ಶ್ರೀ ಕೃಷ್ಣ ಮಠದ ಐತಿಹಾಸಿಕ ಸುವರ್ಣ ಗೋಪುರ ಸಮರ್ಪಣೆ ಹಿನ್ನೆಲೆ, ಜೋಡುಕಟ್ಟೆಯಿಂದ ಅದ್ದೂರಿ ಮೆರವಣಿಗೆ ಮೂಲಕ ಹೊರಕಾಣಿಕೆ ಸಮರ್ಪಣೆ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಬ್ರಹ್ಮಕಲಶೋತ್ಸವ ಮತ್ತು ಐತಿಹಾಸಿಕ ಸುವರ್ಣ ಗೋಪುರ ಸಮರ್ಪಣೆ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಹಸಿರು ಹೊರೆ ಕಾಣಿಕೆ ಸಮರ್ಪಣೆ ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ನಡೆಯಿತು. ಕೆಎಂ ಮಾರ್ಗ, ಸಂಸ್ಕೃತ ಕಾಲೇಜು ರಸ್ತೆಯಿಂದ ಮೆರವಣಿಗೆ ಮೂಲಕ ಮೆರವಣಿಗೆ ಸಾಗಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ನಾಡಿನ ವಿವಿಧ ಭಾಗಗಳಿಂದ ಭಕ್ತಾದಿಗಳು ಹೊರೆಕಾಣಿಕೆ ನೀಡಿದ್ದು, ಮಂಗಳೂರು, ಸುರತ್ಕಲ್, ನೀಲಾವರ, ಬೈಕಾಡಿ, ಬ್ರಹ್ಮಾವರ ಸೇರಿದಂತೆ […]
ಉಡುಪಿ: ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ
ಉಡುಪಿ: ಭಾರತ ಸರ್ಕಾರ, ವಿಶ್ವವಿದ್ಯಾನಿಲಯ ಅನುದಾನ ಆಯೋಗ ಮತ್ತು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ಮಂಡಳಿ ಇವುಗಳ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕರಾಮುವಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿದೆ. ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವು ಭಾರತ ಸರ್ಕಾರದ ಸ್ಕಿಲ್ ಇಂಡಿಯಾದ ಭಾಗವಾಗಿದ್ದು, ತರಬೇತಿಯಲ್ಲಿ ಆಡಳಿತ ಕನ್ನಡ, ಇಂಗ್ಲಿಷ್ ಫಾರ್ ಕಮ್ಯುನಿಕೇಷನ್ ಎಂಡ್ ಸಾಫ್ಟ್ ಸ್ಕಿಲ್ಸ್, ವೆಬ್ ಡಿಸೈನಿಂಗ್, ಕಂಪ್ಯೂಟರ್ ಫಂಡಮೆಂಟಲ್ಸ್, ಡೆಸ್ಕ್ಟಾಪ್ ಪಬ್ಲಿಶಿಂಗ್, ಮಲ್ಟಿಮೀಡಿಯಾ, ಬೇಸಿಕ್ ಆಫ್ ನೆಟ್ವರ್ಕಿಂಗ್ ಮುಂತಾದ ಕೋರ್ಸುಗಳಿಗೆ ಸಂಬಂಧಿಸಿದಂತೆ ಕರಾಮುವಿ ಕಲಿಕಾರ್ಥಿ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ […]
ಸೂಪರ್ ಸ್ಟಾರ್ ರಜನಿಕಾಂತ್ ‘2.0’ ಚೀನಾದ 55 ಸಾವಿರ ಸ್ಕ್ರೀನ್ ನಲ್ಲಿ ಬಿಡುಗಡೆ
ಮುಂಬಯಿ: ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾ ದೊಡ್ಡ ಸದ್ದು ಮಾಡಿಲ್ಲ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಗಳಿಕೆಯಲ್ಲಿ ಹಿಂದೆ ಬೀಳದ ರೋಬೋ 2 ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಮಾಡಿದೆ. 543 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಸುಮಾರು 800 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು. 2018ರ ಸೆಪ್ಟೆಂಬರ್ 29 ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ರಜನಿ ಎದುರು ಅಬ್ಬರಿಸಲಿದ್ದಾರೆ ಇಬ್ಬರು ಖಡಕ್ ಖಳನಾಯಕರು ಇದೀಗ, 2.0 […]
ಯಶ್ ಕೆಜಿಎಫ್-2 ನಲ್ಲಿ ಬಾಲಿವುಡ್ ನಟಿ ಅಭಿನಯ ಖಚಿತ.!
ಬೆಂಗಳೂರು: ಈಗಾಗಲೇ ಕೆಜಿಎಫ್ ಚಿತ್ರದಲ್ಲಿ ಮಿಂಚಿರುವ ಯಶ್ ಮುಂದಿನ ವಾರದಿಂದ ‘ಕೆಜಿಎಫ್ 2’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ‘ಕೆಜಿಎಫ್ 2’ ಶೂಟಿಂಗ್ ಆರಂಭವಾಗಿದ್ದು, ಜೂ. 6ರಂದು ಯಶ್ ಕೆಜಿಎಫ್ ತಂಡವನ್ನ ಸೇರಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೆ ಕೆಜಿಎಫ್ 2 ಚಿತ್ರಕ್ಕಾಗಿ ಬಾಲಿವುಡ್ ನ ಈ ನಟಿ ಬರೋದು ಬಹುತೇಕ ಖಚಿತ ಎನ್ನಲಾಗಿದೆ. ಕೆಜಿಎಫ್ ಚಾಪ್ಟರ್-2 ಕಥೆಯಲ್ಲಿ ಬರಲಿರುವ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಬರೋದು ಖಚಿತ ಎನ್ನಲಾಗಿದೆ. 1970-80 ಕಾಲಘಟ್ಟದ ಪ್ರಧಾನಮಂತ್ರಿ ಪಾತ್ರದಲ್ಲಿ ರವೀನಾ ನಟಿಸಲಿದ್ದಾರಂತೆ. […]
ಸಾಲಿಗ್ರಾಮ ಪ.ಪಂ: ವಸತಿ ನಿರ್ಮಾಣಕ್ಕೆ ಸಹಾಯಧನ
ಉಡುಪಿ, ಜೂನ್ 4: 2018-19 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ಸರಕಾರದಿಂದ 20 ಮನೆಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ಹೊಸ ಮನೆ ನಿರ್ಮಿಸಲು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತರು ಮನೆ ನಿರ್ಮಿಸಲು ಸಹಾಯ ಧನ ಪಡೆಯಬಹುದಾಗಿರುತ್ತದೆ. ಆಸಕ್ತರು ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಜೂನ್ 30 ರ ಒಳಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ಗೆ ದಾಖಲೆ ಸಮೀತ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸದ್ದಾರೆ.