ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಧರ್ಮಾಧ್ಯಕ್ಷರ ಭೇಟಿ
ಕುಂದಾಪುರ:ವಿದ್ಯಾರ್ಥಿಗಳು ಗುರುಹಿರಿಯಗೆ ಗೌರವ ನೀಡಿ ಆದರ್ಶ ವಿದ್ಯಾರ್ಥಿಗಳಾಗಿ, ಒಳ್ಳೆಯ ನಡತೆಯಿಂದ ಬದುಕಬೇaಕಾಗಿದೆ.ನೆಲ ಜಲ ರಕ್ಷಣೆಗೆ ಆಧ್ಯತೆ ನೀಡಬೇಕಾಗಿದ್ದು,ಒಳ್ಳೆಯ ಕಾರ್ಯದಿಂದ ದೇವರ ಆಶೀರ್ವಾದ ಲಭಿಸುತ್ತದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕ,ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು ಅತೀ ವಂ.ಫಾ.ಸ್ಟ್ಯಾನಿ ತಾವ್ರೊ,ಸಹಾಯಕ ಧರ್ಮಗುರು ಫಾ.ರೋಯ್ ಲೋಬೊ, ನೂತನ ಸಹಾಯಕ […]
ಗಂಗೊಳ್ಳಿ :ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಸನ್ನಿಧಿಗೆ ಪಾದಯಾತ್ರೆ
ಗಂಗೊಳ್ಳಿ : ಗೌಡ ಸಾರಸ್ವತ ಸಮಾಜದ ಹನ್ನೆರೆಡು ಮಂದಿ ಗಂಗೊಳ್ಳಿಯ ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವರ ಸನ್ನಿಧಿಯಿಂದ ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಸನ್ನಿಧಿಗೆ ಗುರುವಾರ ಪಾದಯಾತ್ರೆ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಯಾತ್ರಾರ್ಥಿಗಳು ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಸನ್ನಿಧಾನಕ್ಕೆ ಪಾದಯಾತ್ರೆ ಆರಂಭಿಸಿದರು. ಗೌಡ ಸಾರಸ್ವತ ಸಮಾಜದ ಉನ್ನತಿ, ಗ್ರಾಮದ ಶ್ರೇಯೋಭಿವೃದ್ಧಿ, ಮತ್ಸ್ಯಕ್ಷಾಮ ನಿವಾರಣೆ ಹಾಗೂ ಗ್ರಾಮದಲ್ಲಿ ಸರ್ವರಿಗೂ […]
ಜೂ.30 ;ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್
ಕರಾವಳಿಯಲ್ಲಿ ಇದೇ ಮೊಟ್ಟಬಾರಿಗೆ ಯುವ ಜನತೆಯ ಪ್ರತಿಭೆಗೊಂದು ಸುವರ್ಣಾವಕಾಶ.ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್ ಸೀಸನ್ 1 ಕಾರ್ಯಕ್ರಮ ತಾ. 30ರ ಜೂನ್ ತಿಂಗಳಿನಲ್ಲಿ ಫೋರಮ್ ಫೀಝ ಮಾಲ್ನಲ್ಲಿ ನಡೆಯಲಿದೆ . ಮ್ಯೂಸಿಷಿಯನ್,ಡ್ಯಾನ್ಸರ್ಸ್,ಸಿಂಗರ್ಸ್,ರಾಪ್ಪೆರ್ಸ್,ಆಕ್ಟರ್ಸ್, ಆರ್ಟಿಸ್ಟ್,ಕಾಮೆಡಿಯನ್ಸ್,ಮ್ಯಾಜಿಷಿಯನ್ಸ್,ಇತ್ಯಾದಿ ಪ್ರತಿಭೆಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ . ನಿಮ್ಮ ಪ್ರತಿಭೆಗೆ ಇದು ಸೂಕ್ತ ವೇದಿಕೆ : ಯುವ ಜನತೆಯಲ್ಲಿ ವಿಶೇಷ ಪ್ರತಿಭೆ ಗುರುತಿಸುವುದು ಮತ್ತು ಅವರಿಗೊಂದು ಸೂಕ್ತ ವೇದಿಕೆ ಕಲ್ಪಿಸುವ ಹಾಗು ಯುವಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ . ಬರೀ ಕರಾವಳಿ ಜನತೆ ಮಾತ್ರವಲ್ಲ, […]