ಕಾರ್ಯಕರ್ತರ ಮೇಲೆ ಶಾಸಕ ಸುಕುಮಾರ್ ಶೆಟ್ಟಿ ಗರಂ: ಹಲ್ಲೆ ಆರೋಪ
ಕುಂದಾಪುರ: ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಒಂದಿಲ್ಲೊಂದು ವಿಚಾರಗಳಿಗೆ ಸದಾ ಸುದ್ದಿಯಾಗುತ್ತಲೇ ಇರುವ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಾರ್ ವಿವಾದ ಒಂದರ ಕುರಿತು ರಾಜಿ ಮಾತುಕತೆಗೆ ಮನೆಗೆ ಕರೆಯಿಸಿ ತಮ್ಮದೇ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾದ್ರಾ? ಬಂಟ್ ಸುಮುದಾಯದ ಇಬ್ಬರ ನಡುವೆ ಜಾಗದ ತಕರಾರೊಂದಕ್ಕೆ ನಡೆದ ಹಲ್ಲೆ ವಿಚಾರಕ್ಕೆ ಸಂಬಧಿಸಿದಂತೆ ಶಾಸಕ ಸುಕುಮಾರ ಶೆಟ್ಟಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಮಾತುಕತೆಗಾಗಿ […]
ಸುನಾಮಿ ಬಂದರೆ ಏನ್ ಮಾಡ್ಬೇಕು?:ಮಲ್ಪೆಯಲ್ಲಿ ಅಣುಕು ಪ್ರದರ್ಶನ
ಉಡುಪಿ: ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು ಮತ್ತು ಸಂಬಂದಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಕುರಿತ ಅಣುಕು ಪ್ರದರ್ಶನ ಶನಿವಾರ ಮಲ್ಪೆಯ ಹನುಮಾನ್ ಭಜನಾ ಮಂದಿರದ ಬಳಿ ನಡೆಯಿತು. ಅಣಕು ಪ್ರದರ್ಶನದಲ್ಲಿ ಬೆಳಗ್ಗೆ 10.40 ಕ್ಕೆ ಸುನಾಮಿ ಕುರಿತ ಎಚ್ಚರಿಕೆ ಸ್ವೀಕರಿಸಿದ ಕೂಡಲೇ 2 ನಿಮಿಷದ ಅವಧಿಯಲ್ಲಿ ಉಡುಪಿ ಅಗ್ನಿಶಾಮಕ ಇಲಾಖೆಯ 2 ವಾಹನಗಳು ಸಮುದ್ರ ತೀರದ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡುತ್ತಾ, ಸಮುದ್ರ ತೀರಕ್ಕೆ ಆಗಮಿಸಿದವು, […]
ನೀಟ್: ಕಾರ್ಕಳದ ಜ್ಞಾನಸುಧಾ ಕಾಲೇಜು ಸಾಧನೆ
ಕಾರ್ಕಳ: ಎಂಬಿಬಿಎಸ್ ಹಾಗೂ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪರೀಕ್ಷೆಯಾದ ರಾಷ್ಟ್ರ ಮಟ್ಟದ ನೀಟ್‌ನಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಒಟ್ಟು720 ಅಂಕಗಳಲ್ಲಿ ಇಬ್ಬರು ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 19 ವಿದ್ಯಾರ್ಥಿಗಳು 500ರಿಂದ 600ರ ನಡುವಿನ ಅಂಕಗಳನ್ನು, 23 ವಿದ್ಯಾರ್ಥಿಗಳು 400ರಿಂದ 500ರ ನಡುವಿನ ಅಂಕಗಳನ್ನು ಗಳಿಸಿದ್ದಾರೆ. ನವೀನ್ ಎಂ. ಪಾಟೀಲ್ – 617 ಅಂಕ, ಎಂ.ಎಸ್. ಸುಮುಖ ಮಂಜ – 600 ಅಂಕ ಗಳಿಸಿದ್ದಾರೆ.
ನೀಟ್ ಪರೀಕ್ಷೆ: ಮೂಡಬಿದಿರೆ ಎಕ್ಸಲೆಂಟ್ ಕಾಲೇಜು ಸಾಧನೆ
ಮೂಡಬಿದಿರೆ: ವೈದ್ಯಕೀಯ ಕೋರ್ಸುಗಳಿಗೆ ನಡೆದ ನೀಟ್ ಪ್ರವೇಶ ಪರೀಕ್ಷೆ ಯಲ್ಲಿ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪ.ಪೂ. ಕಾಲೇಜಿನಲ್ಲಿ ತಯಾರಿ ನಡೆಸಿದ 55 ವಿದ್ಯಾರ್ಥಿಗಳಲ್ಲಿ ಸಂತೋಷ್ ರೆಡ್ಡಿ 625, ಶ್ಲೋಕಶ್ರೀ 602 ಅಂಕ ಗಳಿಸಿದ್ದಾರೆ. ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಬಂದ 33 ವಿದ್ಯಾರ್ಥಿಗಳಿದ್ದ ನೀಟ್ ಪುನರಾವರ್ತಿತ ವಿದ್ಯಾರ್ಥಿಗಳ ಬ್ಯಾಚ್‌ನಲ್ಲಿ 6 ವಿದ್ಯಾರ್ಥಿಗಳು 500ಕ್ಕಿಂತಲೂ ಹೆಚ್ಚಿನ ಅಂಕವನ್ನು, 25 ವಿದ್ಯಾರ್ಥಿಗಳು 400ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ್ […]