ಮ್ಯಾಂಗ್ಲೂರ್ ಗೋಟ್ ಟ್ಯಾಲೆಂಟ್ ಮತ್ತು ಆರ್ಟಿಸ್ತ್ರೀ ಸ್ಪರ್ಧೆ: ಬಹುಮಾನ ವಿತರಣೆ

ಮಂಗಳೂರು: ಮಂಗಳೂರಿನ ಹೆಸರಾಂತ ಇವೆಂಟ್ ಮ್ಯಾನೇಜ್‌ಮಂಟ್ ಸಂಸ್ಥೆ ಡ್ರೀಮ್ ಕ್ಯಾಚರ್ಸ್ ವತಿಯಿಂದ ಟ್ಯಾಲೆಂಟ್ ಹಂಟ್ ಮತ್ತು ಮ್ಯಾಂಗ್ಲೂರ್ ಗೋಟ್ ಟ್ಯಾಲೆಂಟ್ ಸ್ಪರ್ಧೆ ಮಂಗಳೂರಿನ ಫಾರಂ ಫೀಝಾ ಮಾಲ್‌ನಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು ಶಿವಪ್ರೀಯಾ ಸಿಲ್ಕ್ಸ್‌ನ ಮಾಲಕರಾದ ರೇಷ್ಮಾ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅನಂತರ ಡ್ರೀಮ್ ಕ್ಯಾಚರ್ಸ್ನ ಆಡಳಿತ ನಿರ್ದೇಶಕರಾದ ಪೃಥ್ವೀ ಗಣೇಶ್ ಕಾಮತ್ ಮಾತನಾಡಿ, ಕಾರ್ಯಕ್ರಮ ನಡೆಸುವ ಉದ್ದೇಶ ಹಾಗೂ ಬಗ್ಗೆ ಮಾಹಿತಿ ನೀಡಿದರು.ಸಮಾರಂಭದಲ್ಲಿ‌ ಪ್ರವರಾ ಹಾಲಿ ಡೇಸ್‌ನ ಸೇಲ್ಸ್ ಹೆಡ್ ಅವಿನಾಶ್, ಡ್ರೀಮ್ ಕ್ಯಾಚರ್‍ಸ್‌ನ […]

ಮೂಡಬಿದಿರೆ ಸಾವಿರ ಕಂಬದ ಬಸದಿಯಲ್ಲಿ ‌ಕಳ್ಳತನ

ಮಂಗಳೂರು: ಇತಿಹಾಸ ಪ್ರಸಿದ್ಧ ಮೂಡಬಿದಿರೆಯ ಸಾವಿರ ಕಂಬದ ಜೈನಬಸದಿಯಲ್ಲಿ ಕಳ್ಳತನ‌ನಡೆದಿದ್ದು, ಬಸದಿಯ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆಸಿದ್ದಾರೆ. ಮೂಡಬಿದ್ರೆ ಪೇಟೆಯಲ್ಲಿರುವ ಸಾವಿರ ಕಂಬದ ಜೈನ ಬಸದಿಯ ಮುಂಭಾಗದ ಬಾಗಿಲು ಒಡೆದು ಕಳ್ಳರು ಒಳನುಗ್ಗಿದ್ದಾರೆ. ಈ ಬಗ್ಗೆ ತನಿಖೆಗೆ ಮೂಡಬಿದ್ರೆ ಜೈನ ಸ್ವಾಮೀಜಿ ಭಟ್ಟಾರಕ ಶ್ರೀ ಆಗ್ರಹಿಸಿದ್ದು, ಸ್ಥಳಕ್ಕೆ ಡಿಸಿಪಿ ಲಕ್ಷ್ಮಿಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಣಿಪಾಲದಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆ, ಜುಲೈ 10 ರೊಳಗೆ ಮಾಹಿತಿ ನೀಡಿ: ಜಿಲ್ಲಾಧಿಕಾರಿ

ಉಡುಪಿ, ಜುಲೈ 2: ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಕೆ.ಎಂ.ಎಫ್ ಡೈರಿ ಕ್ರಾಸ್ ವರೆಗಿನ ರಸ್ತೆಯಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆ ರೂಪಿಸಲು ನಿರ್ಧರಿಸಿದ್ದು, ಈ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ, ನಗರಸಭೆ, ಮೆಸ್ಕಾಂ ಸೇರಿದಂತೆ ಎಲ್ಲಾ ಇಲಾಖೆಗಳು ತಮ್ಮ ಅಗತ್ಯತೆಗಳ ಕುರಿತು ಜುಲೈ 10 ರ ಒಳಗೆ ಜಿಲ್ಲಾ ನಗರಾಭಿವೃದ್ದಿ ಕೋಶಕ್ಕೆ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಸ್ಥಿರ ಸಂಚಾರ […]

ಗೋಮಾಂಸ ರಫ್ತಿನ ಹಿಂದಿರುವ ಅಸಲಿಯತ್ತು ಬೆತ್ತಲೆಗೊಳಿಸಲಿ: ಅನ್ಸಾರ್ ಅಹಮದ್

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಯಶ್ ಪಾಲ್ ಸುವರ್ಣ ಅವರು ಗೋಕಳ್ಳತನ ಪ್ರಕರಣವನ್ನು ಹತೋಟಿಗೆ ತರಲು ಆಗ್ರಹಿಸುವ ಭರದಲ್ಲಿ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಗೋಕಳ್ಳತನವನ್ನು ಯಾವ ಜಾತಿ ಧರ್ಮದವರೂ ಸಮರ್ಥಿಸಿಕೊಳ್ಳುತ್ತಿಲ್ಲ. ಯಶ್ ಪಾಲ್ ಸುವರ್ಣದವರು ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿರುವ ಗೋಮಾಂಸದ ಬಗ್ಗೆ ಚಕಾರವೆತ್ತದೆ ಸ್ಥಳೀಯವಾಗಿ ನಡೆಯುತ್ತಿರುವ ಗೋಸಾಗಾಟ ಗೋಹತ್ಯೆಯ ಬಗ್ಗೆ ಮಾತನಾಡುತ್ತಿರುವುದು ಅವರ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತಿದೆ. ಗೋಹತ್ಯೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಹೇಳಿಕೆ ನೀಡುವ ಪ್ರತಿಭಟನೆಯನ್ನು […]

ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ, ಕ್ರೀಡೆಯಲ್ಲಿ ಸಾಕಷ್ಟು ಅವಕಾಶ: ರವೀಂದ್ರ ರೈ

ಉಡುಪಿ: ಕ್ರೀಡೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಮಕ್ಕಳು ಆಸಕ್ತಿ ತೋರಿಸುವ ಕ್ಷೇತ್ರಗಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಆಫ್‌- ಬರೋಡಾದ ಪ್ರಾದೇಶಿಕ ಪ್ರಬಂಧಕ ರವೀಂದ್ರ ರೈ ಹೇಳಿದರು. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಬ್ಯಾಂಕ್ ಆ- ಬರೋಡ ಸಹ ಪ್ರಾಯೋಜಕತ್ವದಲ್ಲಿ ೧೩ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಏರ್ಪಡಿಸಲಾದ ಆರು ದಿನಗಳ ಅಖಿಲ ಭಾರತ ಸಬ್ ಜ್ಯೂನಿಯರ್ ರ‍್ಯಾಂಕಿಂಗ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗೆ ಮಂಗಳವಾರ ಮಣಿಪಾಲದ ಮರಿನಾ ಕ್ರೀಡಾಂಗಣದಲ್ಲಿ ಚಾಲನೆ […]