ. ಹಾಲಿವುಡ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವುದನ್ನು ಮುಂದುವರೆಸುತ್ತಿದೆ. ಸ್ಪೈಡರ್‌ಮ್ಯಾನ್ ಗಳಿಕೆ ಬಗ್ಗೆ ಚುಟುಕಾಗಿ ವಿಶ್ಲೇಷಿಸಿದ್ದಾರೆ. ವಾರಂತ್ಯದಲ್ಲಿ ಗಳಿಕೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಪೈಡರ್‌ಮ್ಯಾನ್‌ನ ಮಾರ್ಗದರ್ಶಕ ಮತ್ತು […]
ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ
ಉಡುಪಿ:ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ ಸೂಚಿಸಿದ್ದಾರೆ.ಹಳ್ಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಬಡವರ ಕಷ್ಟಗಳನ್ನು ಅರಿತು ಅದಕ್ಕೆ ಸ್ಪಂದಿಸಿ ಸಹಾಯ ಮಾಡುತ್ತಾ, ಸಣ್ಣ ಜವಾಬ್ದಾರಿಯಂದ ಹೆಜ್ಜೆ ಹೆಜ್ಜೆಗೂ ಸಾಧನೆ ಮಾಡಿ ಜನಪ್ರಿಯ ಶಾಸಕರಾಗಿ ಸೇವೆ ಮಾಡಿದ ಸರಳ ಸಜ್ಜನಿಕೆಯ ರಾಜಕಾರಣಿ ಆದ ಗೋಪಾಲ ಭಂಡಾರಿಯವರು ನಿಧನರಾಗಿರುವುದು ದುಃಖ ತಂದಿದೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ಕೊಟ್ಟು, ಅವರ ಆತ್ಮಕ್ಕೆ ಸದ್ಗತಿಯಾಗಲಿ ಎಂದು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ ತಿಳಿಸಿದ್ದಾರೆ
ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿಯವರ ಅಂತಿಮ ದರ್ಶನ : ಗೌರವ ಸಲ್ಲಿಸಿದ ಸಾರ್ವಜನಿಕರು, ಅಭಿಮಾನಿಗಳು
ಕಾರ್ಕಳ : ಪ್ರಾಮಾಣಿಕ ರಾಜಕಾರಣಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಭಂಡಾರಿಯವರ ಪ್ರಾರ್ಥಿವ ಶರೀರವನ್ನು ಶುಕ್ರವಾರ ಕಿಸಾನ್ ಸಭಾ ಟ್ರಸ್ಟ್ ರಾಜೀವ್ ಗಾಂಧಿ ಸಬಾ ಭವನದಲ್ಲಿರಿಸಿ ಸಾರ್ವಜನಿಕ ದರ್ಶನಕ್ಕೆ ಕಲ್ಪಿಸಿಲಾಯಿತು.ಬೆಳ್ಳಗ್ಗೆ 9:30 ರ ಹೊತ್ತಿಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಶವ ಮಹಜರುಗೊಳಿಸಿ ಹೊರಟ ಪಾರ್ಥಿವ ಶರೀರವು 11 ಗಂಟೆಗೆ ಕಾರ್ಕಳ ಕಿಸಾನ್ ಸಭಾ ಟ್ರಸ್ಟ್ ವೇದಿಕೆಯಲ್ಲಿ ತಲುಪಿತ್ತು. ಸಾವಿರಾರು ಅಭಿಮಾನಿಗಳಿಂದ, ಸಾರ್ವಜನಿಕರಿಂದ ದರ್ಶನ: ಭಂಡಾರಿಯವರ ಅಂತಿಮ ದರ್ಶನಕ್ಕಾಗಿ ಬೆಳ್ಳಗ್ಗಿನಿಂದಲೇ ಸಾವಿರಾರು ಅಭಿಮಾನಿಗಳು, ಸಾರ್ವಜನಿಕರು ಕಾರ್ಯಕರ್ತರು […]
ಕಾರ್ಕಳ: ಮಾಳದಲ್ಲಿ ಅಳಿವಿನಂಚಿನಲ್ಲಿರುವ ಮಲಬಾರ್ ಮರ ಕಪ್ಪೆ ಪತ್ತೆ
ಚಿತ್ರ: ಮನು ಬಿ.ನಕ್ಕತ್ತಾಯ ಉಡುಪಿ: ಅಳಿವಿನಂಚಿನಲ್ಲಿರುವ ‘ಮಲಬಾರ್ ಟ್ರೀ ಟೋಡ್’ (ಮಲಬಾರ್ ಮರ ಕಪ್ಪೆ) ಪ್ರಬೇಧವು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಣ್ಣ ಪಾಪು ಮನೆ ಪರಿಸರದಲ್ಲಿ ಪತ್ತೆಯಾಗಿದ್ದು, ಈ ಮೂಲಕ ಮಾಳ ಅರಣ್ಯ ಪ್ರದೇಶವು ಕಪ್ಪೆಗಳಿಗೆ ಸೂಕ್ತವಾದ ಆವಾಸ ಸ್ಥಾನ ಎಂಬುದಾಗಿ ತಿಳಿದುಬಂದಿದೆ. 2003-04ರ ವರೆಗೆ ಅತ್ಯಂತ ಅಪರೂಪ ಎನಿಸಿದ್ದ ‘ಮಲಬಾರ್ ಟ್ರೀ ಟೋಡ್’ ಕಪ್ಪೆ ಪ್ರಬೇಧವು ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳ ಎರಡು ಮೂರು ಕಡೆಗಳಲ್ಲಿ ಮಾತ್ರ ಕಂಡು ಬಂದಿತ್ತು. ಕಪ್ಪೆ […]
ಮಂಗಳೂರು: ಸಾಲ ನೀಡುವುದಾಗಿ ವಂಚನೆ, ಓರ್ವನ ಬಂಧನ
ಮಂಗಳೂರು: ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಆಮಿಷವೊಡ್ಡುವ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದು, ಓರ್ವನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ತಾಂಡ ನಿವಾಸಿ ಹೊಸದಿಲ್ಲಿಯ ಸೌತ್‌ವೆಸ್ಟ್‌ನ ಜಗದಂಬಾ ವಿಹಾರ್ ಬಳಿ ನಿವಾಸಿ ಯೂಸುಫ್ ಖಾನ್ , ಬಂಧಿತ ಆರೋಪಿ. ಈತ ಭಾರತೀ ಇಎಂಐ ಕಟ್ಟಬೇಕು ಹೇಳಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ, ಮೂರು ತಿಂಗಳು ಹಣ ಕಟ್ಟಬೇಕು ಎಂದು ಹೇಳಿ 1.70 ಲಕ್ಷ ರೂ. ಪಡೆದಿದ್ದು, ಅನಂತರ ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈ ಪ್ರಕರಣವನ್ನು ಪತ್ತೆ […]