ಕಾರ್ಕಳ: ರಸ್ತೆ, ಚರಂಡಿಗಳ ಮೇಲೆ ಕಟ್ಟಡ ಸಾಮಾಗ್ರಿ ಸಂಗ್ರಹಣೆ ತೆರವುಗೊಳಿಸಿ

ಉಡುಪಿ, ಜೂನ್ 14: ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ನಡೆಸುವವರು ರಸ್ತೆ ಹಾಗೂ ಚರಂಡಿಗಳ ಮೇಲೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಸಂಗ್ರಹಿಸಿಡುವುದರಿಂದ ಮಳೆ ನೀರು ಹರಿದು ಹೋಗಲು ತೋದರೆಯಾಗುತ್ತಿದ್ದು, ಸಾರ್ವಜನಿಕ ರಸ್ತೆ ಹಾಗೂ ಚರಂಡಿ ಮೇಲೆ ಯಾವುದೇ ಕಟ್ಟಡ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದರೆ ತಕ್ಷಣ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಮಳೆಗಾಲ ಮುಗಿಯುವವರೆಗೆ ರಸ್ತೆ ಮೇಲೆ ಸಾಮಾಗ್ರಿಗಳನ್ನು ಸಂಗ್ರಹಿಸದಂತೆ ಮತ್ತು ಹಾಕಿ ಸಂಗ್ರಹಿಸಿದ್ದಲ್ಲಿ ಪುರಸಭೆ ಯಾವುದೇ ಸೂಚನೆ ನೀಡದೇ ತೆರವುಗೊಳಿಸಿ, ದಂಡ […]

ಜುಲೈ 12 ರಿಂದ ಮುಕ್ತ ವಿಶ್ವ ವಿದ್ಯಾಲಯ ಪರೀಕ್ಷೆ

ಉಡುಪಿ, ಜೂನ್ 14: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಉಡುಪಿ ಮತ್ತು ಮಂಗಳೂರಿನಲ್ಲಿ 2018-19ನೇ ಸಾಲಿನಲ್ಲಿ ಪ್ರವೇಶಾತಿ ಹೊಂದಿರುವ ಪ್ರಥಮ ಬಿ.ಎ/ಬಿ.ಕಾಂ/ಬಿ.ಲಿಬ್.ಐ.ಎಸ್ಸಿ/ಎಂ.ಕಾಂ/ಎಂ.ಲಿಬ್.ಐಎಸ್ಸಿ ಮತ್ತು ಎಂಸ್ಸಿ(ಪ್ರಥಮ ಸಿಮಿಸ್ಟರ್) ವಿದ್ಯಾರ್ಥಿಗಳಿಗೆ ಮತ್ತು 2011-12 ಮತ್ತು 2012-13ರಲ್ಲಿ ಬಿ.ಎ/ಬಿ.ಕಾಂ ಗೆ ಪ್ರವೇಶಾತಿ ಹೊಂದಿ ಅನುತೀರ್ಣಗೊಂಡಿರುವ ಅಥವಾ ಪರೀಕ್ಷೆಯನ್ನು ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ ಜುಲ್ಯೆ 12 ರಿಂದ ಕರಾಮುವಿಯ ಪರೀಕ್ಷೆಗಳು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯುತ್ತವೆ. ವಿದ್ಯಾರ್ಥಿಗಳು ಆನ್‍ಲ್ಯೆನ್ ಮತ್ತು ಆಪ್‍ಲ್ಯೆನ್ ಎರಡು ವಿಧದಲ್ಲೂ ಪರಿಕ್ಷೆಯನ್ನು ಕಟ್ಟಬಹುದಾಗಿದೆ. ಪರೀಕ್ಷೆ ಬಗೆಗಿನ ಮಾಹಿತಿಗಾಗಿ ಕರಾಮುವಿ […]

ಸಿಆರ್ ಝಡ್ ಮರಳು ದಿಬ್ಬ ತೆರವು ನಿಷೇಧ

ಉಡುಪಿ, ಜೂನ್ 14: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ 2018-19 ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ 45 ಜನ ಸ್ಥಳೀಯ ಸಾಂಪ್ರದಾಯಿಕ ಮರಳು ಪರವಾನಗೆದಾರರಿಗೆ ಪರವಾನಿಗೆ ನೀಡಿ ಮರಳು ದಿಬ್ಬ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ಅವರಿಗೆ ನಿಗಧಿಪಡಿಸಿರುವ ಪ್ರಮಾಣವು ಮುಗಿದಿರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 1 ರಿಂದ ಜುಲೈ 31 ರ ವರೆಗೆ ಮೀನುಗಾರಿಕೆ ನಿಷೇಧವಿರುವುದರಿಂದ ಈ ಅವಧಿಯಲ್ಲಿ ಸಿಆರ್ ಝಡ್ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವುದು ನಿಷೇಧವಿರುತ್ತದೆ. ಆದ್ದರಿಂದ ಅವಧಿಯಲ್ಲಿ ಯಾವುದೇ ಮರಳು ದಿಬ್ಬ […]

ಕಲ್ಲುಕೋರೆಯಲ್ಲಿ ಅವಘಡ ನಡೆದರೆ ಕ್ರಿಮಿನಲ್ ಪ್ರಕರಣ

ಉಡುಪಿ, ಜೂನ್ 14: ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲು ಗಣಿಗುತ್ತಿಗೆದಾರರಿಗೆ ಹಾಗೂ ಈಗಾಗಲೇ ಅವಧಿ ಮುಗಿದಿರುವ ಈ ಹಿಂದೆ ನಿರ್ವಹಿಸಿದ ಕಲ್ಲು ಗಣಿಗುತ್ತಿಗೆದಾರರೂ ಸಹ ಕಲ್ಲುಕೋರೆಗಳ ಸುತ್ತಲೂ ತಂತಿ ಬೇಲಿ ಅಳವಡಿಸಿ, ಅಪಾಯ ಪ್ರದೇಶ ಎಂಬ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸಲು ಸೂಚಿಸಿದೆ. ಅವಧಿ ಮುಗಿದಿರುವ ಕಲ್ಲು ಗಣಿಗುತ್ತಿಗೆ ಪ್ರದೇಶದಲ್ಲಿ ಅವಘಡಗಳು ಸಂಭವಿಸಿದಲ್ಲಿ ಸಂಬಂಧಿಸಿದ ಕಲ್ಲು ಗಣಿಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಮಳೆಗಾಲದಲ್ಲಿ ಜಿಲ್ಲೆಯ ಕಲ್ಲು ಕೋರೆಗಳು ಹಾಗೂ ಈ ಹಿಂದೆ ನಿರ್ವಹಿಸಿದ ಕಲ್ಲು ಕೋರೆ […]

ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕು: ಬಸ್ರೂರು ರಾಜೀವ್ ಶೆಟ್ಟಿ

ಉಡುಪಿ, ಜೂನ್ 14: ರಕ್ತದಾನದ ಮಾಡುವ ಮೂಲಕ ಯಾವುದೇ ಖರ್ಚು ಇಲ್ಲದೇ ಜನರ ಪ್ರಾಣವನ್ನು ಉಳಿಸಬಹುದು. ಆದ್ದರಿಂದ ಯುವ ಜನತೆ ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮ್ಯಾನೆಜಿಂಗ್ ಕಮಿಟಿ ಮೆಂಬರ್ ಬಸ್ರೂರು ರಾಜೀವ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಶುಕ್ರವಾರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಘಟಕದ ವತಿಯಿಂದಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ […]