ಕುಂದಾಪುರ: ಮಿನಿ ವಿಧಾನಸೌಧದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ:

ಕುಂದಾಪುರ: ಒಳ ಚರಂಡಿ ಯೋಜನೆಯ ಕಾಮಗಾರಿಯಿಂದಾದ ಅವ್ಯವಸ್ಥೆಗೆ ಅಸಮಧಾನ. ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಸರಿಯಾಗಿ ದೊರಕುತ್ತಿಲ್ಲ ಎನ್ನುವ ದೂರು. ಹೆದ್ದಾರಿ ಇಲಾಖೆಯ ನಿರ್ಲಿಪ್ತ ಧೋರಣೆಗೆ ಆಕ್ರೋಶ. ೯೪ಸಿ ಅರ್ಜಿ ವಿಲೆವಾರಿಗಾಗಿ ಮನವಿ. ಹಾಳಾಗಿರುವ ರಸ್ತೆ ದುರಸ್ತಿಗೆ ಒತ್ತಾಯ. ಬಸ್ ನಿಲ್ದಾಣದ ಸಮಸ್ಯೆ ಪರಿಹಾರಕ್ಕೆ ಆಗ್ರಹ. ಮಿನಿ ವಿಧಾನಸೌಧದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ. ಇದು ಪುರಸಭಾ ವ್ಯಾಪ್ತಿಯ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಾಯಕ ಆಯುಕ್ತರ ಮುಂದಿಟ್ಟ ಸಮಸ್ಯೆಗಳ ಲಿಸ್ಟ್. ಹೌದು.. ಮಂಗಳವಾರ […]
ಮಂಗಳೂರು ಏರ್ ರ್ಪೋರ್ಟ್ನಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ; 12.06 ಲಕ್ಷ ರೂ. ಮೌಲ್ಯದ ಚಿನ್ನ ವಶ

ಮಂಗಳೂರು: ಮಂಗಳೂರು ಏರ್ ಪೋರ್ಟ್ನಲ್ಲಿ ಮಂಗಳವಾರ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದ್ದು, ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.24 ಕ್ಯಾರೆಟ್ ನ 349.480 ಗ್ರಾಂ. ಸುಮಾರು 12.06 ಲಕ್ಷ ಮೌಲ್ಯದ ಚಿನ್ನವನ್ಮು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ .ದುಬೈನಿಂದ ಬಂದ ಪ್ರಯಾಣಿಕನೋರ್ವಟೈಗರ್ ಬಾಮ್ ಕ್ಯಾಪ್, ಟಾಲ್ಕಂ ಪೌಡರ್ ಬಾಟಲಿಯಲ್ಲಿ ಇಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಉಡುಪಿಯಲ್ಲಿ ಜು. 2ರಿಂದ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್

ಉಡುಪಿ: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ನೇತೃತ್ವದಲ್ಲಿ 13 ವರ್ಷದೊಳಗಿನ ಬಾಲಕ–ಬಾಲಕಿಯರ ಅಖಿಲ ಭಾರತ ಸಬ್ ಜ್ಯೂನಿಯರ್ ರ್ಯಾಂಕಿಂಗ್ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್–2019 ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ಹಾಗೂ ಮಣಿಪಾಲದ ಮರಿನಾ ಕ್ರೀಡಾಂಗಣದಲ್ಲಿ ಜು. 2ರಿಂದ 7ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಟೂರ್ನಿಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವ ಆಟಗಾರರು ಸಹಿತ ವಿವಿಧ ರಾಜ್ಯಗಳ ಅಗ್ರ ಶ್ರೇಯಂಕಿತ 1 ಸಾವಿರ ಆಟಗಾರರು […]
ಯುವ ಕಾರ್ಯಕರ್ತರಾಗುವ ಆಸೆ ಇದ್ದರೆ ಇಲ್ಲಿದೆ ಒಂದು ಚಾನ್ಸ್:

ಉಡುಪಿ : ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದಡಿ ನೆಹರು ಯುವ ಕೇಂದ್ರವು ಜಿಲ್ಲೆಗೆ 2019-20 ನೇ ಸಾಲಿಗೆ ರಾಷ್ಟ್ರೀಯ ಯುವ ಕಾರ್ಯಕರ್ತರ ಯೋಜನೆಯಡಿ ಯುವ ಕಾರ್ಯಕರ್ತರನ್ನು ಪ್ರತಿ ತಾಲೂಕಿಗೆ ಇಬ್ಬರಂತೆ (ಉಡುಪಿಯ 7 ತಾಲೂಕುಗಳಿಗೆ) ಒಟ್ಟು 14 ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಿದೆ. ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಹತೆ ಹೊಂದಿರುವ 29 ವರ್ಷದೊಳಗಿನ ಯುವಕ –ಯುವತಿಯರು ನೇಮಕಾತಿಗೆ ಅರ್ಹರು. ನೇಮಕಗೊಂಡ ಅಭ್ಯರ್ಥಿಗಳಿಗೆ 5,000 ರೂ. ಮಾಸಿಕ ಗೌರವಧನವನ್ನು ನೀಡಲಾಗುವುದು. ನೇಮಕಾತಿಯ ನೇರ ಸಂದರ್ಶನವು ಜೂನ್ […]
ಯಕ್ಷಗಾನ ಕಲಾವಿದರಾಗುವ ಆಸಕ್ತಿಯೇ?ಇಲ್ಲಿದೆ ನೋಡಿ ತರಬೇತಿ ಶಿಬಿರ

ಉಡುಪಿ :ಕರ್ನಾಟಕ ಯಕ್ಷಗಾನ ಅಕಾಡೆಮಿಯು 2019-20 ನೇ ಸಾಲಿನಲ್ಲಿ ಸಾಮಾನ್ಯ ಯೋಜನೆಯಡಿ 2 ತಿಂಗಳ ಯಕ್ಷಗಾನ ತರಬೇತಿಗೆ (ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗುತಿಟ್ಟು) ಕಲಾವಿದರುಗಳಿಂದ/ ಕಲಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯಕ್ಷಗಾನ ತರಬೇತಿಯನ್ನು ಕನಿಷ್ಟ 10 ಮಂದಿಗೆ ನೀಡಬಯಸುವ ಆಸಕ್ತ ಕಲಾವಿದರು/ ಕಲಾ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. 2018-19 ನೇ ಸಾಲಿನಲ್ಲಿ ಯಕ್ಷಗಾನ ತರಬೇತಿಗೆ ಅವಕಾಶ ಪಡೆದ ಕಲಾಸಂಸ್ಥೆ/ ಕಲಾವಿದರಿಗೆ ಅವಕಾಶವಿರುವುದಿಲ್ಲ. ಯಕ್ಷಗಾನ ತರಬೇತಿ ನೀಡಬಯಸುವ ಆಸಕ್ತ ಕಲಾವಿದರುಗಳು/ ಕಲಾಸಂಸ್ಥೆಗಳು ತಮ್ಮ ಮನವಿಯನ್ನು ಜುಲೈ 15 […]