ಕರಾವಳಿಗೆ ವರುಣನ ಕೃಪೆ, ತುಂಬಿ ಹರಿಯುತ್ತಿರುವ ನೇತ್ರಾವತಿ… ಕಡಲ್ಕೊರೆತದಿಂದ ತತ್ತರಿಸುತ್ತಿರುವ‌ ಕರಾವಳಿ

ಮಂಗಳೂರು: ನೀರಿಲ್ಲದೇ ಕಂಗೆಟ್ಟಿದ್ದ ಕರಾವಳಿಯಲ್ಲಿ ಕಡೆಗೂ ವರುಣ ದೇವ ಕೃಪೆ ತೋರಿದ್ದಾನೆ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ನೀರಿಲ್ಲದೇ ಒಣಗಿದ್ದ ನೇತ್ರಾವತಿ ನದಿ ತುಂಬಿ‌ ಹರಿಯುತ್ತಿದೆ. ಆದರೆ ಕೆಲವೆಡೆ ಮಳೆಯಿಂದಾಗಿ ಗುಡ್ಡ ಕುಸಿದಂತ ಅವಾಂತರ ಸಂಭವಿಸಿದೆ. ಸಮುದ್ರ ಪ್ರಕ್ಷುಬ್ಧಗೊಂಡು ಕಡಲ್ಕೊರೆತ ಉಂಟಾಗಿ ಕಡಲ ತೀರದ ಮನೆಗಳು ಅಪಾಯದ ಅಂಚಿನಲ್ಲಿವೆ. ಈ ಅತೀ‌ಹೆಚ್ಚು ಮಳೆ ಬೀಳುವ ಕರಾವಳಿಯಲ್ಲಿ ಈ ಬಾರಿ ನೀರಿಗಾಗಿ ಆಹಾಕಾರ ಶುರುವಾಗಿತ್ತು. ಶಾಲಾ ಕಾಲೇಜುಗಳಲ್ಲಿ ನೀರಿಲ್ಲದೇ ವಿದ್ಯಾರ್ಥಿಗಳ […]

ಕಡಬ: ಬಸ್-ಬೈಕ್ ಢಿಕ್ಕಿ ಸವಾರ ಸ್ಥಳದಲ್ಲೇ ಸಾವು

ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕಡಬ ತಾಲೂಕಿನ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯದಲ್ಲಿ ಗುರುವಾರ ಸಂಭವಿಸಿದೆ.ಬಲ್ಯ ಮದ್ರಾಡಿ ನಿವಾಸಿ ರಾಮಚಂದ್ರ ಗೌಡ ಎಂಬವರ ಪುತ್ರ ಸುಬ್ರಹ್ಮಣ್ಯ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಮೋಕ್ಷಿತ್(21) ಮೃತಪಟ್ಟವರು.ಮೋಕ್ಷಿತ್ ತನ್ನ ಪಲ್ಸರ್ ಬೈಕಿನಲ್ಲಿ ಬಲ್ಯದಿಂದ ಕಡಬಕ್ಕೆ ತೆರಳುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿಯುಂಟಾಗಿ ಈ ದುರ್ಘಟನೆ ಸಂಭವಿಸಿದೆ‌.

ಕೊಣಾಜೆ: ಬೈಕ್ – ಬಸ್ ಢಿಕ್ಕಿ ಬೈಕ್ ಸವಾರ ಸಾವು

ಮಂಗಳೂರು: ಬೈಕ್ -ಬಸ್ ನಡುವೆ ರಸ್ತೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಕೊಣಾಜೆ ಬಳಿ ಗುರುವಾರ ಸಂಭವಿಸಿದೆ.ಪಜೀರು ಗ್ರಾಮದ ಕಂಬಳಪದವು ನಿವಾಸಿ ಅರ್ಶಿತ್ ಶೆಟ್ಟಿ (21) ಮೃತಪಟ್ಟರು. ಡಿಕ್ಕಿಯಾದ ರಭಸದಲ್ಲಿ ಬೈಕ್ ಸವಾರನ ತಲೆಯ ಮೇಲಿನಿಂದ ಬಸ್ ಸರಿದಿದ್ದು, ಗಂಭೀರ ಗಾಯಗೊಂಡ ಅವರು‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಣಿಪಾಲ : ಹೊಸ ಶಿಕ್ಷಣ ನೀತಿಯ ಕರಡು:ವಿಶೇಷ ಉಪನ್ಯಾಸ

ಮಣಿಪಾಲ: ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಇವರ ಆಶ್ರಯದಲ್ಲಿ   ಜೂ.14 ರಂದು ಮಧ್ಯಾಹ್ನ 3.30ಕ್ಕೆ ಮಾನವ ಸಂಪನ್ಮೂಲಗಳ ಸಚಿವಾಲಯದ  ‘ಹೊಸ ಶಿಕ್ಷಣ ನೀತಿಯ ಕರಡು’ ವಿಷಯದ ಕುರಿತು ವಿಶೇಷ ಉಪನ್ಯಾಸ ಓಲ್ಡ್ ಟ್ಯಾಪ್ಮಿ ಕಟ್ಟಡದಲ್ಲಿನ ಸರ್ವೋದಯ ಹಾಲ್ ನಲ್ಲಿ ನಡೆಯಲಿದೆ. ನಡೆಯಲಿದೆ. ಈ ಉಪನ್ಯಾಸವನ್ನು  ಅರ್ಥಶಾಸ್ತ್ರಜ್ಞರಾದ ಡಾ.ರಶ್ಮಿ ಭಾಸ್ಕರನ್ ನಡೆಸಿಕೊಡಲಿದ್ದಾರೆ.   

ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ ಎನ್.ಮಂಜಯ್ಯ ಶೆಟ್ಟಿ ನೇಮಕ

ಕುಂದಾಪುರ:  ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಕರ್ನಾಟಕ ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕರಾಗಿ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ನೇಮಕಗೊಂಡಿದ್ದಾರೆ.ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಳೆದ ಕೆಲವು ದಶಕಗಳಿಂದ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಗತಿಪರ ಕೃಷಿಕರಾಗಿ ಕೃಷಿಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಹುಣ್ಸೆಮಕ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಇವರು ರಾಜಕೀಯ, ಕೃಷಿ, ಸಹಕಾರ, ಹೈನುಗಾರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾ ಜೆಡಿಎಸ್‌ನ ಹಿರಿಯ ಉಪಾಧ್ಯಕ್ಷರಾಗಿರುವ ಇವರು, ಉಡುಪಿ ಜಿಲ್ಲಾ […]