ಸಚಿವ ಸ್ಥಾನದ ಆಸೆ ನನಗಿಲ್ಲ :ಶೋಭಾ ಕರಂದ್ಲಾಜೆ
ಉಡುಪಿ: ನಾನು ಸಚಿವ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ಅಲ್ಲ. ರಾಜ್ಯದ ಸಂಸದರ ಪೈಕಿ ನಾನು ಜೂನಿಯರ್. ರಾಜ್ಯದಿಂದ ಹಲವಾರು ಹಿರಿಯ ಸಂಸದರು ಆಯ್ಕೆಯಾಗಿದ್ದಾರೆ. ನಾನು ಸಚಿವಸ್ಥಾನದ ಅಪೇಕ್ಷೆ ಪಡುವುದೂ ಇಲ್ಲ ಎಂದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಉಡುಪಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಲ್ಲ ಭಾಷೆಯನ್ನು ಕಲಿಯಲು ಮುಕ್ತ ಅವಕಾಶ ಕಲ್ಪಿಸಬೇಕು. ಹಿಂದಿ ಹೇರಿಕೆಗೆ ಆಕ್ಷೇಪ ಮಾಡುವವರು ರಾಜ್ಯದಲ್ಲಿ ಕನ್ನಡ ಕಡ್ಡಾಯ ಮಾಡಲಿ ನೋಡೋಣ. ಕನ್ನಡದ ಬೆಳವಣಿಗೆಗೆ ಆದ್ಯತೆ ನೀಡುವಂತಾಗಲಿ ಎಂದರು. ಕನ್ನಡದ ಬೆಳವಣಿಗೆ ಆಗಿಲ್ಲ: ಸಿದ್ದರಾಮಯ್ಯನವರ ಸರ್ಕಾರದಲ್ಲಿ […]
ಕುಂದಾಪುರ ನಗರ ಪ್ರವೇಶಿಸಲು ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕು!: ಪೊಲೀಸ್ ಇಲಾಖೆ ಕಾರ್ಯವೈಖರಿಗೆ ಸವಾರರ ಆಕ್ರೋಶ
ಶ್ರೀಕಾಂತ ಹೆಮ್ಮಾಡಿ ಕುಂದಾಪುರ: ಇಲ್ಲಿಗೆ ಪ್ರವೇಶ ಕಲ್ಪಿಸುವ ಪ್ರಮುಖ ರಸ್ತೆ ಚಿಕನ್‌ಸಾಲ್ ಪ್ರವೇಶ ಹಾದಿಗೆ ಪೊಲೀಸ್ ಇಲಾಖೆ ತಡೆಬೇಲಿ ನಿರ್ಮಿಸಿದ್ದರಿಂದ ವಾಹನಗಳು ಪೇಟೆಗೆ ಬರಬೇಕಾದರೆ ಶಾಸ್ತ್ರೀ ಸರ್ಕಲ್ ಪ್ರವೇಶಿಸಿ ಬರಬೇಕು. ಒಟ್ಟಿನಲ್ಲಿ ವಾಹನ ಸವಾರರು ಕುಂದಾಪುರ ನಗರ ಪ್ರವೇಶಿಸಬೇಕಾದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವೈಜ್ಞಾನಿಕ ತಡಬೇಲಿ ಹಾಕಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ವಿರುದ್ದ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಸಮೀಪದ ದಾರಿ ಚಿಕನ್‌ಸಾಲ್: ಚಿಕನ್‌ಸಾಲ್ ರಸ್ತೆ ಭಟ್ಕಳ, ಶಿರೂರು, ಬೈಂದೂರು ಕಡೆಗಳಿಂದ ಸಾಗಿ […]