ಸಿರೊಹಿ: ಹಸಿವಿನಿಂದ ಬಳಲಿದ ಮಂಗಗಳಿಗೆ ಹಾಲುಣಿಸಿದ ಹಸು..!
ರಾಜಸ್ಥಾನ: ರಾಜಸ್ಥಾನದ ಸಿರೊಹಿಯಲ್ಲಿ ಭಾರೀ ಬಿಸಿಲಿನಿಂದಾಗಿ ಜನಸಾಮಾನ್ಯರ ಜತೆಗೆ ಪ್ರಾಣಿಗಳೂ ತತ್ತರಿಸಿದ್ದು, ಬಿಸಿಲು ಮತ್ತು ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿವೆ. ಹೀಗೆ ಬಳಲಿದ ಮಂಗಗಳಿಗೆ ಹಸುವೊಂದು ಹಾಲುಣಿಸಿದ ಅಚ್ಚರಿಯ ಸಂಗತಿ ನಡೆದಿದೆ. ಸಿರೋಹಿ ಜಿಲ್ಲೆಯ ಪಿಂಡ್ವಾಲಾ ಪ್ರದೇಶದಲ್ಲಿ ವಿಪಿನ್ ಸಮೀಪದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ಇರುವ ಹಸು ಮಂಗಗಳಿಗೆ ಹಾಲುಣಿಸಿ ಭಾರೀ ಸುದ್ದಿಯಾಗಿದೆ. ಹಲವು ವರ್ಷಗಳಿಂದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿಯೇ ವಾಸಿಸುತ್ತಿರುವ ಈ ಹಸು ಪ್ರತಿನಿತ್ಯ ಮಂಗಗಳಿಗೆ ಹಾಲು ನೀಡಿ ಅವುಗಳ ಜೀವ ಉಳಿಸಿದೆ. […]