ಮಂಗಳೂರು: ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ದುರ್ಮರಣ
ಮಂಗಳೂರು: ವಿದ್ಯುತ್ ದುರಸ್ಥಿ ಮಾಡಿದ ಬಳಿಕ ಪೂರೈಕೆ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ಸಾವನ್ನಪ್ಪಿರುವ ಘಟನೆ ದ.ಕ. ಜಿಲ್ಲೆಯ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ಬುಧವಾರ ಸಂಭವಿಸಿದೆ. ಮೂಲತಃ ದಾವಣಗೆರೆ ನಿವಾಸಿ ಮಿಟ್ಯಾ ನಾಯಕ್(35), ಮೃತಪಟ್ಟ ದುರ್ದೈವಿ. ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಇವರು ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಪವರ್ ಮೆನ್ ಆಗಿದ್ದರು. ಇಂದು ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಲಾಗಿತ್ತು. ದುರಸ್ಥಿಯ ಬಳಿಕ ಲೈನ್ ಚಾರ್ಜ್ […]
ಕುಮಾರದಾರ ನದಿಯಲ್ಲಿ ಮುಳುಗಿ ಬಾಲಕ ಸಾವು
ಮಂಗಳೂರು: ಕುಮಾರಧಾರ ನದಿಯಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರು ಸಮೀಪದ ಶಾಂತಿಮೊಗರಲ್ಲಿ ಸಂಭವಿಸಿದೆ. ಸವಣೂರು ಸಮೀಪದ ಪರಣೆ ನಿವಾಸಿ ಅಶ್ಬಾಕ್ ಮೃತಪಟ್ಟ ಬಾಲಕ. ಈತ ಸವಣೂರು ಸ.ಪ.ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದು, ಇಂದು ಸ್ನೇಹಿತರೊಂದಿಗೆ ಶಾಂತಿಮೊಗರು ಸೇತುವೆಯ ಬಳಿ ಸ್ನಾನಕ್ಕೆ ಹೋಗಿದ್ದ. ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಸುಳಿಗೆ ಸಿಲುಕಿದ ಈತ ಕೂಡಲೇ ನೀರಿನಲ್ಲಿ ನಾಪತ್ತೆಯಾಗಿದ್ದಾನೆ. ಬಳಿಕ ಸ್ಥಳೀಯರು ಬಾಲಕನ ಶವಕ್ಕಾಗಿ ಹುಡುಕಾಟ ನಡೆಸಿದ್ದು, ಕೆಲ ಹೊತ್ತಿನ ಬಳಿಕ ಶವ ಪತ್ತೆಯಾಗಿದೆ. […]
ಮಹಿಳಾ ಶಕ್ತಿ ಕೇಂದ್ರಕ್ಕೆ ಸಿಬ್ಬಂದಿಗಳ ಆಯ್ಕೆ – ಅರ್ಜಿ ಆಹ್ವಾನ
ಉಡುಪಿ:: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 2019-20 ನೇ ಸಾಲಿನಲ್ಲಿ ಅನುಷ್ಟಾನಗೊಳ್ಳಲಿರುವ ಮಹಿಳಾ ಶಕ್ತಿ ಕೇಂದ್ರಯೋಜನೆಯಡಿ, ಜಿಲ್ಲೆಯಲ್ಲಿ ಒಬ್ಬರು ಮಹಿಳಾ ಕಲ್ಯಾಣಾಧಿಕಾರಿ ಹುದ್ದೆಗೆಹ್ಯುಮಾನಿಟೀಸ್/ಸಮಾಜವಿಜ್ಞಾನ, ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ,ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದ ಅನುಭವ ಹೊಂದಿರುವ, ಕಂಪ್ಯೂಟರ್ ಬಳಕೆಬಗ್ಗೆ ಪ್ರಾವೀಣ್ಯತೆ ಇರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ 35000 ರೂ. ಗೌರವಧನ ಆಧಾರದಲ್ಲಿ ಹಾಗೂ ಜಿಲ್ಲಾ ಸಂಯೋಜನಾಧಿಕಾರಿಯ ಎರಡು ಹುದ್ದೆಗಳಿಗೆ ಹ್ಯುಮಾನಿಟೀಸ್/ಸಮಾಜವಿಜ್ಞಾನ, ಸಮಾಜ ಕಾರ್ಯದಲ್ಲಿ ಪದವಿ ಹೊಂದಿದ, ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದ ಅನುಭವ […]
ಉಡುಪಿ: ನಗರಸಭೆ- ರಸ್ತೆ ಅಗೆತ ನಿಷೇಧ
ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಟೆಲಿಫೋನ್, ವಿದ್ಯುತ್ ಕೇಬಲ್, ಕುಡಿಯುವ ನೀರು, ಒಳಚರಂಡಿ ಕೊಳವೆ ಇತ್ಯಾದಿಗಳನ್ನು ಅಳವಡಿಸಲು ರಸ್ತೆ ಅಗೆತವನ್ನು ಅಕ್ಟೋಬರ್ 15 ರ ವರೆಗೆ ನಿಷೇಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ರಕ್ಷಣಾಧಿಕಾರಿ ಹುದ್ದೆ– ಅರ್ಜಿ ಆಹ್ವಾನ
ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಕಚೇರಿಯಲ್ಲಿ ಖಾಲಿ ಇರುವ ಮಕ್ಕಳ ರಕ್ಷಣಾಧಿಕಾರಿ ( ಅಸಾಂಸ್ಥಿಕ ) ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ ಮತ್ತು ಅನುಭವ: ಎಮ್.ಎಸ್.ಡಬ್ಲ್ಯೂ/ ಸೋಶಿಯೋಲಾಜಿ/ ಮನಃಶಾಸ್ತ್ರ/ ಸಮುದಾಯ ಅಭಿವೃದ್ದಿ, ಮಹಿಳಾ ಅಧ್ಯಯನ, ಗೃಹ ವಿಜ್ಞಾನ ಮತ್ತು ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕುರಿತು ಕನಿಷ್ಟ 3 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವಲ್ಲಿ ಹಾಗೂ […]