ಗೃಹಪ್ರವೇಶಕ್ಕೆ ಬಂದವರಿಗೆಲ್ಲಾ ಒಂದೊಂದು ಗಿಡ ಕೊಟ್ಟರು: ಕಾರ್ಕಳದಲ್ಲಿ ಪರಿಸರ ಕಾಳಜಿ ಮೆರೆದ ಪರಿಸರ ಪ್ರೇಮಿಗಳು
ಪರಿಸರ ಪ್ರೀತಿ ಅನ್ನೋದು ನಮ್ಮಲ್ಲೇ ಹುಟ್ಟುವಂತದ್ದು. ತಮ್ಮ ಪರಿಸರದ ಬಗ್ಗೆ ಕಾಳಜಿ ಇರುವವರು ಹೇಗಾದರೂ ಮಾಡಿ ತಮ್ಮ ಪರಿಸರಕ್ಕೆ ಏನಾದರೂ ಕೊಡುಗೆ ನೀಡುತ್ತಲೇ ಇರುತ್ತಾರೆ. ಶನಿವಾರ ಕಾರ್ಕಳದ ಸಾಣೂರಿನಲ್ಲಿ ಗೃಹಪ್ರವೇಶದ ಗೌಜಿ. ಗೃಹಪ್ರವೇಶದಲ್ಲಿ ಭಾಗವಹಿಸಿದರಿಗೆ ಸಿಹಿ,ಭೋಜನ ನೀಡುವುದು ಎಲ್ಲಾ ಕಡೆ ಮಾಮೂಲು, ಆದರೆ ಈ ಮನೆಯವರು ಬಂದವರಿಗೆ ಬಗೆಬಗೆಯ ಗಿಡಗಳನ್ನು ನೀಡಿ ಪರಿಸರ ಕಾಳಜಿ ಮೆರೆದಿದ್ದಾರೆ. ಹೌದು ಶನಿವಾರ ಪುಲ್ಕೇರಿ ನವೀನ್ ಪ್ರಭು ಅವರ ಮನೆಯ ಗೃಹಪ್ರವೇಶದಲ್ಲಿ ಈ ನಾನಾ ವಿಧದ ಪರಿಸರಕ್ಕೆ ಪೂರಕವಾಗುವ ಗಿಡಗಳನ್ನು ವಿತರಿಸಲಾಗಿದ್ದು […]
ಕುಂದಾಪುರ: ಅಕ್ಕನನ್ನೇ ಕೊಂದ ತಮ್ಮನಿಗೆ ಕೊನೆಗೂ ಸಿಕ್ತು ಶಿಕ್ಷೆ
ಕುಂದಾಪುರ: ಹಣ ಕೊಡಲು ಪೀಡಿಸಿದ ಸಹೋದರನು ಗಂಭೀರ ಹಲ್ಲೆ ನಡೆಸಿ ಸೋದರಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲಿನ ಆರೋಪಣೆಗಳು ಸಾಭೀತಾಗಿದ್ದು ಆತ ದೋಷಿಯೆಂದು ತೀರ್ಮಾನಿಸಿ ಕುಂದಾಪುರದಲ್ಲಿನ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಶನಿವಾರ ತೀರ್ಪು ನೀಡಿದ್ದಾರೆ. ಜುಲೈ 22ರಂದು ರಾತ್ರಿ ತಾಲೂಕಿನ ವಡೇರಹೊಬಳಿ ಗ್ರಾಮದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ವಿಜಯಾ ಭಂಡಾರಿ (50) ಎನ್ನುವರು ಆಕೆ ಸೋದರ ಅಣ್ಣಪ್ಪ ಭಂಡಾರಿ (45) ಎನ್ನುವಾತ ನಡೆಸಿದ ಗಂಭೀರ ಹಲ್ಲೆಯಿಂದ ಆಸ್ಪತ್ರೆಗೆ […]
ಪಟಾಕಿ ಸಿಡಿಸಿ ಅಕ್ರಮ ಗೋ ಮಾರಾಟಗಾರರ ಸಂಭ್ರಮ, ಹಿಂದೂ ಸಂಘಟನೆಗಳ ಆಕ್ರೋಶ
ಮಂಗಳೂರು: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ 24 ಗೋವುಗಳನ್ನು ಮಂಗಳೂರಿನ ಪಣಂಬೂರು ಪೊಲೀಸರು ರಕ್ಷಣೆ ಮಾಡಿದ್ದರು. ಆದರೆ ಅದೇ ಗೋವುಗಳನ್ನು ಸುಳ್ಳು ದಾಖಲೆ ಸೃಷ್ಟಿಮಾಡಿ ಕೋರ್ಟ್ ಮೂಲಕ ಬಿಡಿಸಿಕೊಂಡು ಪಟಾಕಿ ಸಿಡಿಸಿ ವಿಜಯೋತ್ಸವದ ಮೂಲಕ ತೆಗೆದುಕೊಂಡು ಹೋದ ಗೋಹಂತಕರ ಕೃತ್ಯವನ್ನು ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ಖಂಡಿಸಿದೆ. ಜತೆಗೆ ಪೊಲೀಸ್ ಇಲಾಖೆಯ ವಿರುದ್ಧ ನಡೆಸಿದ ವಿಜಯೋತ್ಸವವನ್ನು ತೀವ್ರವಾಗಿ ಖಂಡಿಸಿ ಕೋಮುಗಲಭೆಗೆ ಪ್ರಚೋದನೆ ನೀಡುವ ಇಂತಹ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರಗಿಸಲು ಆಗ್ರಹಿಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ […]
ಶ್ವಾನಗಳಿಗಾಗಿ ಕಾರ್ಕಳದಲ್ಲಿ ನಿರ್ಮಾಣಗೊಳ್ಳುತ್ತಿದೆ ನೂತನ ಕ್ಯಾನಲ್ ಹೌಸ್:
ವರದಿ : ಸಂಪತ್ ಚರಣ್ ಕಾರ್ಕಳ ಕಾರ್ಕಳ : ಇನ್ನು ಮುಂದೆ ನಕ್ಸಲ್ ಕೊಂಬಿಂಗ್ ಕಾರ್ಯಚರಣೆ ವೇಳೆ ನಕ್ಸಲ್ ಜಾಡು ಹಿಡಿಯುವ ಜತೆ ನೆಲಬಾಂಬ್ ಪತ್ತೆಗಾಗಿ ಎಎನ್ಎಫ್ ಸಿಬ್ಬಂದಿ ಗಳ ಜತೆ ಪೊಲೀಸ್ ಶ್ವಾನಗಳು ತಮ್ಮ ಕಾರ್ಯಚರಣೆ ನಡೆಸಲಿವೆ. ಅದಕ್ಕಾಗಿ ರಾಮ ಸಮುದ್ರದ ಬಳಿಯಲ್ಲಿರುವ ಎಎನ್ಎಫ್ ಕ್ಯಾಂಪಸ್‌ನಲ್ಲಿ ಸರಕಾರದದಿಂದ ಎಎನ್ಎಫ್ ಅನುದಾನದ ಮೂಲಕ ಸುಮಾರು 22 ಲಕ್ಷ ವೆಚ್ಚದಲ್ಲಿ ಶ್ವಾನಗಳಿಗಾಗಿ 1200 ಚದರ ಅಡಿ ವಿಸ್ತೀರ್ಣದ ಕ್ಯಾನಲ್ ಹೌಸ್ ನಿರ್ಮಾಣವಾಗುತ್ತಿದೆ. ನಾಲ್ಕು ಶ್ವಾಸಗಳಿಗಾಗಿ ನಿರ್ಮಾಣಗೊಳ್ಳುತ್ತಿರುವ ಈ […]
ಮಂಗಳೂರು: ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ಡಾ.ರಾಜೇಶ್ ಭಟ್ ಕುಸಿದು ಬಿದ್ದು ಸಾವು
ಮಂಗಳೂರು: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ರಾಜೇಶ್ ಭಟ್ (48) ಅವರು ನಗರದ ಮಂಗಳಾ ಸ್ಟೇಡಿಯಂನಲ್ಲಿ ಜೂ.22 ರಂದು ಬ್ಯಾಡ್ಮಿಂಟನ್ ಪಂದ್ಯಾಟ ಆಡುತ್ತಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಮಣ್ಣಗುಡ್ಡೆಯ ಗಾಂಧಿನಗರದ ತಮ್ಮದೇ ಪಾಲುದಾರಿಕೆಯ “ಭಟ್ ನರ್ಸಿಂಗ್ ಹೋಮ್ ” ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕುಸಿದು ಬಿದ್ದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಡಾ.ರಾಜೇಶ್ ಅವರು ಪ್ರಸಿದ್ಧ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದ ದಿ. ಡಾ.ಮಾಲತಿ ಭಟ್ ಅವರ ಪುತ್ರರಾಗಿದ್ದರು. ಪಂದ್ಯಾಟದ ವೇಳೆ ಇವರು […]