ಉಡುಪಿ: ಸರ್ವ ಧರ್ಮ ಈದ್ ಆಚರಣೆ

ಉಡುಪಿ: ಹಿಂಸೆ, ದ್ವೇಷ, ಭಯೋತ್ಪಾದನೆ ಹಾಗೂ ಮನುಷ್ಯ ಪ್ರೇರಿತ ವೈಚಾರಿಕತೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಆದ್ದರಿಂದ ಎಲ್ಲ ಧರ್ಮಗಳು ಸೇರಿ ಇಂತಹಸಮಸ್ಯೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಹೂಡೆ ಮಹಮ್ಮದೀಯ ಎಜುಕೇಶನಲ್ ಟ್ರಸ್ಟ್‌ನ ಉಪಾಧ್ಯಕ್ಷ ಮಹಮ್ಮದ್ ಇದ್ರಿಸ್ ಹೂಡೆ ಹೇಳಿದರು.ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಸರ್ವ ಧರ್ಮ ಈದ್ ಆಚರಣೆ […]
ಉಡುಪಿ: ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಅಭಿನಂದನೆ

ಉಡುಪಿ : ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ತರ ಯೋಜನೆಯಾದ ಸುವರ್ಣಗೋಪುರ ಶಿಖರಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಸಾಧನಗೋಪುರಮ್ ಕಾರ್ಯಕ್ರಮದಲ್ಲಿ ನಮ್ಮ ನಾಡಿನ ಹಾಗೂ ಉಡುಪಿಯ ಭಕ್ತಾದಿಗಳ,ವಿಪ್ರ ಭಾಂದವರ ಪರವಾಗಿ, ಸುವರ್ಣ ಗೋಪುರವನ್ನು ನಿರ್ಮಿಸಿ ಕೃಷ್ಣ ದೇವರಿಗೆ ಅರ್ಪಿಸಿದ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಉಡುಪಿಯ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹೊರೆಕಾಣಿಕೆ ವ್ಯವಸ್ಥೆಯನ್ನು ನಿರ್ವಹಿಸಿದ ಪರಿಷತ್ತಿನ ಪದಾಧಿಕಾರಿಗಳಾದ ರಂಜಾನ್ […]
ರಾಷ್ಟ್ರೀಯ ಹೆದ್ದಾರಿಯ ಪುತ್ತಿಗೆ ಸೇತುವೆಯ ಕುತ್ತಿಗೆ ಉಳುಕಿದೆ !ರಿಪೇರಿಯಾಗದಿದ್ದರೆ ಇನ್ನೇನು ಕುಸಿದು ಬೀಳತ್ತೆ ಪುತ್ತಿಗೆ ಸೇತುವೆ !

ಉಡುಪಿ: ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169A ಯ ಹಿರಿಯಡ್ಕದ ಪುತ್ತಿಗೆ ಸಮೀಪದ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಪುತ್ತಿಗೆ ಸೇತುವೆಯ ಕುತ್ತಿಗೆ ಉಳುಕಿ ತುಂಬಾ ಸಮಯವಾದರೂ ಅದನ್ನು ರಿಪೇರಿ ಮಾಡುವ ಗೋಜಿಗೆ ಈ ವರೆಗೆ ಯಾರೂ ಹೋಗಿಲ್ಲ. ಹಾಗಾಗಿ ಸೇತುವೆಯೇ ಇನ್ನೇನು ಮುರಿದು ಕುಸಿತದ ಹಾದಿಯಲ್ಲಿದೆ. ತಳ ಭಾಗದಲ್ಲಿ ಹಾಕಲಾಗಿದ್ದ ಆಧಾರ ಸ್ತಂಭಗಳು ಬೇರ್ಪಟ್ಟಿದೆ. ಎರಡು ಆಧಾರ ಸ್ತಂಭಗಳು ಕೆಳಭಾಗದಲ್ಲಿ ಕುಸಿದಿದ್ದು ಜನರು ಸೇತುವೆಯ ಮೇಲೆ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. 1950 ರ ದಶಕದಲ್ಲಿ […]
ವಿಶ್ವ ಪರಿಸರ ದಿನಾಚರಣೆ ಆಚರಣೆ

ಉಡುಪಿ, ಜೂನ್ 10: ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ವತಿಯಿಂದ ಜೂನ್ 8 ರಂದು ಮುಳ್ಳೂರು ತನಿಖಾ ಠಾಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಪ್ರಯಾಣಿಸುವ ಪ್ರವಾಸಿಗರು ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರ ಸ್ನೇಹಿ ಕಸ ಸಂಗ್ರಹಣಾ ಚೀಲದಲ್ಲಿ ಸಂಗ್ರಹಿಸಿ, ಮುಂದಿನ ತನಿಖಾ ಠಾಣೆಯಲ್ಲಿ ಇಲಾಖಾ ಸಿಬ್ಬಂದಿಗಳಿಗೆ ನೀಡುವ ಬಗ್ಗೆ ಪರಿಸರ ಸ್ನೇಹಿ ಕಸ ಸಂಗ್ರಹಣಾ ಚೀಲವನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿ, ಹೆದ್ದಾರಿಯಲ್ಲಿ ತೆರಳುವ ವಾಹನಗಳಿಗೆ ಸಾಂಕೇತಿಕವಾಗಿ […]
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಉಡುಪಿ, ಜೂನ್ 10: ಜಿಲ್ಲಾಡಳಿತ ಉಡುಪಿ ಜಿಲ್ಲೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ಕಾರ್ಮಿಕ ಇಲಾಖೆ ಉಡುಪಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ, ವಕೀಲರ ಸಂಘ(ರಿ.), ಉಡುಪಿ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಜೂನ್ 12 ರಂದು ಬೆಳಗ್ಗೆ 9.30 ಕ್ಕೆ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು […]