ಕುಂದಾಪುರ:ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದ ಮೂವರು ಆರೋಪಿಗಳ ಬಂಧನ
ಕುಂದಾಪುರ: ಕೊಲ್ಲೂರು ವನ್ಯಜೀವಿ ವಲಯದ ವ್ಯಾಪ್ತಿಯ ಮಾದಿಬರೆ ಮೀಸಲು ಅರಣ್ಯದ ಒಳಗೆ ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಮಾವಿನಕಾರು ನಿವಾಸಿಗಳಾದ ಉದಯ ನಾಯ್ಕ, ಪ್ರಶಾಂತ ನಾಯಕ, ಹುಲಿಪಾರೆ ನಿವಾಸಿ ನಾರಾಯಣ ಶೆಟ್ಟಿ ಬಂಧಿತರು. ನಾರಾಯಣ ಶೆಟ್ಟಿ ಎಂಬವರು ತಾನು ಕಟ್ಟುತ್ತಿರುವ ಹೊಸ ಮನೆಯ ದೇವರ ಕೋಣೆಗೆ ಸಾಗುವಾನಿ ಮರವನ್ನು ತಂದುಕೊಡುವಂತೆ ಉದಯ ಮತ್ತು ಪ್ರಶಾಂತ್ ಎಂಬವರಿಗೆ ಪ್ರೆರೇಪಿಸಿದ್ದು ಆರೋಪಿಗಳು ಅಕ್ರಮವಾಗಿ ಸಾಗುವಾನಿ ಕಡಿದಿದ್ದ ಬಗ್ಗೆ ವಿಚಾರಣೆ […]
ಹಿಂದೂ ಸನ್ಯಾಸಿಗೆ ಮುಸ್ಲಿಂ ಚಾಲಕ…!
ಉಡುಪಿ: ಮಂಗಳವಾರ ಬರೋಡಾದಿಂದ ಮುಂಬೈನ ಬೋರಿವಿಲಿ ರೈಲ್ವೇ ಸ್ಟೇಶನ್ನಿಗೆ ಬಂದ ಪೇಜಾವರ ಶ್ರೀಪಾದರನ್ನು ಡೊಂಬಿವಿಲಿಗೆ ಟ್ಯಾಕ್ಸಿಯಲ್ಲಿ ಕರೆತರುವ ಮೂಲಕ ಚಾಲಕ ‘ಶರ್ಫ್ ಉದ್ದೀನ್ ಮಲೀಕ್’ ಸೌಹಾರ್ದತೆ ಮೆರೆದಿದ್ದಾರೆ.ಅಲ್ಲದೇ ಅವರಿ ಆತ್ಮೀಯತೆಯಿಂದ ಗುರುಗಳ ಕೈ ಕುಲುಕಿ ಬೀಳ್ಕೊಟ್ಟಿದ್ದು, ಬಹಳ ವಿಶೇಷವಾಗಿತ್ತು. ‘ವಿವಿಧತೆಯಲ್ಲಿ ಏಕತೆ’ ಯೆಂಬ ಭಾರತದ ಸಾದ್ಗುಣ್ಯಕ್ಕೆ ಪೇಜಾವರರು ಅಪ್ಪಟ ರಾಯಭಾರಿ. ಈ ಕಾರಿನ ಡ್ಯಾಶ್ಬೋರ್ಡ್ ಮೇಲೊಮ್ಮೆ ಕಣ್ಣಾಡಿಸಿ. ಭಾರತದ ಬಾವುಟ ರಾರಾಜಿಸುತ್ತಿದೆ. ರಾಷ್ಟ್ರವನ್ನು ವಿರೋಧಿಸುವ ಅನೇಕರ ಮಧ್ಯೆ ಇದು ವಿಶೇಷವೇ.