ಅಣಬೆ ಬಂತು ಅಣಬೆ: ಕಾರ್ಕಳದಲ್ಲಿ ಕೆ.ಜಿ ಗೆ ರೂ.400-500: ಖಾದ್ಯ ಪ್ರಿಯರಿಂದ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಕಾರ್ಕಳ: ಅಲ್ಪಸ್ವಲ್ಪ ಮಳೆ, ಆಗಾಗ ಮಿಂಚುತ್ತಿರುವ ಸಿಡಿಲು, ಬೇಸಗೆಯಲ್ಲಿ ಉರಿದ ಬಿಸಿಲಿಗೆ ಕಾದು ಕೆಂಡವಾದ ಭೂಮಿ ತಣ್ಣಗಾಗುತ್ತಿದ್ದು, ಈ ನಡುವೆ ಮಳೆಗಾಲದ ಪ್ರಥಮ ಪ್ರಾಕೃತಿಕ ಬಳುವಳಿ ಎಂಬಂತಿದೆ ಈ ಕಲ್ಲಣಬೆ.  ವಾಡಿಕೆ ಪ್ರಕಾರ ಸಿಡಿಲು ಸಹಿತ ಮಳೆಗಾಲ ಆರಂಭವಾಗಿ ತರಗೆಲೆಗಳು ಕೊಳೆಯುವ ಸ್ಥಿತಿ ತಲುಪುತ್ತಿದ್ದಂತೆ ಈ ಕಲ್ಲಣಬೆ ತಲೆಯೆತ್ತಲು ಆರಂಭಿಸುತ್ತದೆ. ಮಳೆಯ ಸೀಸನ್ ಆರಂಭವಾಗುತ್ತಲೇ ತಾಲೂಕಿನ ರೆಂಜಾಳ ಹಾಗೂ ಸುತ್ತಮುತ್ತಲಿನ ಭಾಗದಿಂದ ಈ ಕಲ್ಲಣಬೆ ಕಾರ್ಕಳ ಪೇಟೆಯನ್ನು ಪ್ರವೇಶಿಸಲಾರಂಭಿಸುತ್ತದೆ. ಬಲು ಅಪರೂಪದ ಈ ರುಚಿಕರವಾದ ಕಲ್ಲಣಬೆ ಖರೀದಿಗೆ […]

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಯೋಗ ದಿನಾಚರಣೆ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ (ಹರಿದ್ವಾರ) ಉಡುಪಿ ಜಿಲ್ಲೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ (ರಾಜಾಂಗಣ), ಶ್ರೀ ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ ಉಡುಪಿ, ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ, ಸಿದ್ಧ ಸಮಾಧಿಯೋಗ ಉಡುಪಿ, ಶ್ರೀ ಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಇವರು ಆಯೋಜಿಸಿರುವ 5 ನೇ ಅಂತರಾಷ್ಟ್ರೀಯ  ಯೋಗ ದಿನಾಚರಣೆ ಕಾರ್ಯಕ್ರಮ ಶುಕ್ರವಾರ ಜರಗಿತು.  ಪರ್ಯಾಯ […]

ಕಾರ್ಕಳ: ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಕಳ ಇದರ ಸೇವಾ ಕೇಂದ್ರದಲ್ಲಿ ಅಂತರ್‌ರಾಷ್ಟೀಯ ಯೋಗದಿನಾಚರಣೆಯ ಶುಕ್ರವಾರ  ಜರಗಿತು. ಸೇವಾಕೆಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ವಿಜಯಲಕ್ಷ್ಮೀ ಅವರು, ಯೋಗಸಾನದಿದ ಶಾರಿರೀಕ ಆರೋಗ್ಯವನ್ನು ಪಡೆಯಬಹುದು. ಮನಸ್ಸು ಆರೋಗ್ಯವಾಗಿ ಇಡಲು ಧ್ಯಾನ (ರಾಜಯೋಗ) ಅವಶ್ಯವೆಂದು ತಿಳಿಸಿದರು. ಹಾಗೂ ಉಚಿತ ರಾಜಯೋಗವನ್ನು ಕಲಿಯಲು ಭೇಟಿಯಾಗಬಹುದು ಎಂದು ತಿಳಿಸಿದರು.

ಧರ್ಮಸ್ಥಳ: 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಧರ್ಮಸ್ಥಳ: 5ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಯೋಗ ದಿನಾಚರಣೆಯನ್ನು ಆಯೋಜಿಸಲಾಯಿತು.ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಒಂದು ಸಾವಿರ ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ಮೂಲಕ ವಿಶ್ವಯೋಗ ದಿನಾಚರಣೆಯಲ್ಲಿ ನಡೆಯಿತು.ರಾಷ್ಟ್ರೀಯ ಸೇವಾಯೋಜನೆಯ ಪ್ರತಿನಿಧಿಗಳು, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ನಡೆಯಿತು. ಈ ಸಂದರ್ಭ ರಾಜ್ಯ ಸಣ್ಣನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ಮಾಜಿ ಶಾಸಕ ಅಭಯಚಂದ್ರ ಜೈನ್‌ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ […]

ಕಾರ್ಕಳದಲ್ಲಿ 10,000 ಸಸಿಗಳ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ : ತಂತ್ರಜ್ಞಾನ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಅಭಿವೃದ್ಧಿ ಚಟುವಟಿಕೆಗೆ ಕೊನೆಯಿಲ್ಲ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ಈ‌ ಜಗತ್ತಿನಲ್ಲಿ ಅಭಿವೃದ್ಧಿ ಬಹಳ ವೇಗವಾಗಿ ಬೆಳೆಯುತ್ತಿವೆ. ಭೂಮಿಯಲ್ಲಿ ‌ನೀರಿಲ್ಲ ,ಒಳ್ಳೆಯ ಗಾಳಿ ಸಿಗಲ್ಲ ಎಂದಾಗ ಜನಪ್ರತಿನಿಧಿಯಾಗಲಿ ಯಾವುದೇ ಸರಕಾರ ಏನು ಮಾಡಲು ಸಾದ್ಯವಿಲ್ಲ. ಗಿಡಗಳನ್ನು‌ ನೆಟ್ಟು ಪರಿಸರವನ್ನು ಉಳಿಸೋಣ ಸ್ವರ್ಣ ಕಾರ್ಕಳ ಸ್ವಚ್ಛ ‌ಕಾರ್ಕಳ ನಿರ್ಮಾಣ ಮಾಡುವ ಕಡೆಗೆ ಎಲ್ಲರ ಸಹಕಾರ ಅಗತ್ಯ ಎಂದು ಕಾರ್ಕಳ ಶಾಸಕ‌ ಹಾಗೂ ವಿರೋಧ ಪಕ್ಷದ ಮುಖ್ಯಸಚೇತಕ ವಿ ಸುನಿಲ್ […]