ಜೂ.29: ಉಡುಪಿಯಲ್ಲಿ‌ಉಚಿತ ಗಿಡ ವಿತರಣೆ

ಉಡುಪಿ, ಜೂ.28: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಬಹುಮತದಿಂದ ಗೆಲುವು ಸಾಧಿಸಿದ ಶೋಭಾ ಕರಂದ್ಲಾಜೆ ಸಂಭ್ರಮದ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಉಚಿತ ಗಿಡ ವಿತರಣೆ ಕಾರ್ಯಕ್ರಮ ಜೂ. 29ರಂದು, ಸಂಜೆ 4 ಗಂಟೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ನಡೆಯಲಿದೆ ಎಂದು ಅಲ್ಪಸಂಖ್ಯಾತ ಮೋರ್ಚಾದ ಪ್ರ. ಕಾರ್ಯದರ್ಶಿ ಮೊಹಮ್ಮದ್ ಆರೀಫ್ ತಿಳಿಸಿದ್ದಾರೆ.

ಕಟಪಾಡಿ: ಸಾರ್ವಜನಿಕ ಸ್ಥಳದ ತ್ಯಾಜ್ಯ ರಾಶಿಗೆ ಎಂದು ಮುಕ್ತಿ?..  ಸ್ವಚ್ಛತೆಯ ಜವಾಬ್ದಾರಿ ಮರೆತರೇ ಜನತೆ…

ಉಡುಪಿ: ಕಟಪಾಡಿ‌ ಗ್ರಾ.ಪಂ.‌ ವ್ಯಾಪ್ತಿಯ ಚಾಕಡಿ ರೈಲ್ವೆ ಬ್ರಿಡ್ಜ್ ಬಳಿಯ ಈಶ್ವರ ದೇವಸ್ಥಾನದ ( ಸುಭಾಷ್ ನಗರ ಮತ್ತು ಕಟಪಾಡಿ ರಸ್ತೆ ) ಸಮೀಪದಲ್ಲಿ ಸಾರ್ವಜನಿಕ ಸ್ಥಳದಲ್ಲೇ ತ್ಯಾಜ್ಯ ರಾಶಿ ಹಾಕಲಾಗುತ್ತಿದ್ದು, ಇದರಿಂದಾಗಿ ಸ್ಥಳೀಯರು, ಸಾರ್ವಜನಿಕರಿಗೆ ಭಾರಿ ಸಮಸ್ಯೆ ಎದುರಾಗಿದೆ. ಕಳೆದ ಹಲವು‌ ಸಮಯದಿಂದ ಈ ತ್ಯಾಜ್ಯ ರಾಶಿ‌ ಇಲ್ಲಿದ್ದು‌, ಇದೀಗ ಮಳೆಗೆ ಮತ್ತಷ್ಟು ಸಮಸ್ಯೆ ಉದ್ಬವಾಗುತ್ತಿದೆ. ಬೇರೆ ಭಾಗಗಳಿಂದ ‌ಕಸ ತ್ಯಾಜ್ಯಗಳನ್ನು ತಂದು ಯಾರೋ ಸಾರ್ವಜನಿಕರೇ ಈ‌ ಪ್ರದೇಶದಲ್ಲಿ ಹಾಕುತ್ತಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಗಳ ತ್ಯಾಜ್ಯ, […]