ಮೋದಿ ನೇತೃತ್ವದ ‘ಒಂದೇ ದೇಶ, ಒಂದೇ ಚುನಾವಣೆ’ ಸಭೆಗೆ 5 ಪಕ್ಷಗಳ ನಾಯಕರು ಗೈರು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ‘ನೀತಿ ಆಯೋಗದ’ ಕುರಿತ ಸರ್ವ ಪಕ್ಷಗಳ ಸಭೆಗೆ ಕಾಂಗ್ರೆಸ್, ಮಮತಾ ಬ್ಯಾನರ್ಜಿ, ಮಾಯಾವತಿ ಹಾಗೂ ಇತರ 5 ಪಕ್ಷಗಳ ನಾಯಕರು ಗೈರಾಗಿದ್ದಾರೆ. ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಕುರಿತು ನಡೆಯುತ್ತಿರುವ ‘ನೀತಿ ಆಯೋಗ’ದ ಸಭೆಗಳಿಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ವಿವಿಧ ಐದು ಪಕ್ಷಗಳ ನಾಯಕರು ಗೈರಾಗುವ ಮೂಲಕ ನಿರ್ಲಕ್ಷ್ಯ ವಹಿಸಿದ್ದಾರೆ.ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ಮಮತಾ […]
ಹೆಮ್ಮಾಡಿ: ಮೂವತ್ತುಮುಡಿ ನದಿಯಲ್ಲಿ ಮೃತದೇಹ ಪತ್ತೆ
ಹೆಮ್ಮಾಡಿ: ವ್ಯಕ್ತಿಯೋರ್ವನ ಮೃತದೇಹ ಬುಧವಾರ ಬೆಳಗ್ಗೆ ಹೆಮ್ಮಾಡಿ ಸಮೀಪದ ಮೂವತ್ತುಮುಡಿ ನದಿಯಲ್ಲಿ ಪತ್ತೆಯಾಗಿದೆ. ಪಡುಕೋಣೆ ನಿವಾಸಿ ನಾರಾಯಣ ಚಂದನ್ (60) ಮೃತ ದುರ್ದೈವಿ. ಪತ್ನಿಯ ಮನೆಗೆ ಹೋಗುತ್ತೇನೆಂದು ಸೋಮವಾರ ಪಡುಕೋಣೆಯ ತಮ್ಮ ಮನೆಯಿಂದ ತೆರಳಿದ್ದ ನಾರಾಯಣ ಚಂದನ್ ಸಂಜೆ ಅರಾಟೆಯಲ್ಲಿರುವ ತಮ್ಮ ಪತ್ನಿಯ ಮನೆಗೆ ಬಂದಿದ್ದರು. ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ತರಾತುರಿಯಲ್ಲಿದ್ದ ಅವರು ರಾತ್ರಿ ಪತ್ನಿಯ ಮನೆಯಲ್ಲೇ ಉಳಿದುಕೊಂಡಿದ್ದು, ಮಂಗಳವಾರ ಬೆಳಗ್ಗೆ ಪತ್ನಿಯ ಮನೆಯಿಂದ ವೃದ್ದಾಪ್ಯ ವೇತನಕ್ಕೆ ಅರ್ಜಿ ನೀಡಲು ತೆರಳುತ್ತೇನೆಂದು ಹೇಳಿ ಹೋದವರು ಮತ್ತೆ […]
ಮೊಬೈಲ್ ಟವರ್ ಕೆಳಗಡೆ ತರಕಾರಿ ಗಿಡ ನೆಟ್ಟು ಪ್ರತಿಭಟನೆ, 8 ತಿಂಗಳಿಂದ ನೆಟ್ವರ್ಕ್ ವ್ಯತ್ಯಯ
ಮಂಗಳೂರು: ಮೊಬೈಲ್ ನೆಟ್ವರ್ಕ್ ವ್ಯತ್ಯಯ ಆಗುತ್ತಿರುವುದರಿಂದ ಬೇಸತ್ತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಗ್ರಾಮಸ್ಥರು ಮೊಬೈಲ್ ಟವರ್ ಬಳಿ ತರಕಾರಿ ಗಿಡಗಳನ್ನು ನೆಡುವ ಮೂಲಕ ವಿನೂತನ ಶೈಲಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಬಿಎಸ್ಎನ್ಎಲ್ ಮೊಬೈಲ್ ಟವರ್ ಕಳೆದ ಎಂಟು ತಿಂಗಳಿಂದ ಸರಿಯಾಗಿ ಕಾರ್ಯಾಚರಿಸುತ್ತಿರಲಿಲ್ಲ. ಇದರಿಂದ ಹರಿಹರ, ಬಾಳುಗೋಡು, ಐನಕಿದು, ಕಲ್ಲೇಮಠ, ಕಲ್ಲೇರಿಕಟ್ಟ, ಮಿತ್ತಮಜಲು, ಕಿರಿಭಾಗ ಮೊದಲಾದ ಭಾಗದ ಜನತೆ ತೊಂದರೆ ಅನುಭವಿಸುತ್ತಿದ್ದರು. ಟವರು ಸಿಗ್ನಲ್ ಸಮಸ್ಯೆ […]
ಮಂಚಿಕೆರೆ: ಭೂಮಿ ಬಿರುಕುಬಿಟ್ಟ ಸ್ಥಳದಲ್ಲಿ ಅಧಿಕಾರಿಗಳಿಂದ ಪರಿಶೀಲನೆ
ಉಡುಪಿ: ಐದು ವರ್ಷಗಳ ಹಿಂದೆ ಬಡಗುಬೆಟ್ಟು ಗ್ರಾಪಂ ವ್ಯಾಪ್ತಿಯ ಮಣಿಪಾಲ–ಅಲೆವೂರು ರಸ್ತೆಯ ಮಂಚಿಕೆರೆ ಎಂಬಲ್ಲಿರುವ ನಾಗಬ್ರಹ್ಮಸ್ಥಾನದ ಎದುರಿನ ಎರಡನೇ ಅಡ್ಡರಸ್ತೆಯ ಭೂಮಿಯಲ್ಲಿ ಕಾಣಿಸಿಕೊಂಡಿದ್ದ ಬಿರುಕು ಇದೀಗ ಹಿಗ್ಗಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಬಿರುಕು ಬಿಟ್ಟಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಾನ್ಜಿ ನಾಯ್ಕ್ ನೇತೃತ್ವದಲ್ಲಿ ಭೂ ವಿಜ್ಞಾನಿಗಳಾದ ಮಹೇಶ್, ಡಾ. ಮಹದೇಶ್ವರ, ಗೌತಮ್ ಶಾಸ್ತ್ರಿ, ಸಂಧ್ಯಾ, […]
ಜೂನ್ 22 : ಮಹತ್ವದ ಕವಿ ದಿ.ರಮೇಶ ಹೆಗಡೆಯವರ ಗಜಲ್ ಸಂಕಲನ ಶಿರಸಿಯಲ್ಲಿ ಬಿಡುಗಡೆ
ಕರಾವಳಿ: ಮಹತ್ವದ ಕವಿ, ಜೀವನೋತ್ಸಾಹದ ಚಿಲುಮೆಯಂತಿದ್ದ ಶಿರಸಿಯ ರಮೇಶ ಹೆಗಡೆಯವರ ಗಜಲ್ ಸಂಕಲನ ಜೂನ್ 22 ರಂದು ಶಿರಸಿಯ ನಯನ ಸಭಾಂಗಣದಲ್ಲಿ ಅನಾವರಣಗೊಳ್ಳಲಿದೆ. ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಥೆಗಾರ ಡಾ. ಶ್ರೀಧರ ಬಳಗಾರ ರಮೇಶ ಹೆಗಡೆಯವರ ಕವಿತೆಗಳ ಕುರಿತು ಮಾತನಾಡಲಿದ್ದಾರೆ. ಡಾ.ಶಿವರಾಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕುಮಟಾದ ಸ್ವಸ್ತಿ ಪ್ರಕಾಶನ ಪುಸ್ತಕ ಪ್ರಕಟಿಸಿದೆ. ಸ್ಟಿಯೋ ಜೆನಿಸಿಸ್ ಇಂಪರ್ಪೆಕ್ಟಾ ಎಂಬ ಅತಿ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ರಮೇಶ ಹೆಗಡೆ ಜೀವನೋತ್ಸಾಹದ ಚಿಲುಮೆ. ಬಾಲ್ಯದಿಂದ ಇದುವರೆಗೂ […]